ಅನುಷ್ಕಾ ನೋಡಿ ವೆಜಿಟೇರಿಯನ್ ಡಯಟ್ ಆರಂಭ, 37ರಲ್ಲಿ ಕೊಹ್ಲಿ ಫಿಟ್ನೆಸ್ ಗುಟ್ಟು ಹೇಳಿದ ಸೆಲೆಬ್ರೆಟಿ ಚೆಫ್

Published : Jun 23, 2026, 06:13 PM IST

ಅನುಷ್ಕಾ ಶರ್ಮಾಳಿಂದ ಸ್ಪೂರ್ತಿ ಪಡೆದ ವಿರಾಟ್ ಕೊಹ್ಲಿ ಸಸ್ಯಹಾರಿ ಡಯೆಟ್ ಆರಂಭಿಸಿದ್ದರು. ಇದೀಗ ಕೊಹ್ಲಿ ಸಂಪೂರ್ಣ ವೆಜಿಟೇರಿಯನ್. ಚೋಲೆ ಭಟುರೆ, ರಾಜ್ಮಾ ಚಾವಲ್ ಕೊಹ್ಲಿಯ ನೆಚ್ಚಿನ ಆಹಾರವಾದರೂ ತಿನ್ನುತ್ತಿಲ್ಲ. ಕೊಹ್ಲಿ ಫಿಟ್ನೆಸ್ ಸೀಕ್ರೆಟ್.

PREV
16
ಕೊಹ್ಲಿ ಫಿಟ್ನೆಸ್ ಗುಟ್ಟು

ವಿರಾಟ್ ಕೊಹ್ಲಿ 37ರ ಹರೆಯದಲ್ಲೂ ಸಂಪೂರ್ಣ ಫಿಟ್ ಆಗಿರುವ ವಿಶ್ವದ ಕೆಲವೇ ಕೆಲವು ಕ್ರೀಡಾಪಟುಗಳಲ್ಲಿ ಒಬ್ಬರು. ವಿರಾಟ್ ಕೊಹ್ಲಿ ಇಷ್ಟು ಫಿಟ್ ಆಗಿರಲು ಕಾರಣ ಅವರ ಅಭ್ಯಾಸದ ಜೊತೆಗೆ ಫುಡ್ ಡೆಯಟ್. ಈ ಕುರಿತು ಖ್ಯಾಸ ಸೆಲೆಬ್ರೆಟಿ ಚೆಫ್ ಅರುಣ್ ಚೌವ್ಹಾಣ್ ಮಾತನಾಡಿದ್ದಾರೆ. ಕೊಹ್ಲಿ ತಮ್ಮ ನೆಚ್ಚಿನ ಹಾಗೂ ಅತೀ ಹೆಚ್ಚು ಇಷ್ಟುಪಟ್ಟು ತಿನ್ನುತ್ತಿದ್ದ ಆಹಾರಗಳನ್ನು ತ್ಯಜಿಸಿದ್ದಾರೆ ಎಂದು ಅರುಣ್ ಚವ್ಹಾಣ್ ಹೇಳಿದ್ದಾರೆ.

26
ಅನುಷ್ಕಾ ನೋಡಿ ವೆಜಿಟೇರಿಯನ್ ಆಹಾರ

ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್‌ನ ಆರಂಭಿಕ ದಿನಗಳಲ್ಲಿ ವಿರಾಟ್ ಕೊಹ್ಲಿ ಮಾಂಸಾಹಾರ ತಿನ್ನುತ್ತಿದ್ದರು. ಕೊಹ್ಲಿಗೆ ಚೋಲೆ ಭಟುರೆ, ರಾಜ್ಮ ಚಾವಲ್ ಇಷ್ಟದ ಆಹಾರವಾಗಿತ್ತು. ಹೆಚ್ಚು ತಿನ್ನುತ್ತಿದ್ದರು. ಆದರೆ ಅನುಷ್ಕಾ ಶರ್ಮಾ ವೆಜಿಟೇರಿಯನ್ ಆಹಾರ ಫಾಲೋ ಮಾಡುತ್ತಿದ್ದರು. ಇದರಿಂದ ಸ್ಪೂರ್ತಿ ಪಡೆದು ಕೊಹ್ಲಿ ಕೂಡ ಸಂಪೂರ್ಣ ವೆಜಿಟೇರಿಯನ್ ಹಾಗೂ ದೇಹಕ್ಕೆ ಸರಿಯಾದ ಪ್ರಮಾಣದ ನ್ಯೂಟ್ರಿಶಿಯನ್ ಆಹಾರ ಆರಂಭಿಸಿದ್ದರು ಎಂದು ಅರುಣ್ ಚವ್ಹಾಣ್ ಹೇಳಿದ್ದಾರೆ.

36
ಸಲಾಡ್ ಹೆಚ್ಚು ತಿನ್ನುತ್ತಾರೆ ಕೊಹ್ಲಿ

ಕೊಹ್ಲಿ ಸಸ್ಯಾಹಾರಿಯಾಗಿದ್ದರೂ ಫ್ಯಾಟ್ ಭರಿತ ಸೇರಿದಂತೆ ಆರೋಗ್ಯಕ್ಕೆ ಸಣ್ಣ ಎಳೆಯಷ್ಟು ಉತ್ತಮವಲ್ಲ ಎಂದಿದ್ದರೆ ಅಂತಹಾ ಆಹಾರದಿಂದ ಕೊಹ್ಲಿ ದೂರವಿರುತ್ತಾರೆ. ಡೈರಿ ಉತ್ಪನ್ನಗಳಿಂದ ಕೊಹ್ಲಿ ದೂರವಿದ್ದಾರೆ. ಸಲಾಡ್, ವೆಜಿಟೇಬಲ್ಸ್ ಸೇರಿದಂತೆ ಹಲವು ವೇಗನ್ ಸಲಾಡ್ ತಿನ್ನುತ್ತಾರೆ. ಕೊಹ್ಲಿ ಆಹಾರ ಪದ್ಧತಿಯಿಂದ ಸಂಪೂರ್ಣ ಫಿಟ್ ಆಗಿದ್ದಾರೆ. ಇದರ ಜೊತೆಗೆ ಪ್ರತಿ ದಿನ ಕೊಹ್ಲಿ ಜಿಮ್ ಅಭ್ಯಾಸ ಮಾಡುತ್ತಾರೆ.

46
2015ರಿಂದ ಅನುಷ್ಕಾ ಶರ್ಮಾ ವೆಜಿಟೇರಿಯನ್

2015ರಲ್ಲಿ ಅನುಷ್ಕಾ ಶರ್ಮಾ ವೆಜಿಟೇರಿಯನ್ ಆಹಾರ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಕೆಲವೇ ತಿಂಗಳಲ್ಲಿ ಕೊಹ್ಲಿ ಕೂಡ ವೆಜಿಟೇರಿಯನ್ ಆಹಾರ ಪದ್ಧತಿ ಅನುಸರಿಸುತ್ತಿದ್ದಾರೆ. 2021ರಲ್ಲಿ ವಿರಾಟ್ ಕೊಹ್ಲಿ ನಾನು ವೆಜಿಟೇರಿಯನ್ ಎಂದು ಘೋಷಿಸುತ್ತಿಲ್ಲ, ಆಧರೆ ವೇಗನ್ ಆಹಾರ ಪದ್ಧತಿ ಅನುಸರಿಸುತ್ತಿದ್ದೇನೆ ಎಂದಿದ್ದರು.

56
ವೇಗನ್ ಫುಡ್ ಡಯೆಟ್

ಜಿಮ್ ಅಭ್ಯಾಸದ ಜೊತೆ ಆಹಾರ ಪದ್ಥತಿಯೂ ಫಿಟ್ನೆಸ್‌ಗೆ ಅತ್ಯಂತ ಮುಖ್ಯ. ಎಲ್ಲರೂ ವೇಗನ್ ಫುಡ್ ತಿನ್ನಬೇಕು ಎಂದಲ್ಲ. ಆದರೆ ತಿನ್ನುವ ಆಹಾರಕ್ಕೆ ತಕ್ಕಂತೆ ಅಭ್ಯಾಸಗಳು ಇರಬೇಕು. ಹಾಗಂತ ನಾನ್ ವೆಜ್ ತಿಂದಿದ್ದೇವೆ ಎಂದು ಹೆಚ್ಚಿನ ವ್ಯಾಯಾವ ದೇಹಕ್ಕೆ ಉತ್ತಮವಲ್ಲ. ಹೀಗಾಗಿ ಬಹುತೇಕ ಕ್ರೀಡಾಪಟುಗಳು ವೇಗನ್ ಫುಡ್ ಪದ್ಧತಿ ಅನುಸರಿಸುತ್ತಾರೆ ಎಂದು ಅರುಣ್ ಚವ್ಹಾಣ್ ಹೇಳಿದ್ದಾರೆ.

66
ಆಹಾರ ಪದ್ಧತಿ ಜೊತೆಗೆ ಶಿಸ್ತು

ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಫಿಟ್ಟೆಸ್ಟ್ ಕ್ರಿಕೆಟಿಗ. ಕೊಹ್ಲಿ ತಮ್ಮ ಜೀವನ ಪದ್ಧತಿ, ಆಹಾರ, ವ್ಯಾಯಾಮ ಶಿಸ್ತು ಎಲ್ಲವನ್ನೂ ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಕೊಹ್ಲಿ ಆರೋಗ್ಯವಾಗಿದ್ದಾರೆ. ಉತ್ತಮ ಫಿಟ್ ಆಗಿದ್ದಾರೆ ಎಂದು ಅರುಣ್ ಚವ್ಹಾಣ್ ಹೇಳಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories