ತಮ್ಮ ಮೊದಲ ಟೆಸ್ಟ್ ಶತಕವನ್ನೇ ತ್ರಿಶತಕವನ್ನಾಗಿ ಪರಿವರ್ತಿಸಿದ್ದರು ಕರುಣ್ ನಾಯರ್
2016 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 303 ರನ್ ಗಳಿಸಿ ಅಜೇಯರಾಗಿದ್ದರು ಕರುಣ್ ನಾಯರ್. ತಮ್ಮ ಮೊದಲ ಟೆಸ್ಟ್ ಶತಕವನ್ನೇ ತ್ರಿಶತಕವನ್ನಾಗಿ ಪರಿವರ್ತಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ತ್ರಿಶತಕ ಬಾರಿಸಿದ ದಾಖಲೆ ಕರುಣ್ ನಾಯರ್ ಅವರ ಹೆಸರಿನಲ್ಲಿದೆ. ಕೇವಲ ಮೂರನೇ ಇನ್ನಿಂಗ್ಸ್‌ನಲ್ಲಿಯೇ ಈ ಸಾಧನೆ ಮಾಡಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ
ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್. ನಂತರ ಈ ಸಾಧನೆ ಮಾಡಿದ್ದು ಕರುಣ್ ನಾಯರ್. ಈವರೆಗೆ ಬೇರೆ ಯಾವ ಭಾರತೀಯ ಬ್ಯಾಟ್ಸ್‌ಮನ್ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿಲ್ಲ.
ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕವನ್ನೇ ತ್ರಿಶತಕವನ್ನಾಗಿ ಪರಿವರ್ತಿಸುವುದು ಅಪರೂಪ
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಕೇವಲ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ತಮ್ಮ ಮೊದಲ ಟೆಸ್ಟ್ ಶತಕವನ್ನೇ ತ್ರಿಶತಕವನ್ನಾಗಿ ಪರಿವರ್ತಿಸಿದ್ದಾರೆ. ಅವರಲ್ಲಿ ಕರುಣ್ ನಾಯರ್ ಕೂಡ ಒಬ್ಬರು.
7 ವರ್ಷಗಳಿಗೂ ಹೆಚ್ಚು ಕಾಲ ಭಾರತ ತಂಡದಿಂದ ಹೊರಗುಳಿದಿರುವ ಕರುಣ್ ನಾಯರ್
2017 ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ನಂತರ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದಿಲ್ಲ ಕರುಣ್ ನಾಯರ್. ಏಳು ವರ್ಷಗಳ ನಂತರ ಮತ್ತೆ ತಂಡಕ್ಕೆ ಮರಳಲು ಈ ಬ್ಯಾಟ್ಸ್‌ಮನ್ ಉತ್ಸುಕರಾಗಿದ್ದಾರೆ.
ಇತ್ತೀಚೆಗೆ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ವಿದರ್ಭ ಮತ್ತು ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ ಕರುಣ್ ನಾಯರ್. ಇದೇ ಕಾರಣಕ್ಕೆ ಅವರು ಭಾರತ ತಂಡಕ್ಕೆ ಮರಳುವ ವಿಶ್ವಾಸ ಹೊಂದಿದ್ದಾರೆ.
ನಾನು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಏಕೆಂದರೆ, ಭವಿಷ್ಯದ ಬಗ್ಗೆ ಯೋಚಿಸಿದರೆ ಅಲ್ಲಿಯೇ ಸಿಲುಕಿಕೊಳ್ಳಬೇಕಾಗುತ್ತದೆ ಎಂದು ಕರುಣ್ ನಾಯರ್ ಹೇಳಿದ್ದಾರೆ,
'ನನ್ನ ಭವಿಷ್ಯ ಅನಿಶ್ಚಿತ. ಹಾಗಾಗಿ ಸಿಗುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಬಯಸುತ್ತೇನೆ.' ಎಂದು ಕರುಣ್ ನಾಯರ್ ಹೇಳಿದ್ದಾರೆ
ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ಬೌಲಿಂಗ್ ಸ್ವಿಂಗ್ ಆಗುತ್ತದೆ, ಅಲ್ಲಿ ಆ ಡುವುದು ಕಷ್ಟ. ಬ್ಯಾಟ್ಸ್‌ಮನ್ ಆಗಿ ನಾನು ಬಹಳಷ್ಟು ಕಲಿತಿದ್ದೇನೆ. ನನ್ನ ಮೇಲೆ ನಂಬಿಕೆ ಇಡುವುದು ಮತ್ತು ರನ್ ಗಳಿಸುವುದನ್ನು ಕಲಿತಿದ್ದೇನೆ.'
ದೇಶಿ ಕ್ರಿಕೆಟ್‌ನಲ್ಲಿ ಕರ್ನಾಟಕ ಪರ ಆಡುವಾಗ ಕರುಣ್ ನಾಯರ್ ಯಶಸ್ಸು ಕಂಡಿರಲಿಲ್ಲ. ವಿದರ್ಭ ತಂಡ ಸೇರಿದ ನಂತರ ಮತ್ತೆ ರನ್ ಗಳಿಸಲು ಪ್ರಾರಂಭಿಸಿದ್ದಾರೆ.
ಕಳೆದ ರಣಜಿ ಋತುವಿನಲ್ಲಿ ವಿದರ್ಭ ಪರ 10 ಪಂದ್ಯಗಳಲ್ಲಿ 690 ರನ್ ಗಳಿಸಿದ್ದರು ಕರುಣ್ ನಾಯರ್. ತಂಡವು ಸೆಮಿಫೈನಲ್ ತಲುಪಲು ನೆರವಾಗಿದ್ದರು.
'ಎಲ್ಲರೂ ದೇಶವನ್ನು ಪ್ರತಿನಿಧಿಸಲು ಆಡುತ್ತಾರೆ. ಅದು ಈಗ ನನ್ನ ಗುರಿ. ಮತ್ತೆ ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತೇನೆ.' ಎಂದು ಕರುಣ್ ನಾಯರ್ ಹೇಳಿದ್ದಾರೆ,