ಈ 5 ಸ್ಟಾರ್ ಕ್ರಿಕೆಟಿಗರಿಗೆ ಇದೇ ಕೊನೆಯ ಐಪಿಎಲ್; ಈ ಪಟ್ಟಿಯಲ್ಲಿವೆ ಅಚ್ಚರಿ ಹೆಸರುಗಳು!

Published : May 08, 2025, 04:28 PM IST

2025ರ ಇಂಡಿಯನ್‌ ಪ್ರೀಮಿಯರ್ ಪ್ರೀಮಿಯರ್ ಲೀಗ್ ಟೂರ್ನಿಯು ಕೆಲವು ಕ್ರಿಕೆಟಿಗರ ಪಾಲಿಗೆ ಕೊನೆಯ ಐಪಿಎಲ್ ಆಗುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ 5 ದಿಗ್ಗಜ ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

PREV
16
ಈ 5 ಸ್ಟಾರ್ ಕ್ರಿಕೆಟಿಗರಿಗೆ ಇದೇ ಕೊನೆಯ ಐಪಿಎಲ್; ಈ ಪಟ್ಟಿಯಲ್ಲಿವೆ ಅಚ್ಚರಿ ಹೆಸರುಗಳು!
ಐಪಿಎಲ್ 2025 ರಲ್ಲಿ ನಿವೃತ್ತಿ ಹೊಂದುವ 7 ಆಟಗಾರರು

ಐಪಿಎಲ್ 2025 ಸೀಸನ್ ಕೊನೆಯ ಹಂತಕ್ಕೆ ಬಂದಿದೆ. ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇ ಆಫ್ ಹಂತಕ್ಕೆ ತಲುಪುವ ಸಾಧ್ಯತೆಗಳಿವೆ. ಈ ಹಂತದಲ್ಲಿ, ಕೆಲವು ಪ್ರಮುಖ ಆಟಗಾರರು ಈ ಐಪಿಎಲ್ ಮುಗಿಯುತ್ತಿದ್ದಂತೆಯೇ ನಿವೃತ್ತಿ ಹೊಂದಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

26
1. ಮಹೇಂದ್ರ ಸಿಂಗ್ ಧೋನಿ (ಸಿಎಸ್‌ಕೆ)

43 ವರ್ಷದ ಎಂ ಎಸ್ ಧೋನಿಯಿಂದ ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸರಣಿಯಲ್ಲಿ ಕೇವಲ 76 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 30 ಮತ್ತು ಸ್ಟ್ರೈಕ್ ರೇಟ್ 138.18. ಬ್ಯಾಟಿಂಗ್ ಜೊತೆಗೆ ಧೋನಿಯ ನಾಯಕತ್ವ ಕೂಡ ಸಾಧಾರಣವಾಗಿದೆ. ಹೀಗಾಗಿ ಸಿಎಸ್‌ಕೆ ಹೊಸ ತಂಡವನ್ನು ಕಟ್ಟುವ ಸಮಯ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಧೋನಿ ನಿವೃತ್ತಿ ಘೋಷಿಸುವ ನಿರೀಕ್ಷೆಯಿದೆ.

36
2. ರವಿಚಂದ್ರನ್ ಅಶ್ವಿನ್ (ಸಿಎಸ್ಕೆ)

ಐಪಿಎಲ್ 2025 ರಲ್ಲಿ ಸಿಎಸ್‌ಕೆ ಪರ ಆಡಿದ ರವಿಚಂದ್ರನ್ ಅಶ್ವಿನ್, 8 ಕ್ಕಿಂತ ಹೆಚ್ಚು ಎಕಾನಮಿ ದರದೊಂದಿಗೆ 7 ಪಂದ್ಯಗಳಲ್ಲಿ ಕೇವಲ 5 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ ನಲ್ಲೂ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಅಶ್ವಿನ್‌ಗೆ ಇದೇ ಕೊನೆಯ ಐಪಿಎಲ್ ಆಗುವ ಸಾಧ್ಯತೆಯಿದೆ.

46
3. ಫಾಫ್ ಡು ಪ್ಲೆಸಿಸ್ (ಡೆಲ್ಲಿ)

ಐಪಿಎಲ್ 2025 ರಲ್ಲಿ ಡೆಲ್ಲಿ ಪರ ಆಡುತ್ತಿರುವ 40 ವರ್ಷದ ಫಾಫ್ ಡು ಪ್ಲೆಸಿಸ್ ಏರುಪೇರು ಆಟ ಪ್ರದರ್ಶಿಸುತ್ತಿದ್ದಾರೆ. 7 ಪಂದ್ಯಗಳಲ್ಲಿ ಕೇವಲ 185 ರನ್ ಗಳಿಸಿದ್ದಾರೆ. ಹೀಗಾಗಿ ಮುಂದಿನ ಸೀಸನ್‌ ಐಪಿಎಲ್‌ಗೂ ಮುನ್ನ ಫಾಫ್ ಐಪಿಎಲ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.

56
4. ಅಜಿಂಕ್ಯ ರಹಾನೆ

ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆಗೆ ಇದೀಗ 36 ವರ್ಷ. ಈ ಆವೃತ್ತಿಯ ಐಪಿಎಲ್‌ನಲ್ಲಿ ರಹಾನೆ 9 ಇನ್ನಿಂಗ್ಸ್‌ಗಳಿಂದ ಕೇವಲ 271 ರನ್ ಬಾರಿಸಿದ್ದಾರೆ. ಅವರ ಸ್ಟ್ರೈಕ್‌ರೇಟ್ ಕೂಡಾ ಸಾಧಾರಣವಾಗಿದೆ. ಹೀಗಾಗಿ ರಹಾನೆ ಅನ್‌ಸೋಲ್ಡ್ ಆಗುವ ಮುನ್ನ ಐಪಿಎಲ್‌ಗೆ ವಿದಾಯ ಹೇಳುವ ಸಾಧ್ಯತೆಯಿದೆ.

66
5. ಇಶಾಂತ್ ಶರ್ಮಾ:

ಗುಜರಾತ್ ಟೈಟಾನ್ಸ್ ತಂಡದ ಅನುಭವಿ ವೇಗಿ ಇಶಾಂತ್ ಶರ್ಮಾಗೆ ಈಗ 36 ವರ್ಷ ವಯಸ್ಸು. ಗುಜರಾತ್ ಪರ ಇಶಾಂತ್ ಶರ್ಮಾ 6 ಪಂದ್ಯಗಳನ್ನಾಡಿ ಕೇವಲ 3 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ. ಹೀಗಾಗಿ ಇಶಾಂತ್ ಶರ್ಮಾ ಕೂಡಾ ಈ ಐಪಿಎಲ್ ಮುಗಿಯುತ್ತಿದ್ದಂತೆಯೇ ಐಪಿಎಲ್‌ಗೆ ಗುಡ್‌ ಬೈ ಹೇಳಿದ್ರೆ ಅಚ್ಷರಿಯೇನಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories