ಸನ್‌ರೈಸರ್ಸ್ ಪ್ರದರ್ಶನ ಬಗ್ಗೆ ಕಾವ್ಯಾ ಮಾರನ್ ಗರಂ, ಐವರು ಆಟಗಾರರಿಗೆ ಗೇಟ್‌ಪಾಸ್?

Published : Jun 07, 2025, 08:34 PM IST

ಸನ್‌ರೈಸರ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಇದೀಗ ತಂಡದ ಮಾಲಕಿ ಕಾವ್ಯಾ ಮಾರನ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದಾರೆ. ಐವರು ಆಟಾಗಾರರಿಗೆ ಗೇಟ್ ಪಾಸ್ ನೀಡಲು ಮುಂದಾಗಿದ್ದಾರೆ. 

PREV
17
ಸನ್‌ರೈಸರ್ಸ್ ಹೈದಬಾಬಾದ್ ತಂಡಕ್ಕೆ ಮೇಜರ್ ಸರ್ಜರಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿ SRH ಕಹಿ ನೆನಪುಗಳೇ ಹೆಚ್ಚಾಗಿದೆ. ತಂಡಕ್ಕೆ ಆರಂಭಿಕ ಪಂದ್ಯಗಳಲ್ಲಿ ಸೋಲುಗಳ ಸರಮಾಲೆಯೇ ಎದುರಾಯಿತು. ಇದರಿಂದ ತಂಡ ಪ್ಲೇಆಫ್‌ನಿಂದ ಹೊರಗುಳಿಯಿತು. ಇದಕ್ಕೆ ಕೆಲವು ಆಟಗಾರರ ಕಳಪೆ ಪ್ರದರ್ಶನವೂ ಕಾರಣವಾಗಿದೆ. ಇದು ತಂಡದ ಮಾಲಕಿ ಕಾವ್ಯ ಮಾರನ್ ಅಸಮಾಧಾನಕ್ಕೂ ಕಾರಣವಾಗಿದೆ.

27
ಐವರಿಗೆ ಗೇಟ್ ಪಾಸ್

ಹೈದರಬಾದ್ ತಂಡದ ಕಳಪೆ ಪ್ರದರ್ಶನದಿಂದ ಸರ್ಜರಿ ಆಗಲಿದೆ. ಐವರು ಆಟಗಾರರನ್ನು ತಂಡದಿಂದ ಕೈಬಿಡುವ ಬಗ್ಗೆ ಮ್ಯಾನೇಜ್ಮೆಂಟ್ ಜೊತೆ ಭಾರಿ ಚರ್ಚೆ ನಡೆಸಲಾಗಿದೆ. ಮಾಲಕಿ ಕಾವ್ಯ ಮಾರಾನ್ ಕೆೈಗೆ ಈಗಾಗಲೇ ಆಟಗಾರರ ಪಟ್ಟಿ ನೀಡಲಾಗಿದೆ ಅನ್ನೋ ಮಾಹಿತಿಗಳು ಬಹಿರಂಗವಾಗಿದೆ.  ಆದರೆ ಕಳಪೆ ಪ್ರದರ್ಶನ ನೀಡಿದ ಆಟಗಾರರು ಯಾರು? 

37
ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ ಐಪಿಎಲ್ 2025 ರಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. 9 ಪಂದ್ಯಗಳಲ್ಲಿ ಕೇವಲ 6 ವಿಕೆಟ್ ಪಡೆದರು. ಟೀಂ ಇಂಡಿಯಾದ ಪ್ರಮುಖ ವೇಗಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದರು. ಗಾಯದಿಂದ ಚೇತರಿಸಿಕೊಂಡು ಆಡಿದ್ದರೂ ಶಮಿಗೆ ವಿಕೆಟ್ ಬೀಳಲಿಲ್ಲ. 

47
ಆಡಮ್ ಜಂಪಾ

ಆಡಮ್ ಜಂಪಾ ಕೇವಲ 2 ಪಂದ್ಯಗಳನ್ನು ಆಡಿ 11.75 ರ ಇಕಾನಮಿಯಲ್ಲಿ ರನ್‌ಗಳನ್ನು ನೀಡಿದರು. ಮುಂದಿನ ಸೀಸನ್‌ನಲ್ಲಿ ಅವರನ್ನು ಬಿಡುಗಡೆ ಮಾಡಬಹುದು. ಈ ಕುರಿತು ಚರ್ಚೆಗಳು ನಡೆದಿದೆ ಎನ್ನಲಾಗುತ್ತಿದೆ. 

57
ವಿಯಾನ್ ಮುಲ್ಡರ್

ವಿಯಾನ್ ಮುಲ್ಡರ್ ಕೇವಲ ಒಂದು ಪಂದ್ಯವನ್ನು ಆಡಿ ಬ್ಯಾಟ್‌ನಿಂದ 9 ರನ್ ಮತ್ತು ಬೌಲಿಂಗ್‌ನಲ್ಲಿ 16 ರನ್ ನೀಡಿದರು. ಆಲ್ರೌಂಡರ್ ಕೋಟಾದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. 

67
ರಾಹುಲ್ ಚಾಹರ್
ರಾಹುಲ್ ಚಾಹರ್ ಹಿಂದಿನ ಸೀಸನ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ 2025 ರಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಹಾಗಾಗಿ ಮುಂದಿನ ಸೀಸನ್‌ನಲ್ಲಿ ಅವರನ್ನು ಬಿಡುಗಡೆ ಮಾಡಬಹುದು.
77
ಇಶಾನ್ ಕಿಶನ್
ಇಶಾನ್ ಕಿಶನ್ ಅವರನ್ನು SRH 1.34 ಮಿಲಿಯನ್ ಡಾಲರ್‌ಗೆ ಖರೀದಿಸಿತ್ತು. ಆರಂಭದಲ್ಲಿ ಶತಕ ಬಾರಿಸಿದರೂ ನಂತರದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. 10 ಪಂದ್ಯಗಳಲ್ಲಿ ಕೇವಲ 90 ರನ್ ಗಳಿಸಿದರು.
Read more Photos on
click me!

Recommended Stories