ದಕ್ಷಿಣ ಆಫ್ರಿಕಾ 3 ಪಂದ್ಯಗಳಿಗೆ 3 ಕ್ಯಾಪ್ಟನ್‌; ಭಾರತದ ಪಾಲಾದ ಸರಣಿ

First Published Oct 12, 2022, 4:40 PM IST

ಭಾರತ ತಂಡ ಮೂರನೇ ಏಕದಿನ ಪಂದ್ಯವನ್ನೂ ದಕ್ಷಿಣ ಆಫ್ರಿಕಾದಿಂದ ಕಸಿದುಕೊಂಡಿದೆ. ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಏಕಪಕ್ಷೀಯ ಗೆಲುವು ದಾಖಲಿಸಿತು. ಮೊದಲು ಬೌಲಿಂಗ್ ಮಾಡಿದ ಟೀಂ ಇಂಡಿಯಾ ಆಫ್ರಿಕಾವನ್ನು ಕೇವಲ 99 ರನ್‌ಗಳಿಗೆ ಆಲೌಟ್ ಮಾಡಿತು. ನಂತರ ಬ್ಯಾಟಿಂಗ್ ಮಾಡಿದ ಟೀಮ್‌ ಇಂಡಿಯಾ ಸುಲಭವಾಗಿ ಪಂದ್ಯ ಗೆದ್ದಿತು. ಈ ಗೆಲುವಿನಲ್ಲಿ ತಂಡದ ಸ್ಪಿನ್ನರ್ ಕುಲದೀಪ್ ಯಾದವ್, ಶಹಬಾಜ್ ಖಾನ್ ಮತ್ತು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸಾಕಷ್ಟು ಕೊಡುಗೆ ನೀಡಿದರು. ಕುಲದೀಪ್ 4 ವಿಕೆಟ್ ಪಡೆದರು. ಮತ್ತೊಂದೆಡೆ, ಸಿರಾಜ್, ವಾಷಿಂಗ್ಟನ್ ಮತ್ತು ಶಹಬಾಜ್ ತಲಾ ಎರಡು ವಿಕೆಟ್ ಪಡೆದು ಪಂದ್ಯವನ್ನು ಭಾರತದ ಖಾತೆಗೆ ಸೇರಿಸಿದರು. 3 ಪಂದ್ಯಗಳಲ್ಲಿ ಮೂವರು ಆಟಗಾರರು ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿದ್ದರೂ ಸರಣಿ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ಸರಣಿಯ ವಿಶೇಷ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಪಂದ್ಯದ ಕೆಲವು ಫೋಟೋಗಳು ಇಲ್ಲಿವೆ.

ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ. ಈ ಮೂಲಕ ತಂಡವು 2-1  ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ದಯನೀಯವಾಗಿ ವಿಫಲವಾಯಿತು.

ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲಿಂಗ್ ಉತ್ತಮವಾಗಿದ್ದು, ತಂಡದ ಬೌಲರ್‌ಗಳು ಯಾವುದೇ ಬ್ಯಾಟ್ಸ್‌ಮನ್‌ಗೆ ಆಡಲು ಅವಕಾಶ ನೀಡಲಿಲ್ಲ. ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಭಾರತದ ಬೌಲರ್‌ಗಳು ಆಫ್ರಿಕಾವನ್ನು 99 ರನ್‌ಗಳಿಗೆ ಆಲೌಟ್ ಮಾಡಿದರು. 

Latest Videos


ಕುಲದೀಪ್ ಯಾದವ್‌ ಅದ್ಭುತ ಪ್ರದರ್ಶನ ನೀಡಿದರು. ಡದ ಸ್ಪಿನ್ನರ್ ಯಾದವ್ ಮತ್ತೊಮ್ಮೆ ದಕ್ಷಿಣ ಆಫ್ರಿಕಾ ವಿರುದ್ಧ 4 ವಿಕೆಟ್ ಕಬಳಿಸಿದ ಸಾಧನೆ ತೋರಿದ್ದಾರೆ. ಒಮ್ಮೆ ಅವರು ಹ್ಯಾಟ್ರಿಕ್ ಅವಕಾಶ ಸಹ ಗಳಿಸಿದ್ದರು. ಆದರೆ  ಬ್ಯಾಟ್ಸ್‌ಮನ್ ಆ ಚೆಂಡನ್ನು ಎದುರಿಸಿ ಬಚಾವ್‌ ಆದರು.

ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾದ ಫೀಲ್ಡಿಂಗ್ ಸರಿಸಾಟಿಯಿಲ್ಲ. ಮೊದಲ ಪಂದ್ಯದಲ್ಲಿ 5 ಕ್ಯಾಚ್ ಕೈಬಿಟ್ಟಿದ್ದ ತಂಡ ಈ ಪಂದ್ಯದಲ್ಲಿ ಒಂದೂ ಕ್ಯಾಚ್ ಮಿಸ್ ಮಾಡದೆ, ಕ್ಲಿಷ್ಟಕರ ಕ್ಯಾಚ್ ಸುಲಭವಾಗಿ ಹಿಡಿದಿತ್ತು.

ಭಾರತ ತಂಡದ ಮುಂದೆ ಕೇವಲ 100 ರನ್‌ಗಳ ಗುರಿ ಇದ್ದರೂ, ತಂಡ ನೇರವಾಗಿ  ಬ್ಯಾಟಿಂಗ್ ಮಾಡಿತು. ಆರಂಭಿಕರಾದ ಶುಭಮನ್ ಗಿಲ್ 49 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ ಕೂಡ 28 ರನ್ ಗಳಿಸಿದರು. ಭಾರತದ 3 ವಿಕೆಟ್ ಪತನವಾದರೂ ರನ್ ಗತಿ ನಿಲ್ಲಲಿಲ್ಲ.

ಸಂಜು ಸ್ಯಾಮ್ಸನ್ ರಂತಹ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಟೀಂ ಇಂಡಿಯಾಗೆ ಸಿಕ್ಕಿದೆ. ಇದುವರೆಗೆ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸ್ಯಾಮ್ಸನ್ ಇದೀಗ ಟೀಂ ಇಂಡಿಯಾದಲ್ಲೂ ತಮ್ಮ ಚಾಫು ಮೂಡುಸಿಸುತ್ತಿದ್ದಾರೆ. ಕ್ರೀಸ್‌ನಲ್ಲಿರುವ ಬ್ಯಾಟ್ಸ್‌ಮನ್‌ಗಳೊಂದಿಗೆ ಉತ್ತಮ ಜೊತೆಯಾಟವನ್ನು ಹೊಂದಿದ್ದಾರೆ.

ಟೀಂ ಇಂಡಿಯಾ ಪರ ಆರಂಭಿಕ ಬೌಲಿಂಗ್ ಜವಾಬ್ದಾರಿ ಹೊತ್ತಿದ್ದ ಮೊಹಮ್ಮದ್ ಸಿರಾಜ್ ಮೂರನೇ ಏಕದಿನ ಪಂದ್ಯದಲ್ಲಿ ಮಾರಕ ಬೌಲಿಂಗ್ ಮಾಡಿದ್ದರು. ಆರಂಭದಲ್ಲಿಯೇ ಎರಡು ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾವನ್ನು ಹಿನ್ನಡೆಗೆ ತಳ್ಳಿದರು.

ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿದರು. ಭಾರತದ ಬೌಲಿಂಗ್ ಬಹಳ ಸಮಯದ ನಂತರ ಉತ್ತಮ ಲಯ ಕಂಡುಕೊಂಡಂತೆ ಕಾಣುತ್ತದೆ. ವೇಗದ ಬೌಲರ್‌ಗಳು ಆರಂಭಿಕ ವಿಕೆಟ್‌ಗಳನ್ನು ಪಡೆದರು. ಮತ್ತು ಸ್ಪಿನ್ನರ್‌ಗಳು ಮಧ್ಯಮ ಕ್ರಮಾಂಕವನ್ನು ನಾಶಪಡಿಸಿದರು.

ಇಂಡಿಯಾ ಬೌಲರ್ ಕುಲದೀಪ್ ಯಾದವ್ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್  ಪಡೆದಿದ್ದರು.ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ 2 ಮತ್ತು ಶಹಬಾಜ್ 2 ವಿಕೆಟ್ ಪಡೆದರು. ತಂಡದ 4 ಬೌಲರ್‌ಗಳ ಆಧಾರದ ಮೇಲೆ ಆಫ್ರಿಕಾ 99 ರನ್‌ಗಳನ್ನು ಮೀರಿ ಮುನ್ನಡೆಯಲು ಸಾಧ್ಯವಾಗಲಿಲ್ಲ.

ದಕ್ಷಿಣ ಆಫ್ರಿಕಾ ಮೂರನೇ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಅವರನ್ನು ನಾಯಕನನ್ನಾಗಿ ಮಾಡಿತು. ಮಿಲ್ಲರ್ ಸರಣಿಯ ಮೂರನೇ ನಾಯಕರಾದರು ಆದರೆ ಅವರು ಸೋಲನ್ನು ತಡೆಯಲು ಸಾಧ್ಯವಾಗಲಿಲ್ಲ. ಮಿಲ್ಲರ್ ಕ್ರೀಸ್ ತಲುಪಿದಾಗ, ಅವರು ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಎಂದು ತೋರುತ್ತಿತ್ತು ಆದರೆ ಶಹಬಾಜ್ ಅವರ ಚೆಂಡನ್ನು ತಪ್ಪಿಸಿಕೊಂಡರು, ಚೆಂಡು ಅವರ ವಿಕೆಟ್‌ ತೆಗೆದುಕೊಂಡಿತು
 

click me!