ಖಲಿಸ್ತಾನಿ ಉಗ್ರರ ಬೆಂಬಲಿಸಿ ವಿವಾದಾತ್ಮಕ ಭೂಪಟ ಹಂಚಿದ ಗಾಯಕನ ಅನ್‌ಫಾಲೋ ಮಾಡಿದ ಕೊಹ್ಲಿ!

First Published | Sep 19, 2023, 11:07 AM IST

ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ವಿಚಾರದಲ್ಲಿ ಎಂದೂ ರಾಜಿಯಾಗಲ್ಲ. ಅದು ಆಟದಲ್ಲೇ ಇರಲಿ ಅಥವಾ ಇನ್ಯಾವುದೇ ವಿಚಾರ ಇರಲಿ. ಇದೀಗ ಖಲಿಸ್ತಾನಿಗಳ ಬೆಂಬಲಿಸಿ, ಭಾರತ ವಿವಾದಾತ್ಮಕ ಭೂಪಟ ಹಂಚಿಕೊಂಡ ಖ್ಯಾತ ಗಾಯಕನನ್ನು ವಿರಾಟ್ ಕೊಹ್ಲಿ ಅನ್‌ಫಾಲೋ ಮಾಡಿದ್ದಾರೆ.

ಭಾರತೀಯ ಮೂಲದ ಕೆನಡಾ ಸಿಂಗರ್ ಶುಭ್ ಕೆಲದಿನಗಳಿಂದ ಭಾರಿ ವಿವಾದ ಸೃಷ್ಟಿಸಿದ್ದಾರೆ. ಉತ್ತರ ಭಾರತದ ಹಲವು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಶುಭ್ ಇತ್ತೀಚೆಗೆ ಖಲಿಸ್ತಾನಿ ಉಗ್ರರ ಬೆಂಬಲಿಸಿ ವಿವಾದಾತ್ಮ ಪೋಸ್ಟ್ ಹಾಕಿದ್ದರು.

ಭಾರತದ ಭೂಪಟ ಹಂಚಿಕೊಂಡಿದ್ದ ಸಿಂಗರ್ ಶುಭ್, ಇದರಲ್ಲಿ ಜಮ್ಮು ಮತ್ತು ಕಾಶ್ಮೀರವೇ ಇಲ್ಲದಾಗಿದೆ. ಇಷ್ಟೇ ಅಲ್ಲ ಪಂಜಾಬ್ ರಾಜ್ಯದಲ್ಲಿ ನೆತ್ತರು ಹರಿಯುತ್ತಿರುವ ರೀತಿಯ ನಕ್ಷೆಯನ್ನು ಹಂಚಿಕೊಂಡಿದ್ದಾರೆ.

Latest Videos


ಜೊತೆಗೆ ಪಂಜಾಬ್‌ಗಾಗಿ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಖಲಿಸ್ತಾನಿ ಹೋರಾಟವನ್ನು ಬೆಂಬಲಿಸಿದ್ದರು. ಭಾರತದ ಸೌರ್ವಭೌಮತ್ವ, ಐಕ್ಯತೆಯನ್ನೇ ಪ್ರಶ್ನಿಸಿದ ಶುಭ್ ವಿರುದ್ದ ವಿರಾಟ್ ಕೊಹ್ಲಿ ಆಕ್ರೋಶ ಹೊರಹಾಕಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಕೊಹ್ಲಿ, ತನ್ನ ನೆಚ್ಚಿನ ಗಾಯಕ ಶುಭ್ ಅನ್‌ಫಾಲೋ ಮಾಡಿದ್ದರೆ.

ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಕೆಲವೇ ಮಂದಿಯನ್ನು ಫಾಲೋ ಮಾಡುತ್ತಾರೆ. ಈ ಪೈಕಿ ಕೆನಡಾ ಸಂಗರ್ ಶುಭ್ ಕೂಡ ಒಬ್ಬರಾಗಿದ್ದರು. ಆದರೆ ಶುಭ್ ಭಾರತ ವಿರೋಧಿ ನಡೆಯಿಂದ ಕೊಹ್ಲಿ ಗರಂ ಆಗಿದ್ದಾರೆ. ಹೀಗಾಗಿ ಸಾಮಾಜಿಕ ಮಾಧ್ಯಮದಿಂದ ಅನ್‌ಫಾಲೋ ಮಾಡಿದ್ದಾರೆ.

ಶುಭ್ ಹಾಡುಗಾರಿಕೆ, ಸಂಗೀತ ಕಾರ್ಯಕ್ರಮವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ವಿರಾಟ್ ಕೊಹ್ಲಿ, ಹಲವು ಭಾರಿ ಟ್ವೀಟ್ ಮೂಲಕ ಶುಭಾಶಯ ವಿನಿಮಯ ಮಾಡಿದ್ದಾರೆ. 

ಕೊಹ್ಲಿ ಪ್ರಶಂಸೆಯ ಟ್ವೀಟ್‌ಗಳಿಗೆ ಶುಭ್ ಕೂಡ ಧನ್ಯವಾದ ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ ಯಾವಾಗ ಶುಭ್ ದೇಶವಿರೋಧಿ ಪೋಸ್ಟ್ ಹಾಕುವ ಮೂಲಕ ದೇಶದ ಸೌರ್ವಭೌಮತ್ವಕ್ಕ ಧಕ್ಕೆ ತರುವ ಪ್ರಯತ್ನ ಮಾಡಿದರೋ ಅದೇ ನಿಮಿಷದಲ್ಲಿ ಕೊಹ್ಲಿ ಅನ್‌ಫಾಲೋ ಮಾಡಿದ್ದಾರೆ.

ಮುಂಬೈನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಶುಭ್ ಕರೆಸಲಾಗಿತ್ತು. ಆದರೆ ಈ ಪೋಸ್ಟ್ ಬಳಿಕ ಕಾರ್ಯಕ್ರಮದಲ್ಲಿ ಶುಭ್ ಸಂಗೀತ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. 

ಇನ್ನು ದೇಶದ ವಿವಿದಡೆ ಆಯೋಜಿಸಿದ್ದ ಶುಭ್ ಸಂಗೀತ ಕಾರ್ಯಕ್ರಮಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಬಹುತೇಕ ಶುಭ್ ಸಂಗೀತ ಕಾರ್ಯಕ್ರಮಗಳು ರದ್ದಾಗುವ ಸಾಧ್ಯತೆ ಹೆಚ್ಚಿದೆ.

click me!