Cricketer Virat Kohli: ಕ್ರಿಕೆಟ್ ಲೋಕದ ದಿಗಗ್ಜ ವಿರಾಟ್ ಕೊಹ್ಲಿ ಈಗ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಬರೋದಿಲ್ಲ ಎಂದು ಹೇಳಿರುವ ಅವರು 'ಒನ್8' (One8) ಅನ್ನು 'ಅಗಿಲಿಟಾಸ್' (Agilitas) ಕ್ರೀಡಾ ಬ್ರಾಂಡ್ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಿದ್ದಾರೆ.
ಭಾರತದಲ್ಲೇ ತಯಾರಾಗುವ ‘ಅಗಿಲಿಟಾಸ್’ ಬ್ರ್ಯಾಂಡ್ ಜಾಗತಿಕ ಗುಣಮಟ್ಟದ ಕ್ರೀಡಾ ಉಡುಪು (Sportswear), ಲೈಫ್‌ಸ್ಟೈಲ್ ಬ್ರಾಂಡ್ ಆಗಿದೆ. ಕೊಹ್ಲಿಗೆ ಇದು ಕೇವಲ ಉದ್ಯಮ ಅಲ್ಲ, ಬದಲಾಗಿ ಮೊದಲಿನಿಂದಲೂ ಏನಾದರೊಂದು ಉದ್ಯಮ ಮಾಡಬೇಕು ಎನ್ನುವ ಆಸೆ ಇತ್ತಂತೆ.
25
ವರ್ಷಗಳ ಪರಿಶ್ರಮ
ಹೀಗಾಗಿ ತಿಂಗಳುಗಳಿಂದ ಫೋನ್, ಜೂಮ್ ಮೀಟಿಂಗ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆ ಮಾಡಿ ಈ ಉದ್ಯಮ ಆರಂಭ ಮಾಡಿದ್ದಾರೆ. ಇದರಲ್ಲಿ ಭಾರತದ ಗುರುತಿದೆ, ಜಾಗತಿಕವಾಗಿ ಮಾರಾಟ ಆಗುವಂತೆ ಮಾಡಿದ್ದಾರಂತೆ. ಭವಿಷ್ಯದಲ್ಲಿ 50 ದೇಶಗಳಲ್ಲಿ ಮಾರಾಟ ಮಾಡುವ ಪ್ಲ್ಯಾನ್ ಇದೆಯಂತೆ.
35
18ನೇ ಡಿಸೈನ್ ಒಪ್ಪಿದ್ರು
ಈ ಬ್ರ್ಯಾಂಡ್‌ಗಾಗಿ 17 ಡಿಸೈನ್ ರಿಜೆಕ್ಟ್ ಮಾಡಿದ್ದು, 18ನೇ ಡಿಸೈನ್ ಒಪ್ಪಿದ್ದಾರೆ. "ನೆವರ್ ಡನ್" (Never Done) ಎಂದು ಟ್ಯಾಗ್‌ಲೈನ್ ಕೊಟ್ಟಿದ್ದಾರೆ. ಇದು ಕೊಹ್ಲಿಯ ಸಹ-ಮಾಲೀಕತ್ವದ ಬ್ರಾಂಡ್ ಅಲ್ಲ, ಸಹ-ಸೃಷ್ಟಿಕರ್ತ ಕೂಡ ಹೌದು.
"ಇನ್ನೇನು ಮ್ಯಾಚ್ ಮುಗೀತು, ತಪ್ಪಿ ಹೋಯ್ತು ಎನ್ನುವ ಸವಾಲಿನ ಪರಿಸ್ಥಿಯನ್ನು ಎದುರಿಸಲು ನಾನು ಯಾವಾಗಲೂ ರೆಡಿ ಇರ್ತೀನಿ. ಅಂತಹ ಕಠಿಣ ಪರಿಸ್ಥಿತಿಯಿಂದ ಮತ್ತೆ ಪಂದ್ಯವನ್ನು ಮತ್ತೆ ಹೇಗೆ ಗೆಲುವಿನ ಕಡೆಗೆ ತಿರುಗಿಸಬಹುದು ಎನ್ನೋದು ಮುಖ್ಯ. ಮೊದಲಿನಿಂದಲೂ ನಾನು ಹೀಗೆ ಪರಿಸ್ಥಿತಿಗಳನ್ನು ನೋಡುತ್ತ ಬಂದಿದ್ದೇನೆ. ಪಂದ್ಯದ ಕೊನೆಯ ಕ್ಷಣದವರೆಗೂ ಆಟ ಮುಗಿದಿಲ್ಲ, ಗೆಲ್ಲುವ ಅವಕಾಶವಿದೆ ಎಂಬ ನಂಬಿಕೆಯನ್ನು ನಾನು ಎಂದಿಗೂ ಕೈಬಿಡುವುದಿಲ್ಲ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
55
ಪಾಕ್ ಮ್ಯಾಚ್‌ನಲ್ಲಿ ನಾನು ಹಾಗೆ ಯೋಚನೆ ಮಾಡಲಿಲ್ಲ
ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಐತಿಹಾಸಿಕ ಪಂದ್ಯದ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, "ನಾನು ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಾಗ, ಭಾರತ ಗೆಲ್ಲುವ ಸಾಧ್ಯತೆ ಕೇವಲ ಶೇಕಡಾ 3 ರಷ್ಟು ಮಾತ್ರ ಇದೆ ಅಂತ ಎಲ್ಲರೂ ಹೇಳುತ್ತಿದ್ದರು. ಆದರೆ ನಾನು ಮಾತ್ರ ಹಾಗೆ ಯೋಚನೆ ಮಾಡಲಿಲ್ಲ. ಕೇವಲ 1% ಅವಕಾಶವಿದ್ದರೂ, ಅಲ್ಲಿ ಗೆಲ್ಲಬಹುದು. ನೀವು ಪಂದ್ಯವನ್ನು ಸಂಪೂರ್ಣವಾಗಿ ಸೋಲುವವರೆಗೂ, ಆಟ ಮುಗಿಯುವುದಿಲ್ಲ" ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.