ಅತೀ ಕಿರಿಯ ವಯಸ್ಸಿಗೆ ಭಾರತ ತಂಡದ ನಾಯಕ, ಯೂತ್ ODIನಲ್ಲಿ ವೈಭವ್ ಸೂರ್ಯವಂಶಿ ದಾಖಲೆ ಬರೆದಿದ್ದಾನೆ. ಕೇವಲ 14ನೇ ವಯಸ್ಸಿಗೆ ಯೂತ್ ಏಕದಿನದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ ವಿಶ್ವ ದಾಖಲೆ.
ವೈಭವ್ ಸೂರ್ಯವಂಶಿ ಸದ್ಯ ಕ್ರಿಕೆಟ್ ಲೋಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಆಟಗಾರ. ಕೇವಲ 14ರ ಹರೆಯದ ಈತನ ಬ್ಯಾಟಿಂಗ್‌ಗೆ ವಿಶ್ವದ ದಿಗ್ಗಜ ಕ್ರಿಕೆಟಿಗರು ಫಿದಾ ಆಗಿದ್ದಾರೆ. ಈಗಾಗಲೇ ಹಲವು ದಾಖಲೆಗಳನ್ನು ವೈಭವ್ ಸೂರ್ಯವಂಶಿ ಸೃಷ್ಟಿಸಿದ್ದಾರೆ. ಇದೀಗ ವೈಭವ್ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ.
25
ಭಾರತ ತಂಡದ ಅತೀ ಕಿರಿಯ ನಾಯಕ
ಅಂಡರ್ 19 ಏಕದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಭಾರತ ತಂಡದ ನಾಯಕ ಜವಾಬ್ದಾರಿ ವಹಿಸಿದ್ದಾರೆ. ವಿಶೇಷ ಅಂದರೆ ಯೂತ್ ಏಕದಿನ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಅತ್ಯಂತ ಕಿರಿಯ ಕ್ರಿಕೆಟಿಗ ಅನ್ನೋ ದಾಖಲೆ ವೈಭವ್ ಸೂರ್ಯವಂಶಿ ಬರೆದಿದ್ದಾರೆ. ವೈಭವ್ ಸೂರ್ಯವಂಶಿ ವಯಸ್ಸು ಕೇವಲ 14.
35
ವೈಭವ್‌ಗೆ ಒಲಿದ ನಾಯಕ ಪಟ್ಟ
ಭಾರತ ಅಂಡರ್ 19 ತಂಡದ ನಾಯಕ ಅಯುಷ್ ಮ್ಹತ್ರೆ ಹಾಗೂ ಉಪ ನಾಯಕ ವಿಹಾನ್ ಮಲ್ಹೋತ್ರ ಇಬ್ಬರು ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ವೈಭವ್ ಸೂರ್ಯವಂಶಿಗೆ ನಾಯಕ ಪಟ್ಟ ಒಲಿದಿದೆ. ನಾಯಕನಾಗಿ ಕಣಕ್ಕಿಳಿಯುತ್ತಿದ್ದಂತೆ ವೈಭವ್ ಅತೀ ಕಿರಿಯ ನಾಯಕ ಅನ್ನೋ ದಾಖಲೆ ಬರೆದಿದ್ದಾರೆ.
ಅಂಡರ್ 19 ವಿಶ್ವಕಪ್, ಏಕದಿನ, ಟಿ20, ಏಷ್ಯಾಕಪ್ ಸೇರಿದಂತೆ ಎಲ್ಲಾ ಟೂರ್ನಿಯಲ್ಲಿ 15 ವಯಸ್ಸಿನ ಕಳೆಗಿನವರು ನಾಯಕನಾದ ಉದಾಹರಣೆಯೇ ಇಲ್ಲ. ಇದೇ ಮೊದಲ ಬಾರಿಗೆ 14 ವರ್ಷದ ವೈಭವ್ ನಾಯಕನಾಗಿ ವಿಶ್ವದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ಅಹಮ್ಮದ್ ಶೆಹಜಾದ್ 2007ರಲ್ಲಿ 15 ವರ್ಷ 141ದಿನದಲ್ಲಿ ನಾಯನಾಗಿದ್ದರು. ಈ ದಾಖಲೆಯನ್ನು ವೈಭವ್ ಮುರಿದಿದ್ದಾರೆ.
ವೈಭವ್ ವಿಶ್ವದಾಖಲೆ
55
16ನೇ ವಯಸ್ಸಿಗೆ ನಾಯಕನಾಗಿದ್ದ ಅಭಿಷೇಕ್ ಶರ್ಮಾ
ವೈಭವ್‌ಗೂ ಮೊದಲು ಭಾರತ ತಂಡದ ಅಭಿಷೇಕ್ ಶರ್ಮಾ 2016ರಲ್ಲಿ ಅಂಡರ್ 19 ತಂಡದ ನಾಯಕನಾಗಿದ್ದರು. ಈ ವೇಳೆ ಅಭಿಷೇಕ್ ಶರ್ಮಾಗೆ 16 ವರ್ಷವಾಗಿತ್ತು. ಸೌತ್ ಆಫ್ರಿಕಾ ವಿರುದ್ದದ ಯೂಥ್ ಏಕದಿನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ತಂಡ ಮುನ್ನಡೆಸಿದ್ದರು.
16ನೇ ವಯಸ್ಸಿಗೆ ನಾಯಕನಾಗಿದ್ದ ಅಭಿಷೇಕ್ ಶರ್ಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.