ಕೋಟಿ-ಕೋಟಿ ಸಂಪಾದಿಸುವ ಧೋನಿ ಕೂಡಾ ಸಾಲದಲ್ಲಿದ್ದಾರೆ ಎಂದರೆ ನೀವು ನಂಬ್ತೀರಾ..?

First Published Sep 1, 2020, 6:45 PM IST

ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಮಿಲಿಯನ್ ಡಾಲರ್ ಟೂರ್ನಿಯ ಹರಾಜಿನಲ್ಲಿ ಆಟಗಾರರಿಗೆ ಫ್ರಾಂಚೈಸಿ ಕೋಟಿ ಕೋಟಿ ಹಣ ನೀಡಿ ಖರೀದಿಸುತ್ತವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫ್ರಾಂಚೈಸಿ ಮಹೇಂದ್ರ ಸಿಂಗ್ ಧೋನಿ ಒಂದು ಐಪಿಎಲ್ ಆವೃತ್ತಿಗೆ ಬರೋಬ್ಬರಿ 15 ಕೋಟಿ ರುಪಾಯಿ ನೀಡುತ್ತದೆ. ಇಷ್ಟೆಲ್ಲಾ ಸಂಪಾದಿಸುವ ಧೋನಿ ಹೆಸರಿನಲ್ಲಿಯೂ ಸುಸ್ತಿ ಬಾಕಿ ಇದೆ ಅಂದ್ರೆ ನಂಬ್ತೀರಾ..? ಜಾರ್ಖಂಡ್ ರಾಜ್ಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಾರ್ಷಿಕ ವರದಿಯ ಪ್ರಕಾರ ಧೋನಿ ಹೆಸರಿನಲ್ಲಿ ಸುಸ್ತಿ ಬಾಕಿ ಇದೆ. 
 

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ವರ್ಷದಲ್ಲಿ ನೂರಾರು ಕೋಟಿ ರುಪಾಯಿ ಸಂಪಾದಿಸುತ್ತಾರೆ.
undefined
2013ರಲ್ಲಿ ಧೋನಿ ಅತಿಹೆಚ್ಚು ಸಂಪಾದನೆ ಮಾಡುವ ಕ್ರಿಕೆಟಿಗ ಎನಿಸಿಕೊಂಡಿದ್ದರು. ಒಂದು ವರದಿಯ ಪ್ರಕಾರ ಧೋನಿ ವರ್ಷದಲ್ಲಿ 192 ಕೋಟಿ ರುಪಾಯಿಗೂ ಅಧಿಕ ಸಂಪಾದನೆ ಮಾಡುತ್ತಾರೆ.
undefined
ರಾಂಚಿಯ ಸಣ್ಣ ಹಳ್ಳಿಯಿಂದ ಬಂದ ಧೋನಿ ಇಂದು ವಿಶ್ವಕ್ರಿಕೆಟ್ ಕಂಡ ದಿಗ್ಗಜ ನಾಯಕನಾಗಿ ಬೆಳೆದು ನಿಂತಿದ್ದಾರೆ. ಕ್ರಿಕೆಟ್ ಹಾಗೂ ಜಾಹೀರಾತಿನ ಮೂಲಕ ಧೋನಿ ಕೋಟಿ ಕೋಟಿ ಸಂಪಾದಿಸುತ್ತಾರೆ. ಅವರ ವ್ಯವಹಾರ ಸಾವಿರಾರು ಕೋಟಿ ರುಪಾಯಿ ಲೆಕ್ಕದಲ್ಲಿದೆ.
undefined
ಇಷ್ಟೆಲ್ಲಾ ಸಂಪಾದನೆ ಮಾಡುವ ಧೋನಿ ಕೂಡಾ ಸಾಲ ಬಾಕಿ ಇದೆ. ಈ ವಿಚಾರ ಕೇಳಿ ನಿಮಗೂ ಅಚ್ಚರಿಯಾಗಬಹುದು. ಜಾರ್ಖಂಡ್ ರಾಜ್ಯ ಕ್ರಿಕೆಟ್‌ ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಈ ವಿಚಾರ ಬಯಲಾಗಿದೆ.
undefined
ಜಾರ್ಖಂಡ್ ರಾಜ್ಯ ಕ್ರಿಕೆಟ್‌ ಸಂಸ್ಥೆ(JSCA)ಯ ವಾರ್ಷಿಕ ವರದಿಯ ಪ್ರಕಾರ ಧೋನಿ ಹೆಸರಿನಲ್ಲಿ 1800 ರುಪಾಯಿಗೂ ಅಧಿಕ ಸಾಲವಿದೆ. ಆದರೆ ಅಧಿಕಾರಿಗಳು ಯಾವ ಕಾರಣಕ್ಕೆ ಸಾಲವಿದೆ ಎಂದು ಹೇಳಲು ನಿರಾಕರಿಸಿದ್ದಾರೆ.
undefined
ಈ ಬಗ್ಗೆ JSCA ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಇದೆಲ್ಲ ಶುದ್ದ ಸುಳ್ಳು ಎಂದಿದ್ದಾರೆ. ಅಂದಹಾಗೆ ಧೋನಿ ಕೂಡಾ JSCA ಸದಸ್ಯರಾಗಿದ್ದಾರೆ.
undefined
1800 ರುಪಾಯಿ ಬಾಕಿ ಧೋನಿಗೆ ಯಾವ ಲೆಕ್ಕವೂ ಅಲ್ಲ. ಆದರೆ JSCA ರಿಪೋರ್ಟ್ ಬಳಿಕ ಇದಕ್ಕೆ ಮತ್ತಷ್ಟು ತೂಕ ಬಂದಂತೆ ಆಗಿದೆ.
undefined
13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ ಸಜ್ಜಾಗಿದ್ದು, 4ನೇ ಕಪ್‌ ಮೇಲೆ ಕಣ್ಣಿಟ್ಟಿದೆ.
undefined
click me!