ಗೌತಮ್ ಗಂಭೀರ ಟೀಂ ಇಂಡಿಯಾ ಹೆಡ್ ಕೋಚ್ ಅದ ಮೇಲೆ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು!

First Published | Nov 3, 2024, 5:23 PM IST

ಬೆಂಗಳೂರು: ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿ ಬೀಗಿದ್ದ ಟೀಂ ಇಂಡಿಯಾ, ಇದೀಗ ತವರಿನಲ್ಲೇ ಮೊದಲ ಬಾರಿಗೆ ಟೆಸ್ಟ್‌ ಸರಣಿ ವೈಟ್‌ವಾಷ್ ಅನುಭವಿಸಿದೆ. ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಮೇಲೆ ಭಾರತಕ್ಕೆ ಸಿಕ್ಕಿದ್ದು ಸಿಹಿಗಿಂತ ಕಹಿಯೇ ಹೆಚ್ಚು.
 

ರಾಹುಲ್ ದ್ರಾವಿಡ್ ಹೆಡ್ ಕೋಚ್ ಒಪ್ಪಂದಾವಧಿ ಮುಕ್ತಾಯದ ಬಳಿಕ ಗೌತಮ್ ಗಂಭೀರ್ ಕಳೆದ ಜುಲೈನಲ್ಲಿ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ. ಗಂಭೀರ್ ಟೀಂ ಇಂಡಿಯಾ ಕೋಚ್ ಆದ ಬಳಿಕ ಹಲವು ಬೇಡದ ದಾಖಲೆಗಳನ್ನು ನಿರ್ಮಿಸಿದೆ. 

ಕಳೆದ ಆಗಸ್ಟ್‌ನಲ್ಲಿ ನಡೆದ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ಸೋಲು ಅನುಭವಿಸಿತು. ಈ ಮೂಲಕ ಶ್ರೀಲಂಕಾ ಎದುರು ಬರೋಬ್ಬರಿ 27 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಸರಣಿ ಸೋಲು ಅನುಭವಿಸಿತು.

Latest Videos


ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕ ಇದುವರೆಗೂ ಒಂದೇ ಒಂದು ಏಕದಿನ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಸಾಧ್ಯವಾಗಿಲ್ಲ. 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕ್ಯಾಲೆಂಡರ್ ವರ್ಷದಲ್ಲಿ ಟೀಂ ಇಂಡಿಯಾ ಏಕದಿನ ಕ್ರಿಕೆಟ್‌ನಲ್ಲಿ ಇನ್ನೂ ಗೆಲುವಿನ ನಗೆ ಬೀರಲು ಸಾಧ್ಯವಾಗಿಲ್ಲ.

ಇನ್ನು ಭಾರತ ತಂಡವು ನ್ಯೂಜಿಲೆಂಡ್ ಎದುರು ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿತು. ಇದರೊಂದಿಗೆ ನ್ಯೂಜಿಲೆಂಡ್ ತಂಡವು ಬರೋಬ್ಬರಿ 36 ವರ್ಷಗಳ ಬಳಿಕ ಭಾರತದಲ್ಲಿ ಮೊದಲ ಟೆಸ್ಟ್ ಗೆಲುವಿನ ರುಚಿ ಅನುಭವಿಸಿತು. ಕಳೆದ ಮೂರೂವರೆ ದಶಕದಿಂದ ಭಾರತ ತವರಿನಲ್ಲಿ ಕಿವೀಸ್ ಎದುರು ಟೆಸ್ಟ್ ಪಂದ್ಯ ಸೋತಿರಲಿಲ್ಲ.

ಇದಕ್ಕಿಂತ ಹೆಚ್ಚಾಗಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬರೋಬ್ಬರಿ 19 ವರ್ಷಗಳ ಬಳಿಕ ಭಾರತ ಮೊದಲ ಟೆಸ್ಟ್ ಸೋಲಿನ ಕಹಿ ಅನುಭವಿಸಿತು. ಇದು ಗೌತಮ್ ಗಂಭೀರ್ ಕೋಚ್ ಆದ ಮೇಲೆ ಎನ್ನುವುದು ಮತ್ತೊಂದು ಅಪವಾದ.

ಇನ್ನು ಟೀಂ ಇಂಡಿಯಾ ಪುಣೆ ಟೆಸ್ಟ್ ಪಂದ್ಯವನ್ನು ಸೋಲುವ ಮೂಲಕ ಬರೋಬ್ಬರಿ 12 ವರ್ಷಗಳ ಬಳಿಕ ಭಾರತ ತಂಡವು ತವರಿನಲ್ಲಿ ಟೆಸ್ಟ್ ಸರಣಿ ಸೋತು ಮುಖಭಂಗ ಅನುಭವಿಸಿತು.  ಇದಕ್ಕೂ ಮೊದಲು 2012ರಲ್ಲಿ ಭಾರತ ತಂಡವು ಇಂಗ್ಲೆಂಡ್ ಎದುರು ಟೆಸ್ಟ್ ಸರಣಿ ಸೋತಿತ್ತು. ಇದಾದ ನಂತರ ಸತತ 18 ಟೆಸ್ಟ್ ಸರಣಿಗಳಲ್ಲಿ ಭಾರತ ಅಜೇಯ ನಾಗಾಲೋಟ ಮುಂದುವರೆಸಿತ್ತು.
 

ಇದೀಗ ಮುಂಬೈ ಟೆಸ್ಟ್ ಪಂದ್ಯವನ್ನು ಸೋಲುವುದರೊಂದಿಗೆ ಟೀಂ ಇಂಡಿಯಾ, ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತವರಿನಲ್ಲಿ ವೈಟ್‌ವಾಷ್ ಅನುಭವಿಸಿದೆ. ಈ ಹಿಂದೆ ಭಾರತ ಯಾವ ಟೆಸ್ಟ್ ಸರಣಿಯಲ್ಲೂ ವೈಟ್‌ವಾಷ್ ಆಗಿರಲಿಲ್ಲ.

click me!