ಶ್ರೀಲಂಕಾ ಎ ವಿರುದ್ಧ ವೈಭವ್ ಸೂರ್ಯವಂಶಿ ಕೇವಲ 11 ಎಸೆತದಲ್ಲಿ ಅರ್ಧಶತಕ, 29 ಎಸೆತದಲ್ಲಿ 94 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ. ಇದರ ಬೆನ್ನಲ್ಲೇ ಚಾಂಪಿಯನ್ ಆರ್‌ಸಿಬಿ ತಂಡದ ಮಹತ್ವದ ಪೋಸ್ಟ್ ಇದೀಗ ಭಾರಿ ಚರ್ಚೆಯಾಗುತ್ತಿದೆ.
ವೈಭವ್ ಸೂರ್ಯವಂಶಿ ಭಾರತ ಎ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಮಾತ್ರವಲ್ಲ ವಿಶ್ವದಾಖಲೆ ಬರೆದಿದ್ದಾರೆ. 15ರ ಹರೆಯದ ವೈಭವ್ ಸೂರ್ಯವಂಶಿ ಆಟಕ್ಕೆ ದಿಗ್ಗಜರೇ ಸಲಾಂ ಹೇಳುತ್ತಿದ್ದಾರೆ. ಇದರ ನಡುವೆ ಚಾಂಪಿಯನ್ ಆರ್‌ಸಿಬಿ ಮಹತ್ವದ ಪೋಸ್ಟ್ ಮಾಡಿದೆ.
26
ಇದು ಐಪಿಎಲ್ ಅಲ್ಲ, ಆರ್‌ಸಿಬಿ ಪೋಸ್ಟ್
ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಬಳಿಕ ಆರ್‌ಸಿಬಿ ಮಾಡಿದ ಪೋಸ್ಟ್ ತೀವ್ರ ಕುತೂಹಲ ಕೆರಳಿಸಿದೆ. ವೈಭವ್ ಸೂರ್ಯವಂಶಿ ಅಬ್ಬರದ ಫೋಟೋಗಳನ್ನು ಹಂಚಿಕೊಂಡ ಆರ್‌ಸಿಬಿ ಕುತೂಹಲಕಾರಿ ಪೋಸ್ಟ್ ಮಾಡಿದೆ. ಇದು ಐಪಿಎಲ್ ಅಲ್ಲ, ಇತ್ತ ವೈಭವ್: ಹಾಗಾದರೆ ನನ್ನ ಬ್ಯಾಟ್ ಹಿಡಿದುಕೊಳ್ಳಿ. ಕೇವಲ 11 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ದಾಖಲೆ ಬರೆದ ವೈಭವ್ ಸೂರ್ಯವಂಶಿಗೆ ಸಲಾಂ ಎಂದು ಆರ್‌ಸಿಬಿ ಪೋಸ್ಟ್ ಮಾಡಿದೆ.
36
ಏಕದಿನದಲ್ಲಿ ಐಪಿಎಲ್ ರೀತಿ ಬ್ಯಾಟಿಂಗ್
ವೈಭವ್ ಸೂರ್ಯವಂಶಿ ಅಬ್ಬರ ನೋಡಿದ ಆರ್‌ಸಿಬಿ ಭಾರಿ ಮೆಚ್ಚುಗೆ ಸೂಚಿಸಿದೆ. ಇದು ಲಿಸ್ಟ್ ಎ ಪಂದ್ಯ. 50 ಓವರ್‌ಗಳ ಏಕದಿನ ಪಂದ್ಯ ಇದು. ಇದೇ ಕಾರಣಕ್ಕೆ ಆರ್‌ಸಿಬಿ ಈ ರೀತಿ ಪೋಸ್ಟ್ ಮಾಡಿದೆ. ವೈಭವ್ ಸೂರ್ಯವಂಶಿ ಇದು ಐಪಿಎಲ್ ಪಂದ್ಯ ಎಂದು ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ಏಕದಿನ ಪಂದ್ಯ ಅನ್ನೋ ರೀತಿಯಲ್ಲಿ ಪೋಸ್ಟ್ ಮಾಡಿದೆ. ಆದರೆ ವೈಭವ್ ಸೂರ್ಯವಂಶಿ ತನ್ನ ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ದಾಖಲೆ ಬರೆದಿದ್ದಾರೆ.
ಹಲವರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ವೈಭವ್ ಸೂರ್ಯವಂಶಿ ಆಟಕ್ಕೆ ಭಾರಿ ಮೆಚ್ಚುಗೆ ಸೂಚಿಸಿದ್ದಾರೆ. 15ರ ಬಾಲಕನ ಪ್ರದರ್ಶನಕ್ಕೆ ವಿಶ್ವವೇ ಮೆಚ್ಚುಗೆ ಸೂಚಿಸುತ್ತಿದೆ ಎಂದಿದ್ದಾರೆ. ಇದೇ ವೇಳೆ ಹಲವರು ವೈಭವ್ ಸೂರ್ಯವಂಶಿ ಆರ್‌ಸಿಬಿಯನ್ ರೀತಿ ಕಾಣಿಸುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇತ್ತ ವೈಭವ್ ಬ್ಯಾಟ್‌ನಲ್ಲಿ ಟರ್ಬೋ ಬಟನ್ ಇರಬೇಕು ಎಂದಿದ್ದಾರೆ.
56
ರಾಜಸ್ಥಾನ ರಾಯಲ್ಸ್ ಹೇಳಿದ್ದೇನು?
ಆರ್‌ಸಿಬಿ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ಕೂಡ ಇದೇ ರೀತಿ ಪೋಸ್ಟ್ ಮಾಡಿದೆ. ಇದು ಐಪಿಎಲ್ ಅಲ್ಲ ಎಂಬ ಪೋಸ್ಟ್‌ನ್ನು ರಾಜಸ್ಥಾನ ರಾಯಲ್ಸ್ ಕೂಡ ಹೇಳಿದೆ. ಲಂಕಾ ಆಟಗಾರರು ಕೆಣಕಿದ ಪರಿಣಾಮ ವೈಭವ್ ಸೂರ್ಯವಂಶಿ ಮುಟ್ಟಿನೋಡಿಕೊಳ್ಳೋ ಉತ್ತರ ನೀಡಿದ್ದಾರೆ. ಇದನ್ನು ಲಂಕಾ ಆಟಗಾರರು ಮರೆಯುವುದಿಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.
66
ಗೆಲುವಿನ ರೂವಾರಿ ವೈಭವ್ ಸೂರ್ಯವಂಶಿ
ಡೆಲ್ಲಿ ಕ್ಯಾಪಿಟಲ್ಸ್ ಕೂಡ ಇದು ಐಪಿಎಲ್ ಅಲ್ಲ ಎಂದು ಪೋಸ್ಟ್ ಮಾಡಿದೆ. ಇತ್ತ ದಿಗ್ಗಜ ಕ್ರಿಕೆಟಿಗರು ವೈಭವ್ ಸೂರ್ಯವಂಶಿ ಆಟವನ್ನು ಮೆಚ್ಚಿಕೊಂಡಿದ್ದಾರೆ. ತ್ರಿಕೋನ ಸರಣಿ ಆರಂಭದಲ್ಲಿ ವೈಭವ್ ಸೂರ್ಯವಂಶಿ ಬಹುಬೇಗನೆ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದ್ದರು. ಆದರೆ ಅಷ್ಟೇ ವೇಗದಲ್ಲಿ ಸರಣಿ ಗೆಲುವಿನಲ್ಲಿ ಪ್ರಮುಖ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.