T20 World Cup: ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯದ ದಿನ ಮಳೆಯಾಗುತ್ತಾ? ಇಲ್ಲಿದೆ ಹವಾಮಾನ ವರದಿ

Published : Feb 14, 2026, 08:30 AM IST

India vs Pakistan match washed out due to rain: ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಕ್ರಿಕೆಟ್ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ. ಹವಾಮಾನ ಇಲಾಖೆಯು ಪಂದ್ಯದ ದಿನ ಶೇ.90 ರಷ್ಟು ಮಳೆಯಾಗುವ ಸಾಧ್ಯತೆಯನ್ನು ಮುನ್ಸೂಚನೆ ನೀಡಿದೆ.

PREV
15
ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯ

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ನೋಡಲು ಈ ಎರಡು ದೇಶಗಳು ಮಾತ್ರವಲ್ಲ ಇಡೀ ವಿಶ್ವವೇ ಕಾಯುತ್ತಿರುತ್ತದೆ. ಫೆಬ್ರವರಿ 15ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ vs ಪಾಕಿಸ್ತಾನ ಪಂದ್ಯ ನಡೆಯಲಿದೆ. ಈ ಹೈ-ವೋಲ್ಟೇಜ್ ಪಂದ್ಯಕ್ಕೆ ಆತಂಕವೊಂದು ಎದುರಾಗಿದೆ.

25
ಪಂದ್ಯದ ವೇಳೆ ಮಳೆ?

ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯ ಸಮಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕೊಲಂಬೊ ಹವಾಮಾನ ಇಲಾಖೆ ಹೇಳಿದೆ. ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ರಚನೆಯಾಗುವ ಸಾಧ್ಯತೆಗಳಿವೆ. ಪಂದ್ಯದ ದಿನ ಅಂದ್ರೆ ಭಾನುವಾರ ಶೇ.90ರಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

35
ಟಾಸ್ ವಿಳಂಬ ಸಾಧ್ಯತೆ?

ಮಳೆರಾಯ ಪಂದ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಹವಾಮಾನ ವರದಿ ಪ್ರಕಾರ, ಪಂದ್ಯ ಆರಂಭಕ್ಕೂ ಮುನ್ನವೇ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಇದರಿಂದ ಟಾಸ್ ವಿಳಂಬವಾಗಿ, ನಿಗದಿತ ಸಮಯಕ್ಕಿಂತ ಪಂದ್ಯ ತಡವಾಗಿ ಆರಂಭವಾಗಬಹುದು. ಈ ನಡುವೆ ಮೋಡಗಳು ಕಡಿಮೆಯಾಗಿ ಬಿಸಿಲು ವಾತಾವರಣ ರಚನೆಯಾಗಬಹುದು. ಆದ್ರೆ ಮತ್ತೆ ಮಳೆಯಾಗುವ ಲಕ್ಷಣಗಳು ಕಾಣಿಸಿಕೊಳ್ಳಬಹುದು.

45
ಗೆಲುವಿನತ್ತ ಎರಡು ತಂಡಗಳು

ಈ ಪಂದ್ಯದ ಗೆಲುವು ಗ್ರೂಪ್ ಎ ನಲ್ಲಿ ಅಗ್ರ ಸ್ಥಾನ ಪಡೆಯಲು ಸಹಾಯ ಮಾಡುತ್ತದೆ. ಈ ಹಿಂದಿನ ಪಂದ್ಯದಲ್ಲಿ ಟೀಂ ಇಂಡಿಯಾ 93 ರನ್‌ಗಳಿಂದ ಗೆಲುವು ತನ್ನದಾಗಿಸಿಕೊಂಡಿತ್ತು. ಇಶಾನ್ ಕಿಶನ್ ಚಾಕಚಕ್ಯತೆ ಆಟದಿಂದ 61 ರನ್‌ ಪೇರಿಸಿದ್ದರು. ಟೀಂ ಇಂಡಿಯಾ ಪವರ್ ಪ್ಲೇನಲ್ಲಿ 86 ರನ್ ಕಲೆ ಹಾಕಿತ್ತು. ಈ ಮೊತ್ತ ಟೂರ್ನಿಯ ಇದುವರೆಗಿನ ಅತ್ಯಧಿಕ ಪವರ್‌ಪ್ಲೇ ಸ್ಕೋರ್ ಆಗಿದೆ.

ಇದನ್ನೂ ಓದಿ: ಸ್ಮೃತಿ ಮಂಧನಾನ ಮಾಜಿ ಲವರ್ ಪಲಾಶ್ ಮುಚ್ಚಲ್‌ಗೆ ಬಿಗ್ ರಿಲೀಫ್! ಸ್ಮೃತಿ ಫ್ರೆಂಡ್‌ಗೆ ಹೈಕೋರ್ಟ್ ಖಡಕ್ ವಾರ್ನಿಂಗ್!

55
ಗ್ರೂಪ್ ಎ?

ಇನ್ನು ಟೀಂ ಪಾಕಿಸ್ತಾನ ಗೆಲುವಿನ ದಾರಿಯಲ್ಲಿದ್ರೆ, ನೆಟ್‌ ರನ್ ರೇಟ್‌ನಲ್ಲಿ ಭಾರತಕ್ಕಿಂತ ಹಿಂದಿದೆ. ಹಾಗಾಗಿ ಈ ಪಂದ್ಯ ಗ್ರೂಪ್‌ 'ಎ'ನಲ್ಲಿ ಯಾರು ಮೊದಲ ಸ್ಥಾನ ಪಡೆಯುತ್ತಾರೆ ಎಂಬುದನ್ನು ನಿರ್ಧರಿಸಲಿದೆ. ಪಾಕಿಸ್ತಾನ ಮತ್ತು ಭಾರತ ಕೊನೆಯ ಬಾರಿ 2025ರ ಏಷ್ಯಾ ಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಭಾರತ ಐದು ವಿಕೆಟ್‌ಗಳಿಂದ ಗೆಲುವನ್ನು ತನ್ನದಾಗಿಸಿಕೊಂಡಿತ್ತು.

ಇದನ್ನೂ ಓದಿ: ವಿಶ್ವಕಪ್‌ಗೆ ಮಾಡಿದ ಅವಮಾನ ಆಸ್ಟ್ರೇಲಿಯಾಕ್ಕೆ ಶಾಪವಾಯ್ತಾ? ಟ್ರೋಫಿ ಮೇಲೆ ಕಾಲಿಟ್ಟಿದ್ದ ತಂಡಕ್ಕೆ ಇಂದು ಜಿಂಬಾಬ್ವೆ ಎದುರೂ ಸೋಲು!

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories