ಐಪಿಎಲ್ 2024ಗೆ ಹೊಸ ಹೈರ್‌ಸ್ಟೈಲ್, ಆಕರ್ಷಕ ಲುಕ್‌ನೊಂದಿಗೆ ಬೆಂಗಳೂರಿಗೆ ಎಂಟ್ರಿಕೊಟ್ಟ ಹೀರೋ!

First Published | Mar 19, 2024, 3:39 PM IST

ಐಪಿಎಲ್ 2024 ಟೂರ್ನಿಗೆ ಕ್ರಿಕೆಟಿಗರು ತಯಾರಿ ನಡೆಸುತ್ತಿದ್ದಾರೆ. ಇತ್ತ ಭರ್ಜರಿ ತಯಾರಿಯೊಂದಿಗೆ ವಿರಾಟ್ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ ಈ ಈಬಾರಿಯ ಟೂರ್ನಿಗೆ ಕೊಹ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯ ಹೊಸ ಮೊಹ್ವಕ್ ಹೇರ್‌ಸ್ಟೈಲ್ ಹಾಗೂ ನ್ಯೂ ಲುಕ್ ಹೇಗಿದೆ? ಇಲ್ಲಿದೆ ಹೀರೋ ಫೋಟೋಸ್.
 

ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಗೆಲ್ಲುವ ಮೂಲಕ ಇದೀಗ ಬೆಂಗಳೂರು ಕ್ರಿಕೆಟ್ ಅಭಿಮಾನಿಗಳ ಕಾತುರ ಮತ್ತಷ್ಟು ಹೆಚ್ಚಾಗಿದೆ. ಐಪಿಎಲ್ 2024 ಟೂರ್ನಿಯಲ್ಲಿ ಪುರುಷರ ತಂಡ ಕೂಡ ಕಪ್ ಗೆಲ್ಲಲಿದೆ ಅನ್ನೋ ವಿಶ್ವಾಸ ಹೆಚ್ಚಾಗಿದೆ. ಈ ಟೂರ್ನಿಗಾಗಿ ಕೊಹ್ಲಿ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
 

2024ರ ಐಪಿಎಲ್ ಟೂರ್ನಿಗೆ ವಿರಾಟ್ ಕೊಹ್ಲಿ ಹೊಸ ಹೇರ್‌ಸ್ಟೈಲ್ ಮಾಡಿದ್ದಾರೆ. ಮೊಹ್ವಕ್ ಹೇರ್ ಕಟ್ ಮಾಡಿಸಿಕೊಂಡಿರುವ ವಿರಾಟ್ ಕೊಹ್ಲಿ ಮತ್ತಷ್ಟು ಹ್ಯಾಂಡ್ಸಮ್ ಆಗಿದ್ದಾರೆ.
 

Tap to resize

ಕೇವಲ ಮೋಹ್ವಕ್ ಹೇರ್‌ಸ್ಟೈಲ್ ಮಾತ್ರವಲ್ಲ, ಐಬ್ರೋ ಮೇಲೆ ಒಂದು ಗೆರೆಯನ್ನೂ ಎಳೆದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಕೊಂಚ ಯೋ ಲುಕ್‌ನತ್ತ ಹೊರಳಿದ್ದಾರೆ. 
 

ಹೊಸ ಹೇರ್‌ಸ್ಟೈಲ್‌ನೊಂದಿಗೆ ವಿರಾಟ್ ಕೊಹ್ಲಿ ಬೆಂಗಳೂರಿಗೆ ಎಂಟ್ರಿಕೊಟ್ಟಿದ್ದಾರೆ. ಕೊಹ್ಲಿ ಹೇರ್‌ಸ್ಟೈಲ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
 

ಪ್ರಖ್ಯಾತ ಹೇರ್‌ಸ್ಟೈಲ್ ಡಿಸೈನರ್ ಅಲೀಮ್ ಹಕೀಮ್ ನೂತನ ಹೇರ್‌ಸ್ಟೈಲ್ ಮಾಡಿಸಿದ್ದಾರೆ. ಈ ಹೇರ್‌ಸ್ಟೈಲ್ ಕೊಹ್ಲಿ ಲುಕ್ ಮತ್ತಷ್ಟು ಆಕರ್ಷಕವಾಗಿಸಿದೆ.
 

ಐಪಿಎಲ್ ಟೂರ್ನಿಗೆ ಕ್ರಿಕೆಟಿಗರು ಹೊಸ ಹೊಸ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಲ್ಳುವುದು ಸಾಮಾನ್ಯ. ಆದರೆ ಈ ಬಾರಿ ಕೊಹ್ಲಿಯ ಹೇರ್‌ಸ್ಟೈಲ್ ಹಲವು ಅಭಿಮಾನಿಗಳು ಕಾಪಿ ಮಾಡಲಿದ್ದಾರೆ.
 

ಈಗಾಗಲೇ ಕೊಹ್ಲಿ ಮಾಡಿಸಿರುವ ಮೊಹ್ವಕ್ ಹೇರ್‌ಸ್ಟೈಲ್‌ನತ್ತ ಕ್ರಿಕೆಟ್ ಅಭಿಮಾನಿಗಳು ಒಲವು ತೋರುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಗಾಗಲೇ ಮೋಹ್ವಕ್ ಹೇರ್‌ಸ್ಟೈಲ್ ಅಭಿಮಾನಿಗಳು ಕಾಣಸಿಗುತ್ತಿದ್ದಾರೆ.

ಮಾರ್ಚ್ 22ರಂದು ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯ ಚೆನ್ನೈನಲ್ಲಿ ಆಯೋಜನೆಯಾಗಿದೆ.  

Latest Videos

click me!