Virat Kohli ಮತ್ತೊಮ್ಮೆ ಐಪಿಎಲ್‌ನಲ್ಲಿ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಕಳೆದ ನಾಲ್ಕು ಐಪಿಎಲ್ ಸೀಸನ್‌ಗಳಲ್ಲಿ ಸತತವಾಗಿ 600+ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ.GT ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ 43 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ವಿರಾಟ್ ಕೊಹ್ಲಿ(Virat Kohli) ಪ್ರಾರಂಭಿಕ ಅಬ್ಬರದ ಬ್ಯಾಟಿಂಗ್ ಹಾಗೂ ನಂತರ ಬೌಲರ್‌ಗಳ ದಾಳಿಯಿಂದ ರಾಯಲ್ ಚಾಲೆಂಜರ್ಸ್(RCB) GT ಟೀಂನ ಬಗ್ಗುಬಡಿಯುವ ಮೂಲಕ ಐಪಿಎಲ್ 2026 ಫೈನಲ್‌ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. 255 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ ಎದುರು Gujarat Titans ಕೇವಲ 162 ರನ್‌ಗಳಿಗೆ ಆಲೌಟ್ ಆಯಿತು. ಧರ್ಮಶಾಲಾ ಸ್ಟೇಡಿಯಂನಲ್ಲಿ ಅಭಿಮಾನಿಗಳ ಕೂಗು, ಸಂಭ್ರಮ, ಭಾವನೆಗಳು ಎಲ್ಲವೂ ಒಂದೇ ಕ್ಷಣದಲ್ಲಿ ಮಿಶ್ರಣವಾದವು.
24
ಸತತ ನಾಲ್ಕು ಸೀಸನ್‌ಗಳಲ್ಲಿ 600+ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಕಿಂಗ್
ಈ ಪಂದ್ಯದಲ್ಲಿ ಕೊಹ್ಲಿ ಕೇವಲ 43 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೂ, ಅದೇ ಇತಿಹಾಸದ ಪುಟ ಸೇರಿತು. ಹೌದು ಐಪಿಎಲ್‌ನಲ್ಲಿ ಸತತ ನಾಲ್ಕು ಸೀಸನ್‌ಗಳಲ್ಲಿ 600+ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಅಪರೂಪದ ದಾಖಲೆ ಅವರದಾಯಿತು. ಕ್ರೀಸ್‌ನಲ್ಲಿ ಆತ್ಮವಿಶ್ವಾಸದಿಂದ ನಿಂತ ಕೊಹ್ಲಿ ಮತ್ತೊಮ್ಮೆ ತಾವು 'ಕಿಂಗ್ ಅನ್ನೋದು ಸಾಬೀತುಪಡಿಸಿದರು.
34
ನಾಲ್ಕು ವರ್ಷಗಳಿಂದ ರನ್ ಮಷೀನ್ ಆಗಿರುವ ಕೊಹ್ಲಿ!
ಕೊಹ್ಲಿಯ ರನ್ ಮಷಿನ್ ಎಂದೇ ಖ್ಯಾತಿ, ಕಳೆದ ನಾಲ್ಕು ವರ್ಷಗಳಿಂದಲೂ ಈ ವಿಚಾರದಲ್ಲಿ ಅವರ ಎನರ್ಜಿ ಕುಂದಿಲ್ಲ. ಇದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. 2023ರಲ್ಲಿ 639 ರನ್, 2024ರಲ್ಲಿ 741 ರನ್, 2025ರಲ್ಲಿ 657 ರನ್ ಗಳಿಸಿದ್ದ ಅವರು, ಈ ಸೀಸನ್‌ನಲ್ಲೂ 600ರ ಗಡಿ ದಾಟಿದ್ದಾರೆ. ಪ್ರತಿ ವರ್ಷವೂ ಒತ್ತಡದ ನಡುವೆ ತಂಡಕ್ಕೆ ಭರವಸೆಯಾಗಿ ನಿಂತಿರುವ ಕೊಹ್ಲಿ, ಆರ್‌ಸಿಬಿಯ ನಿಜವಾದ ಶಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ.
ಇದಕ್ಕೂ ಮೊದಲು ಕ್ರಿಸ್ ಗೇಲ್ (Chris Gayle) ಮತ್ತು ಕೆಎಲ್ ರಾಹುಲ್ (KL Rahul) ಮಾತ್ರ ಸತತ ಮೂರು ಐಪಿಎಲ್ ಸೀಸನ್‌ಗಳಲ್ಲಿ 600+ ರನ್ ಗಳಿಸಿದ್ದರು. ಆದರೆ ಈಗ ಕೊಹ್ಲಿ ಆ ದಾಖಲೆಗೂ ಮೀರಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಕೇವಲ ರನ್‌ಗಳಲ್ಲ, ಅವರ ಸ್ಥಿರತೆ, ಆಟದಲ್ಲಿನ ಅವರ ಸಮರ್ಪಣಾ ಭಾವ ಈಗ ಯುವ ಆಟಗಾರರಿಗೆ ದೊಡ್ಡ ಪ್ರೇರಣೆಯಾಗಿರುವುದು ನಿಜ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.