IPL 2021; ಆರ್‌ಸಿಬಿ ನಾಯಕತ್ವ ತ್ಯಜಿಸಲು ಪತ್ನಿ ಅನುಷ್ಕಾ ಕಾರಣ?ಸ್ಟೇನ್ ಸ್ಫೋಟಕ ಹೇಳಿಕೆ!

Published : Sep 21, 2021, 08:20 PM IST

ಕೊಹ್ಲಿ ಆರ್‌ಸಿಬಿ ನಾಯಕತ್ವ ತ್ಯಜಿಸಿದ ಹಿಂದಿನ ಕಾರಣ ನಾಯಕತ್ವ ತ್ಯಜಿಸಿದ ಕಾರಣ ಕೇಳಿದ ಡೇಲ್ ಸ್ಟೇನ್ ಸಂದರ್ಶನದಲ್ಲಿ ಸ್ಫೋಟಕ ಹೇಳಿಕೆ ನೀಡಿದ ಸ್ಟೇನ್

PREV
17
IPL 2021; ಆರ್‌ಸಿಬಿ ನಾಯಕತ್ವ ತ್ಯಜಿಸಲು ಪತ್ನಿ ಅನುಷ್ಕಾ ಕಾರಣ?ಸ್ಟೇನ್ ಸ್ಫೋಟಕ ಹೇಳಿಕೆ!

IPL 2021 ಟೂರ್ನಿ ಆರಂಭದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal challengers Bengaluru) ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್ ಸರಣಿ ಎಂದು ಕೊಹ್ಲಿ ಘೋಷಿಸಿದ್ದರು. ಕೊಹ್ಲಿ ದಿಢೀರ್ ನಾಯಕತ್ವಕ್ಕೆ ವಿದಾಯ ಹೇಳಿದ್ದು ಯಾಕೆ ಅನ್ನೋ ಚರ್ಚೆ ಶುರುವಾಗಿತ್ತು. ಇದೀಗ ಸೌತ್ ಆಫ್ರಿಕಾ ಮಾಜಿ ಕ್ರಿಕೆಟಿಗ ಡೇಲ್ ಸ್ಟೇನ್ ಹೇಳಿಕೆ ಇದೀಗ ಚರ್ಚೆಗೆ ಹೊಸ ಆಯಾಮ ನೀಡಿದೆ.

27

ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಗುಡ್ ಬೈ ಹೇಳಲು ಕೊಹ್ಲಿ ಕುಟುಂಬ ಕಾರಣವಾಗಿದೆ ಎಂದು ಅನಿಸುತ್ತಿದೆ. ಕುಟುಂಬದ ಜವಾಬ್ದಾರಿ, ಕುಟುಂಬದ ಜೊತೆ ಒತ್ತಡವಿಲ್ಲದೆ ಸಮಯ ಕಳೆಯಲು ಕೊಹ್ಲಿ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.

37

ಇಎಸ್‌ಪಿಯನ್ ಕ್ರಿಕ್‌ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಡೇಲ್ ಸ್ಟೇನ್ ಕೊಹ್ಲಿ ಕುಟುಂಬ ಅಂದರೆ ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿಗೆ ಹೆಚ್ಚಿನ ಸಮಯವನ್ನು ಅರ್ಥಪೂರ್ಣವಾಗಿ ನೀಡಲು ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.
 

47

ಎಲ್ಲಾ ಮಾದರಿ ನಾಯಕತ್ವ, ಐಪಿಎಲ್ ಟೂರ್ನಿಯ ಒತ್ತಡದಿಂ ಕುಟುಂಬದ ಜೊತೆ ಆರಾಮವಾಗಿ ಕಳೆಯಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಕೊಹ್ಲಿ ಕುಟುಂಬಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಹೆಚ್ಚು. ಕೊಹ್ಲಿ ನಿರ್ಧಾರ ಸರಿಯಾಗಿದೆ ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.

57

ನಾಯಕತ್ವದಿಂದ ಹಿಂದೆ ಸರಿದ ಕಾರಣಕ್ಕೆ ಅಭಿಮಾನಿಗಳು ಬೇಸರ ಪಡಬೇಕಿಲ್ಲ. ಕೊಹ್ಲಿ ತನ್ನ ಬ್ಯಾಟಿಂಗ್‌ನತ್ತ ಹೆಚ್ಚು ಗಮನಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಇದು ಕೊಹ್ಲಿ ಕರಿಯರ್‌ ದೃಷ್ಟಿಯಿಂದಲೂ ಉತ್ತಮ ನಿರ್ಧಾರ. ಹೀಗಾಗಿ ಅಭಿಮಾನಿಗಳಿಗೆ ಮತ್ತಷ್ಟು ಸ್ಫೋಟಕ ಇನ್ನಿಂಗ್ಸ್ ನೋಡುವ ಸೌಭಾಗ್ಯ ಸಿಗಲಿದೆ ಎಂದು ಸ್ಟೇನ್ ಹೇಳಿದ್ದಾರೆ.

67

ಆರ್‌ಸಿಬಿ ನಾಯಕತ್ವಕ್ಕೆ ವಿದಾಯ ಘೋಷಿಸಿದ ಮೂರು ದಿನಕ್ಕೂ ಮೊದಲು ಟೀಂ ಇಂಡಿಯಾ ಟಿ20 ತಂಡದ ನಾಯಕತ್ವಕ್ಕೂ ಕೊಹ್ಲಿ ಗುಡ್‌ಬೈ ಹೇಳಿದ್ದರು. ಮುಂಬರುವ ಟಿ20 ವಿಶ್ವಕಪ್ ಟೂರ್ನಿ ಬಳಿಕ ನಾಯಕತ್ವದಲ್ಲಿ ಮುಂದುವರಿಯುವುದಿಲ್ಲ ಎಂದು ಪ್ರಕಟಿಸಿದ್ದಾರೆ.

77

ಮುಂಬರವ ದಿನಗಳಲ್ಲಿ ಕೊಹ್ಲಿ ಟೆಸ್ಟ್ ಹಾಗೂ ಏಕದಿನ ತಂಡದಕ್ಕೆ ಮಾತ್ರ ನಾಯಕನಾಗಿ ಮುಂದುವರಿಯಲಿದ್ದಾರೆ. ಈ ಮೂಲಕ ತನ್ನ ಮೇಲಿನ ಒತ್ತಡದ ಭಾರವನ್ನು ಕಡಿಮೆ ಮಾಡಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಕೊಹ್ಲಿ ನಾಯಕನಾಗಿ ಮುಂದುವರಿಯಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!

Recommended Stories