ಐಪಿಎಲ್ ಟೂರ್ನಿಯ ಅತೀ ದೊಡ್ದ ಟ್ರೇಡ್ ಡೀಲ್ ಪೂರ್ಣಗೊಂಡಿದೆ. ರಿಷಬ್ ಪಂತ್ ಲಖನೌ ಸೂಪರ್ ಜೈಂಟ್ಸ್ ತಂಡ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ. ಆದರೆ ಪಂತ್ ಸಂಭಾವನೆಯಲ್ಲಿ 12 ಕೋಟಿ ರೂಪಾಯಿ ಕಡಿತಗೊಂಡಿದೆ.
ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಕಳೆದೆರಡು ವರ್ಷ ಮುನ್ನಡೆಸಿದ ರಿಷಬ್ ಪಂತ್ ಇದೀಗ ಟ್ರೇಡ್ ಡೀಲ್ ಮೂಲಕ ಡಿಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕುಲ್ದೀಪ್ ಯಾದವ್ ಹಾಗೂ ಲಖನೌ ತಂಡದ ರಿಷಬ್ ಪಂತ್ ಟ್ರೇಡ್ ಡೀಲ್ ಮೂಲಕ ತಂಡ ಅದಲು ಬದಲು ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಳುತ್ತಿದ್ದಂತೆ ರಿಷಬ್ ಪಂತ್ ಸಂಭಾವನೆಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿ ಕಡಿತಗೊಂಡಿದೆ.
26
ಡೆಲ್ಲಿ ಕ್ಯಾಪಿಟಲ್ಸ್ ನೀಡಲಿರುವ ಸ್ಯಾಲರಿ ಎಷ್ಟು?
ಐಪಿಎಲ್ ಟೂರ್ನಿಯ ಅತೀ ದೊಡ್ಡ ಟ್ರೇಡ್ ಡೀಲ್ ಇದು. 2025ರಲ್ಲಿ ಲಖನೌ ತಂಡ ಸೇರಿಕೊಂಡ ರಿಷಬ್ ಪಂತ್ ಬರೋಬ್ಬರಿ 27 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಬಿಡ್ಡಿಂಗ್ ಅನ್ನೋ ದಾಖಲೆ ಬರೆದಿತ್ತು. ಆದರೆ ಡೆಲ್ಲಿ ತಂಡಕ್ಕೆ ಮರಳುವಾಗ ಪಂತ್ ಸ್ಯಾಲರಿಯಲ್ಲಿ 12 ಕೋಟಿ ಪೂಪಾಯಿ ಕಡಿತಗೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ 2027ರ ಐಪಿಎಲ್ ಟೂರ್ನಿಯಲ್ಲಿ ರಿಷಬ್ ಪಂತ್‌ಗೆ 15 ಕೋಟಿ ರೂಪಾಯಿ ಸಂಭಾವನೆ ನೀಡಲಿದೆ.
36
ಟ್ರೇಡ್ ಪೂರ್ಣ, ಅಧಿಕೃತ ಘೋಷಣೆ
ರಿಷಬ್ ಪಂತ್ ಹಾಗೂ ಕುಲ್ದೀಪ್ ಯಾದವ್ ಐಪಿಎಲ್ ಟ್ರೇಡ್ ಡೀಲ್ ಪೂರ್ಣಗೊಂಡಿದೆ ಎಂದು ಅಧಿಕೃತ ಘೋಷಣ ಹೊರಬಿದ್ದಿದೆ. ಟ್ರೇಡ್ ಮೂಲಕ ರಿಷಬ್ ಪಂತ್ ಮರಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡರೆ, ಕುಲ್ದೀಪ್ ಯಾದವ್ ಲಖನೌ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡಿದ್ದಾರೆ. 2016ರಿಂದ 2024ರ ವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ರಿಷಬ್ ಪಂತ್ 11 ಪಂದ್ಯ ಆಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಗರಿಷ್ಠ ತಂಡ ಆಡಿದ ಸಾಧನೆ ಪಂತ್ ಹೆಸರಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಬ್ ಫಂತ್ ವೇತನ ಪರಿಷ್ಕರಿಸಿದೆ. 2027ರ ಐಪಿಎಲ್ ಟೂರ್ನಿಯಲ್ಲಿ ರಿಷಬ್ ಪಂತ್‌ಗೆ 15 ಕೋಟಿ ರೂಪಾಯಿ ವೇತನ ನೀಡಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಲಖನೌ ತಂಡ ಸೇರಿಕೊಂಡ ಕುಲ್ದೀಪ್ ಯಾದವ್‌ಗೆ 13.50 ರೂಪಾಯಿ ಸಂಭಾವನೆ ನೀಡಲಿದೆ. ಕಳೆದ ಆವೃತ್ತಿಗಳಲ್ಲಿ ಇಬ್ಬರೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
56
ಕಳಪೆ ಪ್ರದರ್ಶನ ಜೊತೆ ಅವಮಾನ
ರಿಷಬ್ ಪಂತ್ ಲಖನೌ ತಂಡ ಸೇರಿಕೊಂಡ ಬಳಿಕ ವೈಯುಕ್ತಿಕ ಪ್ರದರ್ಶನ ಹಾಗೂ ಲಖನೌ ತಂಡದ ಪ್ರದರ್ಶನ ಎರಡೂ ಕಳಪೆಯಾಗಿತ್ತು. ಎರಡು 2025 ಹಾಗೂ 2026ರ ಎರಡೂ ಆವೃತ್ತಿಗಳಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದೆ. ಇನ್ನು ಲಖನೌ ಮಾಲೀಕ ಬಹಿರಂಗವಾಗಿ ರಿಷಬ್ ಪಂತ್ ಮುಂದೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಫೋಟೋ, ವಿಡಿಯೋಗಳು ಭಾರಿ ವೈರಲ್ ಆಗಿತ್ತು.
66
ನಾಯಕತ್ವ ತ್ಯಜಿಸಿದ್ದ ಪಂತ್
ಐಪಿಎಲ್ 2026ರ ಟೂರ್ನಿ ಅಂತ್ಯಗೊಂಡ ಬೆನ್ನಲ್ಲೇ ರಿಷಬ್ ಪಂತ್, ತನ್ನನ್ನು ಲಖನೌ ನಾಯಕ ಸ್ಥಾನದಿಂದ ಮುಕ್ತಿಗೊಳಿಸಬೇಕು ಎಂದು ಫ್ರಾಂಚೈಸಿಗೆ ಮನವಿ ಮಾಡಿದ್ದರು. ಹೀಗಾಗಿ ಫ್ರಾಂಚೈಸಿ ಪಂತ್ ನಿರ್ಧಾರವನ್ನು ಗೌರವಿಸಿ ನಾಯಕ್ವದಿಂದ ಮುಕ್ತಿಗೊಳಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.