ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಟಾಪ್ 5 ಅನ್‌ಕ್ಯಾಪ್ಡ್ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
ಇಂಡಿಯನ್ ಪ್ರೀಮಿಯರ್ ಲೀಗ್ ಯುವ ಕ್ರಿಕೆಟಿಗರ ಪಾಲಿಗೆ ತಮ್ಮ ಸಾಮರ್ಥ್ಯ ಅನಾವರಣ ಮಾಡಲು ಅತ್ಯುತ್ತಮ ವೇದಿಕೆ ಎನಿಸಿದ್ದು, ಪ್ರತಿವರ್ಷ ಹೊಸ ಹೊಸ ಪ್ರತಿಭೆಗಳು ಉಗಮಿಸುತ್ತಿದ್ದಾರೆ.
27
5 ಅನ್‌ಕ್ಯಾಪ್ಡ್ ಆಟಗಾರರ ಪರಿಚಯ
2025ರಲ್ಲೂ ಅಂತಹ ಕೆಲವು ಆಟಗಾರರ ಉಗಮಕ್ಕೆ 18ನೇ ಆವೃತ್ತಿಯ ಐಪಿಎಲ್ ಸಾಕ್ಷಿಯಾಗಿದೆ. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಟೀಂ ಇಂಡಿಯಾ ಬಾಗಿಲು ಬಡಿಯುತ್ತಿರುವ 5 ಯುವ ಅನ್‌ಕ್ಯಾಪ್ಡ್ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
37
5. ಆಯುಷ್ ಬದೋನಿ:
ಲಖನೌ ಸೂಪರ್ ಜೈಂಟ್ಸ್ ಪರ ಸಾಮಾನ್ಯವಾಗಿ 5 ಇಲ್ಲವೇ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಆಯುಷ್ ಬದೋನಿ ಲಖನೌ ಸೂಪರ್ ಜೈಂಟ್ಸ್ ಪರ 148ರ ಸ್ಟ್ರೈಕ್‌ರೇಟ್‌ನಲ್ಲಿ 329 ರನ್ ಸಿಡಿಸಿ ಅಬ್ಬರಿಸಿದ್ದಾರೆ.
47
4. ಶಶಾಂಕ್ ಸಿಂಗ್:
ಪಂಜಾಬ್ ಕಿಂಗ್ಸ್ ಪರ ಮ್ಯಾಚ್ ಫಿನಿಶರ್ ಪಾತ್ರವನ್ನು ಬಹುತೇಕ ಪಂದ್ಯಗಳಲ್ಲಿ ಅಚ್ಚುಕಟ್ಟಾಗಿ ನಿಭಾಯಿಸಿದ ಶಶಾಂಕ್ ಸಿಂಗ್ 350 ರನ್ ಸಿಡಿಸಿ ಮಿಂಚಿದ್ದಾರೆ.
57
3. ನೆಹಾಲ್ ವದೇರಾ;
ಪಂಜಾಬ್ ಕಿಂಗ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ವದೇರಾ ಮಿಂಚಿದ್ದರು. ವದೇರಾ 369 ರನ್ ಸಿಡಿಸುವ ಮೂಲಕ ತಂಡ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
67
2. ಪ್ರಿಯಾನ್ಶ್ ಆರ್ಯಾ:
3.8 ಕೋಟಿ ರುಪಾಯಿಗೆ ಪಂಜಾಬ್ ಕಿಂಗ್ಸ್ ತಂಡ ಕೂಡಿಕೊಂಡ ಯುವ ಆರಂಭಿಕ ಬ್ಯಾಟರ್ ಪ್ರಿಯಾನ್ಶ್ ಆರ್ಯಾ ಒಂದು ಶತಕ ಸಹಿತ 178ರ ಸ್ಟ್ರೈಕ್‌ರೇಟ್‌ನಲ್ಲಿ 475 ರನ್ ಸಿಡಿಸಿ ಅಬ್ಬರಿಸಿದ್ದು, ಟೀಂ ಇಂಡಿಯಾಗೆ ಎಂಟ್ರಿಕೊಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
77
1. ಪ್ರಭ್‌ಸಿಮ್ರನ್ ಸಿಂಗ್:
ಪಂಜಾಬ್ ಕಿಂಗ್ಸ್‌ನ ಮತ್ತೋರ್ವ ಆರಂಭಿಕ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ತೋರುವ ಮೂಲಕ ಪಂಜಾಬ್ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಭ್‌ಸಿಮ್ರನ್ ಸಿಂಗ್ 549 ರನ್ ಸಿಡಿಸಿ ಮಿಂಚಿದ್ದರು.