ಐಸಿಸಿ ಚೇರ್‌ಮನ್ ಆದ ಜಯ್‌ ಶಾಗೆ ಸಿಗುವ ಸಂಬಳ ಎಷ್ಟು? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

First Published | Aug 29, 2024, 11:51 AM IST

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಭಾರತದ ಜಯ್ ಶಾ ಅವಿರೋಧವಾಗಿ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ಐಸಿಸಿ ಚೇರ್‌ಮನ್‌ಗೆ ಸಿಗುವ ಸಂಬಳ ಎಷ್ಟು ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಯಾಗಿದ್ದ ಜಯ್ ಶಾ, ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಜಾಗತಿಕ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. 
 

ಹೌದು, ಜಯ್ ಶಾ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಚೇರ್‌ಮನ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಯ್ ಶಾ ಅವರು ಮುಂಬರುವ ಡಿ.01, 2024ರಿಂದ ಮುಂದಿನ ಮೂರು ವರ್ಷಗಳ ಕಾಲ ಐಸಿಸಿ ಚೇರ್‌ಮನ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. 
 

Latest Videos


ಜಯ್‌ ಶಾ, ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕ್ರಿಕೆಟ್‌ ಮಂಡಳಿಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ. ಇನ್ನು ಇದಷ್ಟೇ ಅಲ್ಲದೇ ಅವರು ಏಷ್ಯಾ ಕ್ರಿಕೆಟ್‌ ಸಮಿತಿ (ಎಸಿಸಿ), ಐಸಿಸಿಯ ಹಣಕಾಸು ಸಮಿತಿಯ ಹಾಲಿ ಅಧ್ಯಕ್ಷರಾಗಿದ್ದು, ಈ ಸ್ಥಾನಗಳಿಂದಲೂ ಕೆಳಕ್ಕಿಳಿಯಬಹುದು.
 

ಸದ್ಯ 35 ವರ್ಷದ ಜಯ್ ಶಾ, ಇದೀಗ ಐಸಿಸಿ ಇತಿಹಾಸದಲ್ಲೇ ಅಧ್ಯಕ್ಷ ಸ್ಥಾನಕ್ಕೇರಿದ ಅತಿ ಕಿರಿಯ ವ್ಯಕ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಜಯ್ ಶಾ, ಅಧಿಕೃತವಾಗಿ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವಾಗ 36 ವರ್ಷ ವಯಸ್ಸಾಗಿರಲಿದೆ.
 

ಇನ್ನು ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಬಿಟ್ಟು ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜಯ್ ಅವರ ಸಂಬಳ ಎಷ್ಟಿರಬಹುದು ಎನ್ನುವ ಕುತೂಹಲ ನಿಮಗೂ ಇರಬಹುದು ಅಲ್ಲವೇ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ನಿಮಗೆ ಗೊತ್ತಿರಲಿ ಐಸಿಸಿ ಚೇರ್‌ಮನ್ ಎನ್ನುವುದು ಒಂದು ಗೌರವಾನ್ವಿತ ಹುದ್ದೆಯಾಗಿದ್ದು, ಆ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಯಾವುದೇ ನಿರ್ದಿಷ್ಟ ಸಂಬಳ ಎನ್ನುವುದು ಇರುವುದಿಲ್ಲ

ಆದರೆ ಐಸಿಸಿ ಚೇರ್‌ಮನ್ ಆದವರಿಗೆ ಪ್ರವಾಸ ಮಾಡಲು, ಮೀಟಿಂಗ್‌ನಲ್ಲಿ ಪಾಲ್ಗೊಳ್ಳಲು ವಿಶೇಷ ಭತ್ಯೆಗಳನ್ನು ನೀಡಲಾಗುತ್ತದೆ. ಆದರೆ ಎಷ್ಟು ಮೊತ್ತ ನೀಡಲಾಗುತ್ತದೆ ಎನ್ನುವುದಕ್ಕೆ ಯಾವುದೇ ಸ್ಪಷ್ಟ ಮಾಹಿತಿಯನ್ನು ಐಸಿಸಿ ಬಿಟ್ಟುಕೊಟ್ಟಿಲ್ಲ.

ಇನ್ನು ಜಯ್ ಶಾ 2019ರಿಂದ 2024ರ ಅವಧಿಯವರೆಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿದ್ದಾಗಲೂ ಸಹಾ ಜಯ್ ಶಾ ಯಾವುದೇ ನಿಗದಿತ ಸಂಬಳವನ್ನು ಪಡೆದುಕೊಂಡಿಲ್ಲ.

ಆದರೆ ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ದೊಡ್ಡ ಮೊತ್ತದ ಭತ್ಯೆಗಳನ್ನು ಪಡೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮೀಟಿಂಗ್‌ಗಳಲ್ಲಿ ಪಾಲ್ಗೊಳ್ಳಲು ವಿದೇಶಿ ಪ್ರವಾಸಕ್ಕೆ ಶಾ ₹82,000 ಪಡೆದುಕೊಳ್ಳುತ್ತಿದ್ದರು. ಇನ್ನು ದೇಶಿ ಮೀಟಿಂಗ್‌ನಲ್ಲಿ ಪಾಲ್ಗೊಳ್ಳಲು ದಿನವೊಂದಕ್ಕೆ ಜಯ್ ಶಾ ₹40,000 ಹಾಗೂ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಪಡೆದುಕೊಳ್ಳುತ್ತಿದ್ದರು.

click me!