ಇಬ್ಬರು ಟೀಂ ಇಂಡಿಯಾ ಸೇರಿ ಜೈಲು ಶಿಕ್ಷೆ ಅನುಭವಿಸಿದ ಟಾಪ್ 10 ಕ್ರಿಕೆಟಿಗರು, ಲಿಸ್ಟ್‌ನಲ್ಲಿ ಪಾಕಿಗಳೇ ಹೆಚ್ಚು

Published : Jun 22, 2026, 06:56 PM IST

ಸ್ಟಾರ್ ಕ್ರಿಕೆಟಿಗರಾಗಿ ಮಿಂಚುತ್ತಿದ್ದ ಸಮಯದಲ್ಲೇ ಹಲವರು ಜೈಲು ಸೇರಿದ್ದಾರೆ, ಶಿಕ್ಷೆ ಅನುಭವಿಸಿದ್ದಾರೆ. ಹೀಗೆ ಶಿಕ್ಷೆ ಅನುಭವಿಸಿದ ಟಾಪ್ 10 ಕ್ರಿಕೆಟಿಗರ ಪೈಕಿ ಸಿಂಹ ಪಾಲು ಪಾಕಿಸ್ತಾನಕ್ಕೆ ಸೇರಿದೆ. ಭಾರತದ ಇಬ್ಬರು ಈ ಲಿಸ್ಟ್‌ನಲ್ಲಿದ್ದಾರೆ.

PREV
16
ಅರೆಸ್ಟ್ ಆಗಿ ಜೈಲು ಸೇರಿದ ಕ್ರಿಕೆಟಿಗರು

ಕ್ರಿಕೆಟ್‌ನಲ್ಲಿ ಶಿಸ್ತು, ಕ್ರೀಡಾ ಸ್ಪೂರ್ತಿ ಅತೀ ಮುಖ್ಯ. ಆದರೆ ಹಲವು ಬಾರಿ ಅಭಿಮಾನಿಗಳ ಮಾಡೆಲ್ ಕ್ರಿಕೆಟಿಗರು ನಿಯಮ ಉಲ್ಲಂಘಿಸಿ ಗಂಭೀರ ಅಪರಾಧ ಮಾಡಿದ್ದಾರೆ. ಪರಿಣಾಮ ಜೈಲು ಸೇರಿದ್ದಾರೆ. ಹಲವು ಕ್ರಿಕೆಟಿಗರು ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿದ್ದಂತೆ ಅರೆಸ್ಟ್ ಆಗಿ ಜೈಲು ಸೇರಿದ್ದಾರೆ. ಹೀಗೆ ಅರೆಸ್ಟ್, ಜೈಲು ಶಿಕ್ಷೆ ಅನುಭವಿಸಿದವರ ಪೈಕಿ ಪಾಕಿಸ್ತಾನ ಕ್ರಿಕೆಟಿಗರ ಸಂಖ್ಯೆ ಹೆಚ್ಚು.

26
ಸ್ಟಾರ್ ಕ್ರಿಕೆಟಿಗರ ಕರಿಯರ್ ಅಂತ್ಯ

ಜೈಲು ಸೇರಿದ ಕ್ರಿಕೆಟಿಗರ ಪೈಕಿ ಪಾಕಿಸ್ತಾನದ ಹಲವರಿದ್ದಾರೆ. ಈ ಪೈಕಿ ಅತ್ಯಂತ ಜನಪ್ರಿಯ ಹಾಗೂ ಸ್ಟಾರ್ ಕ್ರಿಕೆಟಿಗರೇ ಹೆಚ್ಚಿದ್ದಾರೆ. ಪಾಕ್ ವೇಗಿ ಮೊಹಮ್ಮದ್ ಅಮೀರ್ ಸ್ಪಾಟ್ ಫಿಕ್ಸಿಂಗ್ ನಡೆಸಿ ಅರೆಸ್ಟ್ ಆಗಿದ್ದರು. 2010ರಲ್ಲಿ ಬ್ರಿಟಿಷ್ ಪೊಲೀಸರು ಅರೆಸ್ಟ್ ಮಾಡಿದ್ದರು. ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಫಿಕ್ಸಿಂಗ್ ಮಾಡಿ ಸಿಕ್ಕಿ ಬಿದ್ದ ಅಮೀರ್ ಜೈಲು ಸೇರಿದ್ದರು. ಬಳಿಕ ತಪ್ಪೊಪ್ಪಿಕೊಂಡು ಶಿಕ್ಷೆ ಮುಗಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು.

36
ನವಜೋತ್ ಸಿಂಗ್ ಸಿಧು

ಅರೆಸ್ಟ್ ಆಗಿ ಜೈಲು ಶಿಕ್ಷೆ ಅನುಭವಿಸಿದ ಭಾರತೀಯ ಕ್ರಿಕೆಟಿಗರ ಪೈಕಿ ನವಜೋತ್ ಸಿಂಗ್ ಸಿಧು ಕೂಡ ಸೇರಿದ್ದಾರೆ. 2022ರಲ್ಲಿ ಸಿಧು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದರೆ ಈ ಪ್ರಕರಣ ನಡೆದಿದ್ದು 1988ರಲ್ಲಿ. ರೋಡ್ ರೇಜ್ ಘಟನೆಯಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಥಳಿಸಿದ ಹಿನ್ನಲೆಯಲ್ಲಿ ಸಿಧು ಜೈಲು ಶಿಕ್ಷೆ ಅನುಭವಿಸಿದ್ದಾರೆ.

46
ಪಾಕಿಸ್ತಾನದ ನಾಯಕನಿಗೂ ಬಿದ್ದಿತ್ತು ಕೋಳ

2010ರ ಇಂಗ್ಲೆಂಡ್ ಪ್ರವಾಸ ಹಲವು ಪಾಕಿಸ್ತಾನ ಕ್ರಿಕೆಟಿಗರ ಕರಿಯರ್ ಅಂತ್ಯಗೊಳಿಸಿತ್ತು. ನಾಯಕ ಸಲ್ಮಾನ್ ಭಟ್ ಸ್ಫಾಟ್ ಫಿಕ್ಸಿಂಗ್ ರೂವಾರಿಯಾಗಿದ್ದ. ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಫಿಕ್ಸಿಂಗ್ ನಡೆಸಿದ ಸಲ್ಮಾನ್ ಭಟ್ ಕೂಡ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇದರೊಂದಿಗೆ ಸಲ್ಮಾನ್ ಭಟ್ ಕರಿಯರ್ ಅಂತ್ಯಗೊಂಡಿತು. ಫಿಕ್ಸಿಂಗ್ ಪ್ರಕರಣದಲ್ಲಿ ಪಾಕಿಸ್ತಾನದ ಮತ್ತೊಬ್ಬ ವೇಗಿ ಮೊಹಮ್ಮದ್ ಆಸೀಫ್ ಕೂಡ ಜೈಲು ಶಿಕ್ಷೆ ಅನುಭವಿಸಿದ್ದಾರೆ.

56
ಶ್ರೀಶಾಂತ್‌ಗೂ ಕಂಟಕವಾದ ಫಿಕ್ಸಿಂಗ್

2013ರ ಐಪಿಎಲ್ ಟೂರ್ನಿಯಲ್ಲಿನ ಸ್ಪಾಟ್ ಫಿಕ್ಸಿಂಗ್ ಆರೋಪದದಲ್ಲಿ ವೇಗಿ ಶ್ರೀಶಾಂತ್ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಜೈಲು ಸೇರಿದ ಶ್ರೀಶಾಂತ್‌ಗೆ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಾಧ್ಯವಾಗಲಿಲ್ಲ. ಆರೋಬ ಸಾಬೀತಾಗದೇ ಹೋದರು ಶ್ರೀಶಾಂತ್ ಸುದೀರ್ಘ ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಯಿತು.

66
ಸ್ಟಾರ್ ಕ್ರಿಕೆಟಿಗರು ಅನುಭವಿಸಿದ್ದಾರೆ ಜೈಲು ಶಿಕ್ಷೆ

ಶ್ರೀಲಂಕಾದ ಸ್ಟಾರ್ ಕ್ರಿಕೆಟಿಗ ಧನುಷ್ಕಾ ಗುಣತಿಲಕ 2022ರ ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಅರೆಸ್ಟ್ ಆಗಿದ್ದರು. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಗುಣತಿಲಕ ಅರೆಸ್ಟ್ ಆಗಿದ್ದರು. 2020ರ ಕೋವಿಡ್ ಸಮಯದಲ್ಲಿ ಶ್ರೀಲಂಕಾ ಕ್ರಿಕೆಟಿಗ ಕುಸಾಲ್ ಮೆಂಡಿಸ್ ಅಪಘಾತ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. 2017ರಲ್ಲಿ ಇಂಗ್ಲೆಂಡ್ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಬೀದಿ ಜಗಳ ಪ್ರಕರಣದಲ್ಲಿ ಅರೆಸ್ಟ್ ಆಗಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಪಾಕಿಸ್ತಾನ ಮಾಜಿ ನಾಯಕ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ಸುದೀರ್ಘ ದಿನಗಳ ಜೈಲು ಶಿಕ್ಷೆ ಅನುಭವಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories