IPL 2021: ಹುಟ್ಟು ಹಬ್ಬ ಸಂಭ್ರಮದಲ್ಲಿ ಕ್ರಿಸ್ ಗೇಲ್, ಫ್ಯಾನ್ಸ್ ಮರೆತಿಲ್ಲ ಯೂನಿವರ್ಸ್ ಬಾಸ್ 6 ದಾಖಲೆ!

First Published | Sep 21, 2021, 4:05 PM IST
  • ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಗೇಲ್‌ಗೆ ಹುಟ್ಟು ಹಬ್ಬದ ಸಂಭ್ರಮ
  • 42ನೇ ವಸಂತಕ್ಕೆ ಕಾಲಿಟ್ಟ ಕ್ರಿಸ್ ಗೇಲ್, ಶುಭಾಶಯಗಳ ಮಹಾಪೂರ
  • ಯಾರೂ ಮರೆತಿಲ್ಲ ಕ್ರಿಸ್ ಗೇಲ್ ಐಪಿಎಲ್ ದಾಖಲೆ 
  • ಗೇಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಮೂಡಿ ಬಂದ 6 ಐಪಿಎಲ್ ದಾಖಲೆ ವಿವರ

ಟಿ20 ಕ್ರಿಕೆಟ್‌ಗೆ ಕ್ರಿಸ್ ಗೇಲ್(Chris Gayle) ಬಾಸ್. ಕಾರಣ ಚುಟುಕು ಕ್ರಿಕೆಟ್‌ನಲ್ಲಿ ಗೇಸ್ ಸುನಾಮಿಗೆ ಹಲವು ದಾಖಲೆಗಳು ನಿರ್ಮಾಣವಾಗಿದೆ. ಸಾಗರದಂತೆ ರನ್ ಹರಿದುಬಂದಿದೆ. ಸಿಕ್ಸರ್‌ನಲ್ಲೂ ದಾಖಲೆ ಬರೆದ ಕ್ರಿಕೆಟಿಗ ಗೇಲ್. ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಐಪಿಎಲ್ 2021(IPL 2021)ರ ಟೂರ್ನಿಗಾಗಿ ದುಬೈನಲ್ಲಿರುವ ಗೇಲ್, ತಂಡದ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಐಪಿಎಲ್ ಕ್ರಿಕೆಟ್ ಮನರಂಜನೆಯಲ್ಲಿ ಕ್ರಿಸ್ ಗೇಲ್ ಕೂಡುಗೆ ಅಪಾರ. ಇದೀಗ ಪಂಜಾಬ್ ಕಿಂಗ್ಸ್(Pujab Kings) ಹಾಗೂ ರಾಜಸ್ಥಾನ ರಾಯಲ್ಸ್(Rajasthan Royals) ನಡುವಿನ ಹೋರಾಟಕ್ಕೆ ಗೇಲ್ ಸಜ್ಜಾಗಿದ್ದಾರೆ. ಹುಟ್ಟು ಹಬ್ಬದ ಸಂದರ್ಭದಲ್ಲಿ ಕ್ರಿಸ್ ಗೇಲ್ ಐಪಿಎಲ್ ಟೂರ್ನಿಯಲ್ಲಿ ನಿರ್ಮಿಸಿದ ದಾಖಲೆ ಮತ್ತೆ ಮತ್ತೆ ನೆನಪಾಗುತ್ತಿದೆ.

Tap to resize

20211ರಿಂದ 2017ರ ವರೆಗೆ ಐಪಿಎಲ್ ಟೂರ್ನಿಯಲ್ಲಿ ಗೇಲ್ ಗೇಲ್ ಅದ್ಭುತ ಫಾರ್ಮ್‌ನಲ್ಲಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru)ತಂಡದ ಆಧಾರ ಸ್ಥಂಭವಾಗಿದ್ದ ಗೇಲ್ 6 ಶತಕ ಸಿಡಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಪಟ್ಟಿಯಲ್ಲಿ ಗೇಲ್‌ಗೆ ಮೊದಲ ಸ್ಥಾನ, 5 ಸೆಂಚುರಿ ಸಿಡಿಸಿದ ವಿರಾಟ್ ಕೊಹ್ಲಿ(Virat Kohli)ಗೆ ಎರಡನೇ ಸ್ಥಾನ.
 

ಐಪಿಎಲ್ ಟೂರ್ನಿಯಲ್ಲಿ 99 ರನ್ ಸಿಡಿಸಿ ಕೇವಲ 1 ರನ್‌ಗಳಿಂದ ಶತಕ ವಂಚಿತರಾದ ಕ್ರಿಕೆಟಿಗರ ಪೈಕಿ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್ 2 ಬಾರಿ 99 ರನ್ ಸಿಡಿಸಿ ಔಟಾಗಿದ್ದಾರೆ. ಎರಡು ಸಂದರ್ಭವನ್ನು ಶತಕಗಳಾಗಿ ಪರಿವರ್ತಿಸಿದ್ದರೆ, ಗೇಲ್ ಸೆಂಚುರಿ ಕೌಂಟ್ ಇದೀಗ 8ಕ್ಕೇರುತ್ತಿತ್ತು.

ಚುಟುಕು ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್ ಸ್ಟ್ರೈಕ್‌ರೇಟ್ ಅತೀ ಮುಖ್ಯ. ಇದರಲ್ಲಿ ಗೇಲ್ ನಂ.1. ಕಾರಣ ಬ್ಯಾಟಿಂಗ್ ಸರಾಸರಿ ಹಾಗೂ ಸ್ಟ್ರೈಕ್‌ರೇಟ್‌ನಲ್ಲಿ ಗೇಲ್ ಹಿಂದಿಕ್ಕಿವುದು ಸುಲಭದ ಮಾತಲ್ಲ. ಕ್ರಿಸ್ ಗೇಲ್ ಐಪಿಎಲ್ ಟೂರ್ನಿಯಲ್ಲಿ 4,950 ರನ್ ಸಿಡಿಸಿದ್ದಾರೆ. ಗೇಲ್ 40.00ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರೆ, 150ರ ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಅತೀ ವೇಗದಲ್ಲಿ 4,000 ರನ್ ಪೂರೈಸಿದ ಮೊದಲ ಕ್ರಿಕೆಟಿಗ ಕ್ರಿಸ್ ಗೇಲ್. 4 ಸಾವಿರ ರನ್ ಪೂರೈಸಲು ಗೇಲ್ 112 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. 2019ರ ಐಪಿಎಲ್ ಆವೃತ್ತಿಯಲ್ಲಿ ಗೇಲ್ 4,000 ರನ್ ಪೂರೈಕೆ ಮಾಡಿದ ಸಾಧನೆ ಮಾಡಿದ್ದಾರೆ. ಸದ್ಯ 4,950 ರನ್ ಸಿಡಿಸಿರುವ ಗೇಲ್‌ಗೆ 5,000 ರನ್ ಪೂರೈಸಲು ಕೇವಲ 50 ರನ್ ಅವಶ್ಯಕತೆ ಇದೆ.

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಕ್ರಿಸ್ ಗೇಲ್ ಹೆಸರಿಲ್ಲಿದೆ. 357 ಸಿಕ್ಸರ್ ಸಿಡಿಸಿರುವ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. 300 ಸಿಕ್ಸರ್ ಗಡಿ ದಾಟಿರುವ ಏಕೈಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್. ಎರಡನೇ ಸ್ಥಾನದಲ್ಲಿರುವ ಎಬಿ ಡಿವಿಲಿಯರ್ಸ್ 245 ಸಿಕ್ಸರ್ ದಾಖಲಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ವೈಯುಕ್ತಿಗ ಗರಿಷ್ಠ ಮೊತ್ತ ಸಿಡಿಸಿದ ದಾಖಲೆಯೂ ಕ್ರಿಸ್ ಗೇಲ್ ಹೆಸರಿಲ್ಲಿದೆ. 2013ರ ಆವೃತ್ತಿಯಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಪುಣೆ ವಾರಿಯರ್ಸ್ ವಿರುದ್ಧ 175 ರನ್ ಸಿಡಿಸಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 265 ರನ್ ಸಿಡಿಸಿತ್ತು. ಇನ್ನು 130 ರನ್ ಗೆಲುವು ಕಂಡಿತ್ತು.

Latest Videos

click me!