ಈ ಕಾರಣಕ್ಕೆ ಹಾರ್ದಿಕ್ ಪಾಂಡ್ಯ, ನತಾಶಾ ಬೇರೆಯಾದ್ರಂತೆ, ಬಯಲಾಯ್ತು ಸಂಸಾರದ ಗುಟ್ಟು!

First Published | Aug 24, 2024, 2:45 PM IST

2020ರ ಮೇ ತಿಂಗಳಿನಲ್ಲಿ ಮದುವೆಯಾಗಿದ್ದ ಹಾರ್ದಿಕ್ ಪಾಂಡ್ಯ-ನತಾಶಾ ಸ್ಟ್ಯಾಂಕೋವಿಚ್ ಜೋಡಿ ಕಳೆದ ಜುಲೈ 2024ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಅಷ್ಟಕ್ಕೂ ಸುಂದರವಾಗಿದ್ದ ಈ ಜೋಡಿ ಬೇರೆ-ಬೇರೆಯಾಗಿದ್ದೇಕೆ ಎನ್ನುವ ಕುತೂಹಲಕ್ಕೆ ಇದೀಗ ಕೊನೆಗೂ ತೆರೆಬಿದ್ದಿದೆ

ನತಾಶಾ ಸ್ಟ್ಯಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ಪರಸ್ಪರ ಸಮ್ಮತಿಯಿಂದ ಬೇರ್ಪಟ್ಟಿದ್ದರು. ಈ ವಿಚಾರವನ್ನು ಈ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕವೇ ಖಚಿತಪಡಿಸಿದ್ದರು.

ಕಳೆದೊಂದು ವರ್ಷದಿಂದಲೂ ಈ ತಾರಾ ಜೋಡಿಯ ನಡುವೆ ಮನಸ್ತಾಪಗಳು ಏರ್ಪಟ್ಟಿವೆ ಎಂಬಂತಹ ಮಾತುಗಳು ಹರಿದಾಡುತ್ತಿದ್ದವು. ಇದೀಗ ಈ ಜೋಡಿ ಬೇರ್ಪಟ್ಟಿದ್ದೇಕೆ ಎನ್ನುವುದನ್ನು ಅವರ ಕುಟುಂಬದ ಆತ್ಮೀಯರೊಬ್ಬರು ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.
 

Tap to resize

ಹಾರ್ದಿಕ್ ಪಾಂಡ್ಯಗೆ ನತಾಶಾ ತಮಗೆ ಇಷ್ಟಬಂದಂತೆ ಇರುವುದನ್ನು ಸಹಿಸಲಿಲ್ಲವಂತೆ. ಆತ ತಾನು ಅಂದುಕೊಂಡಂತೆ ನತಾಶಾ ಇರಬೇಕು ಎಂದು ಬಯಸಿದ್ದರು. ಇದೇ ವಿಚಾರಕ್ಕೆ ಪಾಂಡ್ಯ-ನತಾಶಾ ದಾಂಪತ್ಯದಲ್ಲಿ ಬಿರುಕು ಮೂಡುವಂತೆ ಮಾಡಿತ್ತು.
 

ಇನ್ನು ಈ ಕುಟುಂಬಕ್ಕೆ ಹತ್ತಿರವಿದ್ದ ವ್ಯಕ್ತಿಯೊಬ್ಬರು, ನತಾಶಾ, ಹಾರ್ದಿಕ್ ನಡವಳಿಕೆಯಿಂದ ಬಳಲಿ ಹೋಗಿದ್ದರು. ಇಬ್ಬರ ಒಳಿತನ ದೃಷ್ಟಿಯಿಂದ ಬೇರ್ಪಡುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ
 

ಹಾರ್ದಿಕ್ ಪಾಂಡ್ಯ ದುರಂಕಾರದ ವ್ಯಕ್ತಿತ್ವ ಹೊಂದಿದ್ದರು. ಅವನೊಂದಿಗೆ ಜೀವನ ಸಾಗಿಸುವುದು ಬೇಸರದ ಸಂಗತಿ ಎನಿಸತೊಡಗಿತು. ಹೀಗಾಗಿ ನತಾಶಾ, ಪಾಂಡ್ಯ ಜತೆ  ಮುಂದುವರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವಳು ಬೇರ್ಪಡಲು ತೀರ್ಮಾನಿಸಿದರು ಎಂದು ಟೈಮ್ಸ್ ನೌ ವರದಿ ಮಾಡಿದೆ ಹೇಳಿದೆ.
 

ಹಾರ್ದಿಕ್ ಪಾಂಡ್ಯ ನಡವಳಿಕೆ ಸುಧಾರಿಸಿಕೊಳ್ಳಲು ನತಾಶಾ ಸಾಕಷ್ಟು ಬಾರಿ ಚರ್ಚಿಸಿದರು. ಆದರೆ ಆತ ಬದಲಾಗದಿದ್ದಾಗ, ಕಠಿಣವೆನಿಸಿದರೂ ಅನಿವಾರ್ಯವಾಗಿ ವಿಚ್ಛೇದನಾ ಪಡೆಯಲು ಮುಂದಾದರು ಎಂದು ನತಾಶಾ ಅವರ ಆತ್ಮೀಯರೊಬ್ಬರು ಹೇಳಿಕೊಂಡಿದ್ದಾರೆ.

ವಿಚ್ಛೇದನದ ಸುದ್ದಿ ಘೋಷಿಸುವ ವೇಳೆ ಇದು 'ಕಠಿಣ ನಿರ್ಧಾರ' ಎಂದು ಹೇಳಿದ್ದರು ಮತ್ತು ಅವರು ತಮ್ಮ ಮಗು ಅಗಸ್ತ್ಯನನ್ನು ಸಹ-ಪಾಲನೆ ಮಾಡುವುದನ್ನು ಮುಂದುವರೆಸುವುದಾಗಿಯೂ ಹೇಳಿದ್ದರು

Latest Videos

click me!