ಶಿವನ ತ್ರಿಶೂಲ, ಡಮರುಗ, ತಲೆಯ ಮೇಲಿನ ಚಂದ್ರ.. ಈ ರೀತಿಯಲ್ಲಿರಲಿದೆ ವಾರಣಾಸಿ ಕ್ರಿಕೆಟ್‌ ಸ್ಟೇಡಿಯಂ!

Published : Sep 20, 2023, 08:44 PM IST

ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಅನ್ನು ಉತ್ತರ ಪ್ರದೇಶ ಸರ್ಕಾರ ನಿರ್ಮಾಣ ಮಾಡುತ್ತಿದೆ. ಸೆ.23ರಂದು ಪ್ರಧಾನಿ ನರೇಂದ್ರ ಮೋದಿ ಈ ಸ್ಟೇಡಿಯಂ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಿದ್ದು, ಸಂಪೂರ್ಣ ಶಿವನ ಥೀಮ್‌ನಲ್ಲಿ ಇದರ ನಿರ್ಮಾಣವಾಗಲಿದೆ.  

PREV
18
ಶಿವನ ತ್ರಿಶೂಲ, ಡಮರುಗ, ತಲೆಯ ಮೇಲಿನ ಚಂದ್ರ.. ಈ ರೀತಿಯಲ್ಲಿರಲಿದೆ ವಾರಣಾಸಿ ಕ್ರಿಕೆಟ್‌ ಸ್ಟೇಡಿಯಂ!

ಹಿಂದೂಗಳ ಧಾರ್ಮಿಕ ಕ್ಷೇತ್ರ ಹಾಗೂ ಭಗವಾನ್‌ ಶಿವನ ತಾಣವಾಗಿರುವ ವಾರಣಾಸಿಯಲ್ಲಿ ಉತ್ತರ ಪ್ರದೇಶ ಸರ್ಕಾರ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಅನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದೆ.

28

ಸೆಪ್ಟೆಂಬರ್‌ 23 ರಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಕ್ರಿಕೆಟ್‌ ಸ್ಟೇಡಿಯಂನ ಶಿಲಾನ್ಯಾಸ ಮಾಡಲಿದ್ದು ಡಿಸೆಂಬರ್‌ 2025ರ ವೇಳೆಗೆ ಇದು ಸಿದ್ಧವಾಗಲಿದೆ. ಆ ಬಳಿಕ ಅಂತಾರಾಷ್ಟ್ರಿಯ ಕ್ರಿಕೆಟ್‌ ಕೂಡ ಇಲ್ಲಿ ಆಯೋಜನೆಯಾಗಲಿದೆ. ಈಗ ಈ ಸ್ಟೇಡಿಯಂನ ನೀಲನಕ್ಷೆಯನ್ನು ಪ್ರಕಟ ಮಾಡಿದೆ.

38

ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಕ್ರೀಡಾಂಗಣ ಎರಡು ವರ್ಷಗಳಲ್ಲಿ ಸಿದ್ಧವಾಗಲಿದೆ. ಐಪಿಎಲ್ ಜೊತೆಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಇಲ್ಲಿ ಆಯೋಜಿಸಲಾಗುವುದು. ನಗರದ ರಜತಲಾಬ್ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಕ್ರೀಡಾಂಗಣದ ಅದ್ಭುತ ಚಿತ್ರಗಳು ಬಿತ್ತರವಾಗಿದೆ.

48

ಬಾಬಾ ವಿಶ್ವನಾಥನ ನಗರವಾದ ವಾರಣಾಸಿಯಲ್ಲಿ ನಿರ್ಮಿಸಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಥೀಮ್ ಕೂಡ ಬೋಲೇನಾಥನ ಮೇಲೆ ಇದೆ. ಈಗ ಹೊರಬಿದ್ದಿರುವ ಚಿತ್ರಗಳ ಪ್ರಕಾರ, ಕ್ರೀಡಾಂಗಣದ ಮೀಡಿಯಾ ಸೆಂಟರ್‌ ಡಮರುಗದ ರೀತಿಯಲ್ಲಿ ನಿರ್ಮಾಣವಾಗಲಿದೆ.

58

ವಾರಣಾಸಿಯ ರಾಜ ತಲಾಬ್‌ನ ಗಂಜಾರಿ ಪ್ರದೇಶದಲ್ಲಿ ಈ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ. 451 ಕೋಟಿ ವೆಚ್ಚದಲ್ಲಿ ಈ ಕ್ರೀಡಾಂಗಣ ಸಿದ್ಧವಾಗಲಿದೆ. ಸುಮಾರು 2 ವರ್ಷಗಳಲ್ಲಿ ಈ ಕ್ರೀಡಾಂಗಣ ಸಿದ್ಧವಾಗಲಿದೆ. ಈ ಕ್ರೀಡಾಂಗಣವನ್ನು ಬಿಸಿಸಿಐ ಸಿದ್ಧಪಡಿಸುತ್ತಿದೆ.

68

ಸೆಪ್ಟೆಂಬರ್ 23 ರಂದು ಪ್ರಧಾನಿ ನರೇಂದ್ರ ಮೋದಿ ಈ ಕ್ರೀಡಾಂಗಣದ ಶಂಕುಸ್ಥಾಪನೆ ಮಾಡಲಿದ್ದು, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ಮತ್ತು ಬಿಸಿಸಿಐನ ಎಲ್ಲಾ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಲಾರ್ಸೆನ್ ಮತ್ತು ಟರ್ಬೊ (ಎಲ್‌ಎನ್‌ಟಿ) ಸಂಸ್ಥೆ ಈ ಕೆಲಸವನ್ನು ಪೂರ್ಣಗೊಳಿಸುತ್ತದೆ. ಸದ್ಯ ವಾರಣಾಸಿಯಲ್ಲಿ ನಿರ್ಮಾಣವಾಗಲಿರುವ ಈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ವಿನ್ಯಾಸವೂ ಸಿದ್ಧಗೊಂಡಿದೆ.

78

ವಾರಣಾಸಿಯಲ್ಲಿ ನಿರ್ಮಾಣವಾಗಲಿರುವ ಈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ 30.86 ಎಕರೆಯಲ್ಲಿ ನಿರ್ಮಾಣವಾಗಲಿದೆ. ಈ ಕ್ರೀಡಾಂಗಣದಲ್ಲಿ ಏಕಕಾಲಕ್ಕೆ 30 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೇ ಈ ಕ್ರೀಡಾಂಗಣವನ್ನು ಹಗಲು ರಾತ್ರಿ ಪಂದ್ಯಗಳಿಗೆ ಸಿದ್ಧಗೊಳಿಸಲಾಗುತ್ತಿದೆ.

88

ಈ ಕ್ರೀಡಾಂಗಣಕ್ಕೆ ಹೋಗುವ ರಸ್ತೆಯೂ ವಿವಿಐಪಿ ಆಗಿರುತ್ತದೆ ಎಂದು ವಾರಣಾಸಿ ಆಯುಕ್ತ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ. ಕ್ರೀಡಾಂಗಣಕ್ಕೆ ಹೋಗುವ ಎಲ್ಲಾ ರಸ್ತೆಗಳು ವಿಶಾಲ ಮತ್ತು ಸುಂದರವಾಗಿರುವುದರಿಂದ ಜನರು ಸಂಚಾರದ ತೊಂದರೆಯಿಲ್ಲದೆ ಈ ಕ್ರೀಡಾಂಗಣವನ್ನು ತಲುಪಬಹುದು.

Read more Photos on
click me!

Recommended Stories