IPL 2021: ಐಪಿಎಲ್ ನೋಡೋದು ನಿಲ್ಲಿಸಲು ಸಾಕು ಈ ಐದು ಕಾರಣಗಳು!

First Published | Sep 21, 2021, 4:09 PM IST

IPL ಸಂಭ್ರಮ ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚು ದಿನ ಮುಂದುವರೆಯುತ್ತದೆ. ಕ್ರಿಕೆಟ್‌ ಅಭಿಮಾನಿಗಳಿಗೆ ಇದೊಂದು ಅತ್ಯಂತ ಪವಿತ್ರ ಕಾಲದಂತೆ. ಹೀಗಾಗೆ ಒಂದೂ ಪಂದ್ಯ ತಪ್ಪದೇ ವೀಕ್ಷಿಸುತ್ತಾರೆ. ಆದರೆ ಈ ಐಪಿಎಲ್‌ ಫೀವರ್‌ ಕೂಡಾ ಒಳ್ಳೆಯದಲ್ಲ ಎಂಬ ಮಾತಿದೆ. ಅಷ್ಟಕ್ಕೂ ಯಾಕೆ? ಇಲ್ಲಿವೆ ನೋಡಿ ಐದು ಕಾರಣ

90ರ ದಶಕದ ಮಕ್ಕಳಿಗೆ ಕ್ರಿಕೆಟ್‌(Cricket) ಬಗ್ಗೆ ವಿಭಿನ್ನ ಅನುಭವವಿರುತ್ತದೆ. ಮನೆಯವರೆಲ್ಲಾ ಒಟ್ಟಾಗಿ ಕುಳಿತು ಟಿವಿಯಲ್ಲಿ ಪಂದ್ಯ ವೀಕ್ಷಿಸಿ ಸಂಭ್ರಮಿಸುತ್ತಿದ್ದ ಕಾಲವದು. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ(IndVsPakistan) ಅಥವಾ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್‌ ಅಥವಾ ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಇರುತ್ತಿದ್ದ ಟೆನ್ಶನ್‌ ಅಷ್ಟಿಷ್ಟಲ್ಲ. 

ಆದರೀಗ, ಈ ಐಪಿಎಲ್‌(IPL)ನಿಂದಾಗಿ ಈ ಚಿತ್ರಣವೇ ಬದಲಾಗಿದೆ. ಅಂದಿನ ದಿನಗಳಿಗೂ, ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಂದಿನ ಐಪಿಎಲ್‌(IPL) ಪಂದ್ಯಗಳು ಕ್ರೀಡೆಗಳಾಗಿ ಉಳಿಯದೆ ಜಾಹೀರಾತುದಾರರಿಗೆ, ಬ್ರ್ಯಾಂಡ್‌ಗಳಿಗೆ ವೇದಿಕೆಯಾಗಿದೆ. ಅಷ್ಟಕ್ಕೂ ಐಪಿಎಲ್ ಪಂದ್ಯಗಳನ್ನು ನೋಡುವುದಕ್ಕೆ ಬ್ರೇಕ್ ಹಾಕಬೇಕು ಅನ್ನೋದೇಕೆ? ಇಲ್ಲಿದೆ ನೋಡಿ ಐದು ಕಾರಣಗಳು

Tap to resize

ಸಮಯ ವ್ಯರ್ಥ: ಇನ್ನೊಂದು ತಿಂಗಳು ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ಸಲುವಾಗಿ ಅನೇಕರು ತಮ್ಮ ಮನೆಯ ನಿಮ್ಮ ಟಿವಿ ಸೆಟ್‌ ಅಥವಾ ಒಟಿಟಿ(OTT) ಪ್ಲಾಟ್‌ಫಾರ್ಮ್‌ಗಳಿಗೆ ಅಂಟಿಕೊಂಡೇ ಇರುತ್ತಾರೆ. ಜಿಮ್‌ಗೆ, ಡಾನ್ಸ್‌ ಕ್ಲಾಸ್‌, ಯೋಗ ಹೀಗೆ ಇತರ ಚಟುವಟಿಕೆಗಳು ಕೆಲ ಸಮಯ ಮೂಲೆ ಸೇರಲಿದ್ದು, ಈ ವೇಳೆ ಕ್ರಿಕೆಟ್‌ ವೀಕ್ಷಣೆ ಆರಂಭವಾಗುತ್ತದೆ. ಹೀಗಿರುವಾಗ ಐಪಿಎಲ್‌ ವೀಕ್ಷಣೆ ಸಮಯ ವ್ಯರ್ಥ ಮಾಡಿದಂತಲ್ಲವೇ?

ಆಸಕ್ತಿ ಇಲ್ಲದಿರುವುದು: ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಇದೇ ರೀತಿ ಅತಿಯಾಗಿ ಕ್ರಿಕೆಟ್‌ ವೀಕ್ಷಣೆ, ಅದರ ಮೇಲಿನ ಆಸಕ್ತಿ ಕಳೆದುಕೊಳ್ಳುವಂತೆ ಮಾಡಬಹುದು. ಕೆಲವೊಮ್ಮೆ ಇದು ಕ್ರಿಕೆಟಿಗರ ಮೇಲೂ ಪರಿಣಾಮ ಬೀರುತ್ತದೆ. ಹೌದು ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರು ದೇಶವನ್ನು ಪ್ರತಿನಿಧಿಸುವ ಒಡಿಐ, ಟಿ20(T20), ವರ್ಲ್ಡ್‌ ಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಬಹುದು. 

ವಿಚ್ಛೇದನ ಅಥವಾ ಬ್ರೇಕಪ್: ಪ್ರತಿ ಸಂಜೆ, ರಾತ್ರಿ ನೀವು ಮೊಬೈಲ್ ಅಥವಾ ಟಿವಿ ಎದುರು ಕಳೆದರೆ ನೀವೇನು ಅಪೇಕ್ಷಿಸಲು ಸಾಧ್ಯ? ಇದರ ಬದಲಾಗಿ ನಿಮ್ಮ ಸಂಗಾತಿಯನ್ನು ಹೊರಗೆ ಕರೆದುಕೊಂಡು ಹೋಗಿ, ಸಿನಿಮಾಗೆ ಹೋಗಿ ಅಥವಾ ರುಚಿಯಾದ ಅಡುಗೆ ತಯಾರಿಸಿ... ಹೀಗೆ ಸಂಗಾತಿ ಜೊತೆ ಅತ್ಯುತ್ತಮ ಸಮಯ ಕಳೆಯಿರಿ. ಇದು ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲಿದೆ.

ಇದಕ್ಕೂ ಉತ್ತಮ ಆಯ್ಕೆಗಳಿವೆ: ಇನ್ನು ಮನರಂಜನೆ ಸಿಗುತ್ತದೆ ಎನ್ನುವವರಿಗೆ ವೀಕ್ಷಿಸಲು ಇನ್ನೂ ಅನೇಕ ಆಯ್ಕೆಗಳಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ವಿಡಿಯೋ ಅಥವಾ ಏಷ್ಯಾನೆಟ್‌(Asianet News) ಸುದ್ದಿಗಳನ್ನು ಓದಬಹುದು ಅಥವಾ ವೀಕ್ಷಿಸಬಹುದು.

tv screen

ಅವರನ್ನೇಕೆ ಶ್ರೀಮಂತರಾಗಿಸುತ್ತೀರಿ?: ಐಪಿಎಲ್‌ ಸೀಜನ್‌ ಜಾಹೀರಾತುದಾರರಿಗೆ ಹಾಗೂ ಬ್ರ್ಯಾಂಡ್‌ಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯತ್ತದೆ. [ಇನ್ನು ಈ ಜಾಹೀರಾತುಗಳು ವೀಕ್ಷಕರ ಮನ ಕೆಡಿಸುತ್ತವೆ ಎಂಬುವುದರಲ್ಲೂ ಅನುಮಾನಲವಿಲ್ಲ. 

Latest Videos

click me!