ವಿರಾಟ್ ಕೊಹ್ಲಿ ಬಗ್ಗೆ ನಿಮಗೆ ಗೊತ್ತಿರದ ಟಾಪ್ 7 ಸೀಕ್ರೇಟ್ಸ್‌!

First Published | Nov 5, 2024, 1:45 PM IST

ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಇಂದು ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕುರಿತಾದ ಏಳು ಇಂಟ್ರೆಸ್ಟಿಂಗ್ ಸಂಗತಿಗಳನ್ನು ತಿಳಿಯೋಣ ಬನ್ನಿ.
 

1. ಕ್ರಿಕೆಟ್ ಜತೆಗೆ ಟೆನಿಸ್ ಮೇಲೂ ಒಲವು

ವಿರಾಟ್ ಕೊಹ್ಲಿಗೆ ಬಾಲ್ಯದಿಂದಲೂ ಕ್ರಿಕೆಟ್ ಜತೆಗೆ ಟೆನಿಸ್ ಮೇಲೂ ಹೆಚ್ಚಿನ ಒಲವು ಇತ್ತು. ಆದರೆ ಮೆಂಟರ್ ಹಾಗೂ ಪೋಷಕರು ಹೆಚ್ಚಿನ ಬೆಂಬಲವನ್ನು ಕ್ರಿಕೆಟ್‌ಗೆ ನೀಡಿದ್ದರಿಂದ ವಿರಾಟ್ ಕೊಹ್ಲಿ ತಾವು ಓರ್ವ ವೃತ್ತಿಪರ ಕ್ರಿಕೆಟರ್ ಆಗಲು ತೀರ್ಮಾನಿಸಿದರು.
 

2. ತಂದೆಯ ಪ್ರಭಾವ:

ಕೊಹ್ಲಿಯ ತಂದೆ ತಮ್ಮ ಮಗ ದೇಶವನ್ನು ಪ್ರತಿನಿಧಿಸುವಂತಾಗಬೇಕು ಎನ್ನುವ ಕನಸು ಕಂಡಿದ್ದರು. ಅದಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ದರಿದ್ದರು. ಇನ್ನು ಕೊಹ್ಲಿ ತಂದೆ 2006ರಲ್ಲಿ ಕೊನೆಯುಸಿರೆಳೆದಾಗ, ವಿರಾಟ್ ಕೊಹ್ಲಿ ರಣಜಿ ಟ್ರೋಫಿಯಲ್ಲಿ ಪಾಲ್ಗೊಂಡಿದ್ದರು. ಇದು ಅವರು ಕ್ರಿಕೆಟ್‌ ಮೇಲೆ ಹೊಂದಿದ ಬದ್ಧತೆಯನ್ನು ತೋರಿಸುತ್ತದೆ.
 

Tap to resize

3. ಕೊಹ್ಲಿ ಹೆಸರಿನಲ್ಲಿದೆ ಅಪರೂಪದ ವಿಕೆಟ್ ದಾಖಲೆ:

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಧಿಕೃತವಾಗಿ ಎಸೆತ ಹಾಕದೇ ವಿಕೆಟ್ ಕಬಳಿಸಿದ ಬೌಲರ್ ಎನ್ನುವ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಬೌಲಿಂಗ್‌ನಲ್ಲಿ ಸ್ಟಂಪೌಟ್ ವಿಕೆಟ್ ಸಿಕ್ಕಿತು. ಆದರೆ ಆ ಚೆಂಡು ವೈಡ್ ಆಗಿತ್ತು. ಹೀಗಿದ್ದೂ ಕೊಹ್ಲಿ ಹೆಸರಿಗೆ ಈ ವಿಕೆಟ್ ಸೇರ್ಪಡೆಯಾಯಿತು.
 

4. ವೇಗಾನ್ ಲೈಫ್‌ಸ್ಟೈಲ್‌:

ಆರೋಗ್ಯದ ದೃಷ್ಟಿಕೋನದಿಂದಾಗಿ ವಿರಾಟ್ ಕೊಹ್ಲಿ 2008ರಿಂದ ವೇಗಾನ್ ಡಯೆಟ್(ವೆಜಿಟೇರಿಯನ್) ಆಗಿ ಬದಲಾಗಿದ್ದಾರೆ. ಸರ್ವಿಕಲ್ ಸ್ಪೈನ್‌ನಿಂದ ಬಳಲುತ್ತಿದ್ದ ಕೊಹ್ಲಿ, ಇದಾದ ಬಳಿಕ ತಮ್ಮ ಫುಡ್ ಸ್ಟೈಲ್ ಬದಲಿಸಿಕೊಂಡಿದ್ದಾರೆ.
 

5. ಒಂದೇ ಐಪಿಎಲ್ ಫ್ರಾಂಚೈಸಿ ಪರ ಆಡುತ್ತಿರುವ ಏಕೈಕ ಕ್ರಿಕೆಟಿಗ:

2008ರಿಂದ ಆರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದುವರೆಗೂ 17 ಯಶಸ್ವಿ ಆವೃತ್ತಿಗಳನ್ನು ಮುಗಿಸಿ 18ನೇ ಆವೃತ್ತಿಗೆ ಕಾಲಿಟ್ಟಿದೆ. ಈ ಎಲ್ಲಾ ಸೀಸನ್‌ನಲ್ಲೂ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರದ್ದು.
 

6. ವಿರಾಟ್ ಕೊಹ್ಲಿ ಫುಟ್ಬಾಲ್ ಪ್ರಿಯ;

ವಿರಾಟ್ ಕೊಹ್ಲಿಗೆ ಕ್ರಿಕೆಟ್‌ನಷ್ಟೇ ಫುಟ್ಬಾಲ್ ಮೇಲೂ ಒಲವಿದೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ. ಕೊಹ್ಲಿ, ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಗೋವಾ ಎಫ್‌ಸಿ ತಂಡದ ಸಹಮಾಲೀಕರಾಗಿದ್ದಾರೆ.
 

7. ಮೈಮೇಲಿವೆ ಹಲವಾರು ಟ್ಯಾಟುಗಳು:

ವಿರಾಟ್ ಕೊಹ್ಲಿಯ ದೇಹದ ಮೇಲೆ ಹತ್ತಕ್ಕೂ ಅಧಿಕ ರೀತಿಯ ಟ್ಯಾಟೂಗಳಿವೆ. ಅವರ ಮೈಲಿನ ಟ್ಯಾಟೂಗಳು ಅವರ ನಂಬಿಕೆ ಹಾಗೂ ಕ್ರಿಕೆಟ್ ಕ್ಷೇತ್ರದ ಸಾಧನೆಗಳನ್ನು ಪ್ರತಿಬಿಂಬಿಸುತ್ತಾ ಬಂದಿವೆ.
 

Latest Videos

click me!