ಹಾರ್ದಿಕ್ ಪಾಂಡ್ಯ ಮೊದಲೇನಲ್ಲ, ಇಲ್ಲಿದ್ದಾರೆ ನೋಡಿ ಮದುವೆಗೂ ಮುನ್ನ ತಂದೆಯಾದ ಕ್ರಿಕೆಟಿಗರು..!

Suvarna News   | Asianet News
Published : Sep 04, 2020, 05:48 PM IST

ಬೆಂಗಳೂರು: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 2020ರ ಮೇ ತಿಂಗಳಿನಲ್ಲಿ ವಿವಾಹವಾಗಿದ್ದರು. ಇದಾಗಿ ಕೇವಲ ಎರಡು ತಿಂಗಳಿನಲ್ಲೇ ಪಾಂಡ್ಯ ತಂದೆಯಾಗಿ ಪ್ರಮೋಷನ್ ಪಡೆದರು. ಬದಲಾದ ಆಧುನಿಕ ಯುಗದಲ್ಲಿ ಕ್ರೀಡೆ ಹಾಗೂ ಆಟಗಾರರು ಇಬ್ಬರು ಬದಲಾಗುತ್ತಿದ್ದಾರೆ. ಆಟಗಾರರ ಖಾಸಗಿ ಬದುಕು ಈಗ ಖಾಸಗಿಯಾಗಿ ಉಳಿದಿಲ್ಲ. ಕ್ರಿಕೆಟ್‌ ಜಗತ್ತಿನಲ್ಲಿ ಹಲವು ಕ್ರಿಕೆಟಿಗರು ಮದುವೆ ಮಾಡಿಕೊಳ್ಳುವ ಮುನ್ನವೇ ತಂದೆಯಾಗಿದ್ದಾರೆ. ಈ ಪೈಕಿ ಕೆಲವು ಮದುವೆಯಾಗಿ ದಾಂಪತ್ಯ ನಡೆಸುತ್ತಿದ್ದರೆ, ಮತ್ತೆ ಕೆಲವರು ದೂರವಾಗಿದ್ದಾರೆ. ಅಂತಹ ಕ್ರಿಕೆಟಿಗರ ಕಿರು ಪರಿಚಯ ಇಲ್ಲಿದೆ ನೋಡಿ.

PREV
112
ಹಾರ್ದಿಕ್ ಪಾಂಡ್ಯ ಮೊದಲೇನಲ್ಲ, ಇಲ್ಲಿದ್ದಾರೆ ನೋಡಿ ಮದುವೆಗೂ ಮುನ್ನ ತಂದೆಯಾದ ಕ್ರಿಕೆಟಿಗರು..!

1.ವಿನೋದ್ ಕಾಂಬ್ಳಿ

1.ವಿನೋದ್ ಕಾಂಬ್ಳಿ

212

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕೂಡಾ ಮದುವೆಗೂ ಮುಂಚೆ ತಂದೆಯಾಗಿದ್ದರು. ಮೊದಲ ಪತ್ನಿಯಿಂದ ಡೈವರ್ಸ್ ಪಡೆದ ಬಳಿಕ ಕಾಂಬ್ಳಿ ಮಾಡೆಲ್ ಆಂಡ್ರಿಯಾ ಹೆವಿಟ್ ಎನ್ನುವವರ ಜತೆ ಸಂಬಂಧ ಹೊಂದಿದ್ದರು. ಮೂಲಗಳ ಪ್ರಕಾರ ಈ ವೇಳೆ ಕಾಂಬ್ಳಿ ತಂದೆಯಾದರು, ಬಳಿಕ ಆಂಡ್ರಿಯಾ ಅವರನ್ನು ಕಾಂಬ್ಳಿ ಮದುವೆಯಾದರು.

312

2. ಕ್ರಿಸ್ ಗೇಲ್

2. ಕ್ರಿಸ್ ಗೇಲ್

412

ವೆಸ್ಟ್ ಇಂಡೀಸ್ ಹಾಗೂ ಐಪಿಎಲ್ ಸ್ಟಾರ್ ಕ್ರಿಕೆಟಿಗ ಕ್ರಿಸ್ ಗೇಲ್ ಕೂಡಾ ಮದುವೆಗೂ ಮುನ್ನವೇ ಮಗುವಿಗೆ ತಂದೆಯಾದವರು. 2017ರ ಐಪಿಎಲ್ ವೇಳೆ ಗೇಲ್ ಅವರ ಗರ್ಲ್‌ಫ್ರೆಂಡ್ ನತಾಶಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈವರೆಗೂ ಗೇಲ್ ನತಾಶ ಅವರನ್ನು ವಿವಾಹವಾಗಿಲ್ಲ.

512

3. ಜೋ ರೂಟ್

3. ಜೋ ರೂಟ್

612

ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಜೂ ರೂಟ್ ಅವರದ್ದು ಇದೇ ಕಥೆ. ರೂಟ್ 2014ರ ವೇಳೆಯಲ್ಲಿ ಕ್ಯಾರಿ ಕೋಟ್ರೆಲ್‌ ಎನ್ನುವ ಗೆಳತಿಯ ಜತೆ ಡೇಟಿಂಗ್ ಮಾಡುತ್ತಿದ್ದರು. ಈ ಜೋಡಿಗೆ 2017ರಲ್ಲಿ ಮೊದಲ ಮಗು ಜತೆಯಾಯಿತು. ಬಳಿಕ 2018ರಲ್ಲಿ ವಿವಾಹವಾದರು.

712

4. ಡೇವಿಡ್ ವಾರ್ನರ್

4. ಡೇವಿಡ್ ವಾರ್ನರ್

812

ಆಸ್ಟ್ರೇಲಿಯಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೂಡಾ ಲಿವಿಂಗ್ ಟುಗೆದರ್‌ನಲ್ಲಿದ್ದಾಗಲೇ ತಂದೆಯಾದವರು. ವಾರ್ನರ್ ಮಾಡೆಲ್ ಹಾಗೂ ಐರನ್ ವುಮೆನ್‌ ಎಂದೇ ಕರೆಸಿಕೊಳ್ಳುವ ಕ್ಯಾಂಡೈಸ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದರು. ಈ ದಂಪತಿಯ ಕುಟುಂಬಕ್ಕೆ 2014ರಲ್ಲಿ ಮೊದಲ ಮಗಳ ಆಗಮನವಾಯಿತು. ಬಳಿಕ 2015ರಲ್ಲಿ ವಾರ್ನರ್ ಮದುವೆಯಾದರು. ಈಗ ವಾರ್ನರ್‌ ಮೂರು ಮಕ್ಕಳ ತಂದೆ.

912

5. ವಿವಿನ್ ರಿಚರ್ಡ್ಸ್‌

5. ವಿವಿನ್ ರಿಚರ್ಡ್ಸ್‌

1012

ವೆಸ್ಟ್ ಇಂಡಿಸ್ ಕ್ರಿಕೆಟ್‌ ದಿಗ್ಗಜ ವಿವಿನ್ ರಿಚಡ್ಸ್‌ ಕೂಡಾ ಮದುವೆಗೂ ಮುನ್ನ ತಂದೆಯಾದವರು. ವಿವಿನ್ 1980ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಭಾರತದ ನಟಿ ನೀನಾ ಗುಪ್ತಾ ಎನ್ನುವವರ ಪರಿಚಯವಾಯಿತು. ಈ ಜೋಡಿ ಸುದೀರ್ಘ ವರ್ಷಗಳ ಕಾಲ ಡೇಟಿಂಗ್ ನಡೆಸಿದರು. ಬಳಿಕ 1989ರಲ್ಲಿ ಮಸಾಬಾ ಎನ್ನುವ ಹೆಣ್ಣು ಮಗಳಿಗೆ ನೀನಾ ಗುಪ್ತ ಜನ್ಮನೀಡಿದ್ದರು. ರಿಚರ್ಡ್ಸ್‌ ಮೊದಲೇ ಬೇರೆಯವರೊಂದಿಗೆ ವಿವಾಹವಾಗಿದ್ದರಿಂದ ನೀನಾ ಅವರನ್ನು ವಿವಾಹವಾಗಲಿಲ್ಲ. 

1112

6. ಇಮ್ರಾನ್ ಖಾನ್

6. ಇಮ್ರಾನ್ ಖಾನ್

1212

ಪಾಕಿಸ್ತಾನದ ಪ್ರಧಾನ ಮಂತ್ರಿ ಹಾಗೂ ಮಾಜಿ ನಾಯಕ ಇಮ್ರಾನ್ ಖಾನ್ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇಮ್ರಾನ್ ಖಾನ್ ಸೀತಾ ವೈಟ್ ಎನ್ನುವವರ ಜತೆ ಡೇಟಿಂಗ್ ನಡೆಸಿದ್ದರು. ಸೀತಾ ಜೂನ್ 1992ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಹೆಸರು ತೈರನ್ ಜೇಡ್. ಹೆಣ್ಣು ಮಗುವನ್ನು ಇಮ್ರಾನ್ ಖಾನ್ ಒಪ್ಪಿಕೊಂಡಿರಲಿಲ್ಲ. ಸೀತಾ ಮರಣದ ಬಳಿಕ ಡಿಎನ್‌ಎ ಟೆಸ್ಟ್ ಆದರ ಬಳಿಕ ಇಮ್ರಾನ್ ಒಪ್ಪಿಕೊಂಡರಂತೆ.

click me!

Recommended Stories