ಒಮ್ಮೆ ಕ್ರಿಕೆಟಿಗನಾಗಿ ಹೆಸರು ಮಾಡಿದರೆ ಸಾಕು, ಆಮೇಲೆ ಓದಿಗೆ ಗುಡ್‌ಬೈ ಹೇಳುವವರೇ ಹೆಚ್ಚು. ಆದರೆ ಅಂಡರ್-19 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ ಸೂರ್ಯವಂಶಿ ಇದೀಗ 10ನೇ ಕ್ಲಾಸ್ ಬೋರ್ಡ್ ಎಕ್ಸಾಂ ಬರೆಯಲು ರೆಡಿಯಾಗಿದ್ದಾರೆ.
ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಗೆಲುವಿನ ರೂವಾರಿ ವೈಭವ ಸೂರ್ಯವಂಶಿ ಇದೀಗ ಮತ್ತೆ ವಿದ್ಯಾರ್ಥಿ ಜೀವನಕ್ಕೆ ಮರಳಿದ್ದು, ಫೆ.17ರಂದು ನಡೆಯಲಿರುವ 10ನೇ ತರಗತಿ ವಾರ್ಷಿಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ.
26
ವೈಭವ್‌ಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ ಎಂದು ಎಚ್ಚರಿಸಿದ ಪ್ರಿನ್ಸಿಪಾಲ್
ವೈಭವ್ ಸೂರ್ಯವಂಶಿ, ಬಿಹಾರದ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿ. ಅವರ ಬಗ್ಗೆ ಪ್ರಾಂಶುಪಾಲ ನೀಲ್ ಕಿಶೋರ್ ಮಾತನಾಡಿದ್ದು, ‘ವೈಭವ್‌ಗೆ ಯಾವುದೇ ರೀತಿಯ ವಿಶೇಷ ಉಪಚಾರ(VIP ಟ್ರೀಟ್‌ಮೆಂಟ್) ಇರುವುದಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
36
ಎಲ್ಲರಿಗೂ ಒಂದೇ ರೀತಿಯ ಸೌಲಭ್ಯ
ಸೌಲಭ್ಯಗಳು ಎಲ್ಲರಿಗೂ ಒಂದೇ ರೀತಿ ಇರಲಿದೆ. ಅಂಡರ್-19 ಕ್ರಿಕೆಟರ್ ಎಂದು ವೈಭವ್‌ಗೆ ಪ್ರತ್ಯೇಕ ಸೌಲಭ್ಯಗಳು ಇರುವುದಿಲ್ಲ. ಎಲ್ಲರಂತೆ ಅವರೂ ಕೂಡಾ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಾಂಶುಪಾಲರಾದ ನೀಲ್ ಕಿಶೋರ್ ಹೇಳಿದ್ದಾರೆ.
ಇದೇ ಫೆಬ್ರವರಿ 17ರಿಂದ ಆರಂಭವಾಗಲಿರುವ 10ನೇ ತರಗತಿ ಬೋರ್ಡ್ ಪರೀಕ್ಷೆಗೆ ವೈಭವ್ ಸೂರ್ಯವಂಶಿ ಹಾಜರಾಗಲಿದ್ದಾರೆ, ಅವರಿಗೆ ಈಗಾಗಲೇ ಪ್ರವೇಶ ಪತ್ರ ತಲುಪಿದೆ. ಅವರ ಆಗಮನ ಎಲ್ಲರಿಗೂ ಖುಷಿ ಕೊಟ್ಟಿದೆ’ಎಂದಿದ್ದಾರೆ.
56
ಯುವಕರಿಗೆ ಸ್ಪೂರ್ತಿಯಾದ ವೈಭವ್
ಈಗಾಗಲೇ ಐಪಿಎಲ್, ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಅಂಡರ್-19 ಏಷ್ಯಾಕಪ್ ಟ್ರೋಫಿ ಹಾಗೂ ಅಂಡರ್-19 ವಿಶ್ವಕಪ್‌ನಲ್ಲಿ ಶತಕ ಸಿಡಿಸುವ ಮೂಲಕ ಭವಿಷ್ಯದ ವೈಭವ್ ಭಾರತದ ತಾರೆ ಎಂದು ಗುರುತಿಸಿಕೊಂಡಿದ್ದಾರೆ. ಹೀಗಿದ್ದೂ ಸೂರ್ಯವಂಶಿ ಅಂಡರ್-19 ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಓದಿನತ್ತ ಗಮನ ಹರಿಸುತ್ತಿರುವುದು ನಿಜಕ್ಕೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
66
ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ರೂವಾರಿ
ಇತ್ತೀಚೆಗೆ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ವೈಭವ್ ಸೂರ್ಯವಂಶಿ ಸ್ಪೋಟಕ 175 ರನ್ ಸಿಡಿಸಿದ್ದರು. ಇದಷ್ಟೇ ಅಲ್ಲದೇ ಟೂರ್ನಿಯಲ್ಲಿ 439 ರನ್ ಸಿಡಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಜಯಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.