2025ರ ಏಷ್ಯಾ ಕಪ್ ಟಿ20 ಮಾದರಿಯಲ್ಲಿ ನಡೆಯಲಿದೆ. 2024ರ ಟಿ20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ.
25
ರೋಹಿತ್, ಕೊಹ್ಲಿ ನಿವೃತ್ತಿ
2024ರ ಟಿ20 ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಮತ್ತು ರೋಹಿತ್ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. 2025ರಲ್ಲಿ ಟೆಸ್ಟ್ ಕ್ರಿಕೆಟ್‌ಗೂ ವಿದಾಯ ಹೇಳಿದರು. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಇನ್ನೂ ಆಡ್ತಿದ್ದಾರೆ.
35
2027ರ ವಿಶ್ವಕಪ್‌ವರೆಗೂ ರೋಹಿತ್ ನಾಯಕ?
ರೋಹಿತ್ ಶರ್ಮಾ ಈಗಲೂ ಭಾರತದ ಏಕದಿನ ನಾಯಕ. 2023ರ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದರು. 2025ರ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಹೀಗಾಗಿ 2027ರ ವಿಶ್ವಕಪ್‌ನಲ್ಲೂ ನಾಯಕರಾಗಿರುತ್ತಾರೆ. ಕೊಹ್ಲಿ ಕೂಡ ತಂಡದಲ್ಲಿರುತ್ತಾರೆ.
ಕೊಹ್ಲಿ, ರೋಹಿತ್ ಜೊತೆಗೆ ರವೀಂದ್ರ ಜಡೇಜಾ ಕೂಡ 2025ರ ಏಷ್ಯಾ ಕಪ್‌ನಲ್ಲಿ ಆಡೋದಿಲ್ಲ. 2024ರ ಟಿ20 ವಿಶ್ವಕಪ್ ನಂತರ ಜಡೇಜಾ ಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
55
ಏಷ್ಯಾ ಕಪ್ 2025: ಇಂಡಿಯಾ vs ಪಾಕ್ ಹೈವೋಲ್ಟೇಜ್ ಪಂದ್ಯ
2025ರ ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ಏಷ್ಯಾ ಕಪ್ ನಡೆಯಲಿದೆ. ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಆಡಲಿದೆ. ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಹೈವೋಲ್ಟೇಜ್ ಪಂದ್ಯವಿದೆ.