ಪಂಜಾಬ್ ಕಿಂಗ್ಸ್‌ಗೆ ಐಪಿಎಲ್ 2025 ಕನಸಿನಂತೆ ಕಳೆದಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡ ಅದ್ಭುತ ಪ್ರದರ್ಶನ ನೀಡಿ ಫೈನಲ್ ತಲುಪಿತು. ಆದರೆ ಫೈನಲ್‌ನಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು. 2026ರ ಐಪಿಎಲ್ ಹರಾಜಿಗೂ ಮುನ್ನ ಪಂಜಾಬ್ ಕೈಬಿಡಬಹುದಾದ ಟಾಪ್ 5 ಆಟಗಾರರು ಯಾರು ನೋಡೋಣ ಬನ್ನಿ
ಐಪಿಎಲ್‌ನ 18ನೇ ಆವೃತ್ತಿ ಪಂಜಾಬ್ ಕಿಂಗ್ಸ್‌ಗೆ ಭರ್ಜರಿಯಾಗಿತ್ತು. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ ಫೈನಲ್ ತಲುಪಿತು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲಬೇಕಾಯಿತು. ಮುಂದಿನ ಸೀಸನ್‌ನಲ್ಲಿ ಹೊಸ ತಂಡದೊಂದಿಗೆ ಮತ್ತೆ ಫೈನಲ್ ತಲುಪಿ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ.
27
ಪಂಜಾಬ್‌ನ ಐವರು ಕ್ರಿಕೆಟಿಗರಿಗೆ ಗೇಟ್‌ಪಾಸ್?
ಪ್ರತಿ ಐಪಿಎಲ್ ಸೀಸನ್‌ನಲ್ಲಿ ಹರಾಜು ನಡೆಯುತ್ತದೆ ಮತ್ತು ತಂಡದಲ್ಲಿ ಆಟಗಾರರ ಬದಲಾವಣೆ ಆಗುತ್ತದೆ. ಮುಂದಿನ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್‌ನಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ತಂಡ ಬಿಡುಗಡೆ ಮಾಡಬಹುದಾದ 5 ಆಟಗಾರರ ಬಗ್ಗೆ ತಿಳಿಯೋಣ.
37
1. ಕೈಲ್ ಜೇಮಿಸನ್
ಈ ಪಟ್ಟಿಯಲ್ಲಿ ಮೊದಲಿಗರು ಕೈಲ್ ಜೇಮಿಸನ್. ಲಾಕಿ ಫರ್ಗುಸನ್ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಪಂಜಾಬ್ 4 ಪಂದ್ಯಗಳಲ್ಲಿ ಅವಕಾಶ ನೀಡಿತು. ಆದರೆ ಕೇವಲ 5 ವಿಕೆಟ್ ಪಡೆದರು. 9.80ರ ಇಕಾನಮಿಯಲ್ಲಿ ರನ್ ನೀಡಿದರು.
47
2. ಕ್ಸೇವಿಯರ್ ಬಾರ್ಟ್ಲೆಟ್
ಎರಡನೇ ಸ್ಥಾನದಲ್ಲಿ ಮತ್ತೊಬ್ಬ ವಿದೇಶಿ ಆಟಗಾರ ಕ್ಸೇವಿಯರ್ ಬಾರ್ಟ್ಲೆಟ್. 80 ಲಕ್ಷ ರೂ.ಗೆ ಪಂಜಾಬ್ ಖರೀದಿಸಿತ್ತು. ಈ ವೇಗಿಗೆ 4 ಪಂದ್ಯಗಳಲ್ಲಿ ಅವಕಾಶ ಸಿಕ್ಕಿತು. ಆದರೆ ಕೇವಲ 4 ವಿಕೆಟ್ ಪಡೆದರು.
57
3. ಕುಲ್ದೀಪ್ ಸೆನ್
ಮೂರನೇ ಸ್ಥಾನದಲ್ಲಿ ಕುಲದೀಪ್ ಸೇನ್. ಐಪಿಎಲ್ 2025 ಮೆಗಾ ಹರಾಜಿನಲ್ಲಿ 80 ಲಕ್ಷ ರೂ.ಗೆ ಖರೀದಿಸಲಾಗಿತ್ತು. ಆದರೆ ಒಂದೇ ಒಂದು ಪಂದ್ಯದಲ್ಲೂ ಅವಕಾಶ ಸಿಗಲಿಲ್ಲ.
67
4. ಯಶ್ ಠಾಕೂರ್
ಪಂಜಾಬ್ ಕಿಂಗ್ಸ್ ಯಶ್ ಠಾಕೂರ್‌ರನ್ನು 1.60 ಕೋಟಿ ರೂ.ಗೆ ಖರೀದಿಸಿತ್ತು. ಈ ವೇಗಿಗೆ ಕೇವಲ 2 ಪಂದ್ಯಗಳಲ್ಲಿ ಅವಕಾಶ ಸಿಕ್ಕಿತು. 1 ವಿಕೆಟ್ ಪಡೆದರು. ಮುಂದಿನ ಸೀಸನ್‌ನಲ್ಲಿ ಕೈಬಿಡಬಹುದು.
77
5. ಗ್ಲೆನ್ ಮ್ತಾಕ್ಸ್‌ವೆಲ್
ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಕೈಬಿಡಬಹುದು. 4.2 ಕೋಟಿ ರೂ.ಗೆ ಪಂಜಾಬ್ ತಂಡದಲ್ಲಿದ್ದಾರೆ. ಈ ಸೀಸನ್‌ನಲ್ಲಿ 7 ಪಂದ್ಯಗಳನ್ನಾಡಿ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 48 ರನ್ ಗಳಿಸಿದ್ದಾರೆ. ಕಳೆದ 2 ಸೀಸನ್‌ಗಳಿಂದ ಫಾರ್ಮ್‌ನಲ್ಲಿಲ್ಲ. ಹೀಗಾಗಿ ಕೈಬಿಡಬಹುದು.