ಶಾಕಿಂಗ್ ನ್ಯೂಸ್: 250 ಅಡಿ ಪ್ರಪಾತದಿಂದ ಬಿದ್ದು ಮಾಜಿ ಕ್ರಿಕೆಟಿಗ ಸಾವು..!

Suvarna News   | Asianet News
Published : Sep 04, 2020, 03:57 PM IST

ಮುಂಬೈ: ಮಹಾರಾಷ್ಟ್ರದ ಮಾಜಿ ರಣಜಿ ಕ್ರಿಕೆಟಿಗ ಶೇಖರ್ ಗೌಳಿ(45) ಭಾರೀ ಎತ್ತರದ ಕಟ್ಟಡದಿಂದ ಬಿದ್ದು ಕೊನೆಯುಸಿರೆಳೆದಿದ್ದಾರೆ. ಮಾಜಿ ಕ್ರಿಕೆಟಿಗ ಶೇಖರ್ ತಮ್ಮ ಸ್ನೇಹಿತರ ಜತೆಗೂಡಿ ಟ್ರಕ್ಕಿಂಗ್‌ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಬರೋಬ್ಬರಿ  250 ಅಡಿ ಆಳವಿರುವ ಪ್ರಪಾತಕ್ಕೆ ಬಿದ್ದು ಕೊನೆಯುಸಿರೆಳೆದಿದ್ದಾರೆ. ಶೇಖರ್ ಗೌಳಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 2 ಪಂದ್ಯಗಳಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದಾರೆ. ಶೇಖರ್ ತನ್ನಿಬ್ಬರು ಸ್ನೇಹಿತರ ಜತೆ ನಾಶಿಕ್‌ನ ಪಶ್ಚಿಮ ಘಾಟ್‌ ಪ್ರದೇಶದಲ್ಲಿ ಟ್ರಕ್ಕಿಂಗ್‌ಗೆ ಹೋದಾಗ ಈ ದುರ್ಘಟನೆ ಸಂಭವಿಸಿದೆ.   

PREV
17
ಶಾಕಿಂಗ್ ನ್ಯೂಸ್: 250 ಅಡಿ ಪ್ರಪಾತದಿಂದ ಬಿದ್ದು ಮಾಜಿ ಕ್ರಿಕೆಟಿಗ ಸಾವು..!

ಶೇಖರ್ ಗೌಳಿ ಬಲಗೈ ಬ್ಯಾಟ್ಸ್‌ಮನ್ ಹಾಗೂ ಲೆಗ್ ಸ್ಪಿನ್ನರ್ ಆಗಿದ್ದರು. ಅವರು 1997ರಿಂದ 2002ರ ಅವಧಿಯಲ್ಲಿ ಎರಡು ಪ್ರಥಮ ದರ್ಜೆ ಪಂದ್ಯಗಳನ್ನಾಡಿ ಮೂರು ವಿಕೆಟ್ ಕಬಳಿಸಿದ್ದರು.

27

ಶೇಖರ್ ಗೌಳಿ ನಿಧನಕ್ಕೆ ಕ್ರಿಕೆಟ್‌ ಜಗತ್ತು ಕಂಬನಿ ಮಿಡಿದಿದೆ. ಶೇಖರ್ ಗೌಳಿ ಪತ್ನಿ ಓರ್ವ ಮಗ ಹಾಗೂ ಮಗಳನ್ನು ಅಗಲಿದ್ದಾರೆ. 

37

ಮಂಗಳವಾರ ಗೌಳಿ ತನ್ನಿಬ್ಬರು ಸ್ನೇಹಿತರ ಜತೆಗೂಡಿ ನಾಸಿಕ್‌ನಲ್ಲಿರುವ ಇಗತ್‌ಪುರಿ ಎನ್ನುವ ಬೆಟ್ಟಕ್ಕೆ ಚಾರಣ ಹೋಗಿದ್ದರು ಎನ್ನಲಾಗಿದೆ.

47

ಟ್ರಕ್ಕಿಂಗ್ ವೇಳೆ ಆಯ ತಪ್ಪಿ ಪ್ರಪಾತಕ್ಕೆ ಬಿದ್ದಿದ್ದಾರೆ. ಸಾಕಷ್ಟು ಹರಸಾಹಸದ ಬಳಿಕ ಶೇಖರ್ ಗೌಳಿ ಅವರ ಮೃತದೇಹವನ್ನು ಬುಧವಾರ ಹೊರತಗೆಯಲಾಗಿದೆ.

57

ಶೇಖರ್ ಗೌಳಿ ನಿಧನಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆ ಸಂತಾಪ ಸೂಚಿಸಿದೆ. ನಮ್ಮ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಮಹರಾಷ್ಟ್ರ ಕ್ರಿಕೆಟ್ ತಂಡದ ಟ್ರೈನರ್ ಅವಘಢದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಕುಟುಂಬಸ್ಥರಿಗೆ ಹಾಗೂ ಆಪ್ತರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದೆ.

67

ಶೇಖರ್ ಗೌಳಿ ಓರ್ವ ಆಲ್ರೌಂಡರ್ ಆಟಗಾರರಾಗಿದ್ದು, ಎರಡು ಬಾರಿ ರಣಜಿ ಟೂರ್ನಿಯಲ್ಲಿ ಮಹರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದಾರೆ.

77

ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಮಹಾರಾಷ್ಟ್ರ ಅಂಡರ್ 19 ತಂಡದಲ್ಲಿ ಕೋಚ್‌ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories