ಧೋನಿ ಸಿಎಸ್‌ಕೆ ತಂಡದಿಂದ ಕೈಬಿಡಬಹುದಾದ ಟಾಪ್-5 ಆಟಗಾರರು
IPL 2025-CSK : ಐಪಿಎಲ್ 2025 ಕ್ಕೆ 10 ತಂಡಗಳು ಸಜ್ಜಾಗುತ್ತಿವೆ. ಮುಂಬರುವ ಐಪಿಎಲ್ ಸೀಸನ್‌ಗೆ ಮುನ್ನ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಐಪಿಎಲ್ ನಿಯಮಗಳ ಪ್ರಕಾರ ತಂಡಗಳಲ್ಲಿ ಹಲವು ಬದಲಾವಣೆಗಳು ಆಗಲಿವೆ. ಪ್ರಸ್ತುತ ಆಟಗಾರರಲ್ಲಿ ನಾಲ್ವರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಯಾವ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತವೆ. ಯಾರನ್ನು ಬಿಡುತ್ತಾರೆ ಎಂಬುದು ಕ್ರಿಕೆಟ್ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಧೋನಿ ಸಿಎಸ್‌ಕೆ ತಂಡದಿಂದ ಕೈಬಿಡಬಹುದಾದ ಟಾಪ್-5 ಆಟಗಾರರು
ಶಾರ್ದೂಲ್ ಠಾಕೂರ್
ಮುಂಬೈನ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಕಳೆದ ಸೀಸನ್‌ನಲ್ಲಿ 9 ಪಂದ್ಯಗಳಲ್ಲಿ ಕೇವಲ 5 ವಿಕೆಟ್‌ಗಳನ್ನು ಪಡೆದಿದ್ದಾರೆ. 4 ಕೋಟಿ ರೂ.ಗಳಿಗೆ ಅವರನ್ನು ಖರೀದಿಸಲಾಗಿತ್ತು. ಆದರೆ ಅವರು ನಿರೀಕ್ಷೆಗಳಿಗೆ ತಕ್ಕಂತೆ ರನ್ ಗಳಿಸಲು ವಿಫಲರಾದರು. ಹೀಗಾಗಿ ಸಿಎಸ್‌ಕೆ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಡುವ ಸಾಧ್ಯತೆಯಿದೆ.
ಧೋನಿ ಸಿಎಸ್‌ಕೆ ತಂಡದಿಂದ ಕೈಬಿಡಬಹುದಾದ ಟಾಪ್-5 ಆಟಗಾರರು
ಮೊಯಿನ್ ಅಲಿ
ಇಂಗ್ಲೆಂಡ್ ಆಲ್‌ರೌಂಡರ್ ಮೊಯಿನ್ ಅಲಿ ಐಪಿಎಲ್ 2024 ರಲ್ಲಿ 8 ಪಂದ್ಯಗಳಲ್ಲಿ ಕೇವಲ 128 ರನ್ ಗಳಿಸಿ 2 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಈ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಚೆನ್ನೈ ತಂಡ ಮೊಯಿನ್ ಅಲಿ ಅವರನ್ನು ಕೂಡ ಕೈಬಿಡುವ ಸಾಧ್ಯತೆಯಿದೆ.
ಧೋನಿ ಸಿಎಸ್‌ಕೆ ತಂಡದಿಂದ ಕೈಬಿಡಬಹುದಾದ ಟಾಪ್-5 ಆಟಗಾರರು
ಡೇರಿಲ್ ಮಿಚೆಲ್
ನ್ಯೂಜಿಲೆಂಡ್ ಆಲ್‌ರೌಂಡರ್ ಡೇರಿಲ್ ಮಿಚೆಲ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 14 ಕೋಟಿ ರೂ.ಗಳಿಗೆ ಖರೀದಿಸಿತ್ತು. ಆದರೆ ಐಪಿಎಲ್ 2024 ರಲ್ಲಿ ಅವರಿಂದ ಕೇವಲ 318 ರನ್ ಮತ್ತು 1 ವಿಕೆಟ್ ಮಾತ್ರ ಬಂದಿದೆ. ಹೀಗಾಗಿ ಮಿಚೆಲ್ ಅವರನ್ನು ಕೂಡ ಚೆನ್ನೈ ಕೈಬಿಡುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ.
ಧೋನಿ ಸಿಎಸ್‌ಕೆ ತಂಡದಿಂದ ಕೈಬಿಡಬಹುದಾದ ಟಾಪ್-5 ಆಟಗಾರರು
ದೀಪಕ್ ಚಹರ್
ರಾಜಸ್ಥಾನ್ ಆಲ್‌ರೌಂಡರ್ ದೀಪಕ್ ಚಹರ್ ಅವರನ್ನು ಕೂಡ ಚೆನ್ನೈ ಸೂಪರ್ ಕಿಂಗ್ಸ್ ಭಾರಿ ಮೊತ್ತಕ್ಕೆ ಹರಾಜಿನಲ್ಲಿ ಖರೀದಿಸಿತ್ತು. ಆದರೆ ಕಳೆದ 2 ಐಪಿಎಲ್ ಸೀಸನ್‌ಗಳಲ್ಲಿ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೀಪಕ್ ಚಹರ್ ಐಪಿಎಲ್ 2024 ರಲ್ಲಿ ಕೇವಲ 8 ಪಂದ್ಯಗಳನ್ನು ಆಡಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ.
ಧೋನಿ ಸಿಎಸ್‌ಕೆ ತಂಡದಿಂದ ಕೈಬಿಡಬಹುದಾದ ಟಾಪ್-5 ಆಟಗಾರರು
ಅಜಿಂಕ್ಯ ರಹಾನೆ
ಮುಂಬೈ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅವರನ್ನು ಚೆನ್ನೈ ತಂಡ 50 ಲಕ್ಷ ರೂ.ಗಳ ಮೂಲ ಬೆಲೆಗೆ ಖರೀದಿಸಿತ್ತು. ಆದರೆ, ಐಪಿಎಲ್ 2024 ರಲ್ಲಿ ಅವರ ಪ್ರದರ್ಶನ ಸಾಧಾರಣವಾಗಿತ್ತು. ಅಜಿಂಕ್ಯ ರಹಾನೆ ಐಪಿಎಲ್ 2023 ರಲ್ಲಿ 172 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ 326 ರನ್ ಗಳಿಸಿ ಗಮನ ಸೆಳೆದಿದ್ದರು. ಆದರೆ 2024 ರಲ್ಲಿ ರಹಾನೆ ಕೇವಲ 123 ಸ್ಟ್ರೈಕ್ ರೇಟ್‌ನೊಂದಿಗೆ 242 ರನ್ ಗಳಿಸಿದರು.