ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ರಿಷಭ್ ಪಂತ್ ಗಾಯಗೊಂಡು ಐದನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಕ್ರಿಸ್ ವೋಕ್ಸ್ ಎಸೆತವನ್ನು ರಿವರ್ಸ್ ಸ್ವೀಪ್ ಆಡಲು ಯತ್ನಿಸಿದಾಗ ಪಂತ್‌ರ ಬಲಗಾಲಿಗೆ ಪೆಟ್ಟಾಯಿತು. ತಕ್ಷಣ ಶೂ ತೆಗೆದು ನೋಡಿದಾಗ ಕಾಲು ತೀವ್ರವಾಗಿ ಊದಿಕೊಂಡಿತ್ತು ಮತ್ತು ರಕ್ತಸ್ರಾವವಾಗುತ್ತಿತ್ತು.
24
ಗಾಯಗೊಂಡ ಪಂತ್‌ರನ್ನು ಗಾಲ್ಫ್ ಕಾರ್ಟ್‌ನಲ್ಲಿ ಕರೆದೊಯ್ಯಲಾಯಿತು. ಮತ್ತೆ ಬ್ಯಾಟಿಂಗ್ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿತ್ತು. ಆದರೆ ಎರಡನೇ ದಿನ ಪಂತ್ ಅಚ್ಚರಿ ಮೂಡಿಸುವಂತೆ ಬ್ಯಾಟಿಂಗ್‌ಗೆ ಇಳಿದರು. ಕಾಲು ಮುರಿತದ ನಡುವೆಯೂ ಅರ್ಧಶತಕ (54 ರನ್) ಗಳಿಸಿದರು.
34
"ಕಾಲು ಮುರಿತದ ನಡುವೆಯೂ ಹೋರಾಡಿ, ದಾಖಲೆ ಮುರಿದರು, ತಂಡಕ್ಕೆ ಆಸರೆಯಾದರು. ಈ ಹೋರಾಟ ಸ್ಮರಣೀಯ. ಶೀಘ್ರ ಗುಣಮುಖರಾಗಲಿ ಚಾಂಪಿಯನ್" ಎಂದು LSG ಮಾಲೀಕ ಸಂಜೀವ್ ಗೊಯೆಂಕಾ ಪಂತ್ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
ಗೊಯೆಂಕಾ ಅವರ ಈ ಟ್ವೀಟ್ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಐಪಿಎಲ್‌ನಲ್ಲಿ ಪಂತ್ ಕಳಪೆ ಪ್ರದರ್ಶನ ನೀಡಿದಾಗ ಗೊಯೆಂಕಾ ಅಸಮಾಧಾನ ವ್ಯಕ್ತಪಡಿಸಿದ್ದರು. ಲಖನೌ ಸೋತಾಗ ಮೈದಾನದಲ್ಲೇ ಪಂತ್‌ರನ್ನು ಗದರಿದ್ದರು.