Cricket Galleries: ಸೌರವ್ ಗಂಗೂಲಿ ಅವರ ಸ್ಟೈಲಿಶ್ ಮಗಳು ಸನಾ ಗಂಗೂಲಿ!

Published : Oct 12, 2022, 04:05 PM IST

ರೋಜರ್ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ (Sourav Ganguly) ಅವರ ಸ್ಥಾನ ಪಡೆಯಲಿದ್ದಾರೆ ಎಂಬ ಹಲವಾರು ವರದಿಗಳು ಹೇಳುತ್ತಿವೆ. ಮಂಗಳವಾರ, 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಅವರು ತಮ್ಮ ನಾಮನಿರ್ದೇಶನವನ್ನು ಸಲ್ಲಿಸಿದ್ದಾರೆ ಮತ್ತು ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಪಡೆಯುವ ಸಾಧ್ಯತೆಯಿದೆ. ಆದರೆ, ಇಲ್ಲಿಯವರೆಗೆ ಏನನ್ನೂ ಖಚಿತಪಡಿಸಲಾಗಿಲ್ಲ. ಈ ನಡುವೆ ಗಂಗೂಲಿ ಅವರು ತಮ್ಮ ಕುಟುಂಬದೊಂದಿಗೆ ವಿಶೇಷವಾಗಿ ತಮ್ಮ ಸುಂದರ ಮಗಳು ಸನಾ ಗಂಗೂಲಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದಾರೆ. ಇಲ್ಲಿದೆ ಸನಾ ಗಂಗೂಲಿ (Sana Ganguly) ಬಗ್ಗೆ ಕಿರು ಪರಿಚಯ.

PREV
16
Cricket Galleries: ಸೌರವ್ ಗಂಗೂಲಿ ಅವರ ಸ್ಟೈಲಿಶ್ ಮಗಳು ಸನಾ ಗಂಗೂಲಿ!

ಕ್ರಿಕೆಟ್ ಅಭಿಮಾನಿಗಳಿಂದ ಪ್ರೀತಿಯಿಂದ 'ದಾದಾ' ಎಂದು ಕರೆಯುವ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್‌ ಗಂಗೂಲಿ ಮಗಳು ಸನಾ ಗಂಗೂಲಿಯ ಹೆಮ್ಮೆಯ ತಂದೆ. ಸೌರವ್‌ ಗಂಗೂಲಿಗೆ ಮಗಳೆಂದರೆ ತುಂಬಾ ಇಷ್ಟ  ಮತ್ತು ಆಗಾಗ್ಗೆ ಅವಳ ಫೋಟೋಗಳನ್ನು ತನ್ನ Instagram ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡುತ್ತಾರೆ.

26

ಲಾ ಮಾರ್ಟಿನಿಯರ್‌ ಗರ್ಲ್‌ ಸ್ಕೂಲ್‌ನಲ್ಲಿ ಪ್ರಾಥಮಿಕ  ಶಿಕ್ಷಣ ಪಡೆದ ನಂತರ  ಲೊರೆಟೊ ಹೌಸ್ ಶಾಲೆಯಲ್ಲಿ ಓದಿದ ಸನಾ ಗಂಗೂಲಿ ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು.

36

ಶಾಸ್ತ್ರೀಯ ನೃತ್ಯಗಾರ್ತಿಯಾಗಿರುವ ಆಕೆಯ ತಾಯಿ ಡೋನಾ ಗಂಗೂಲಿಯಂತೆ ಸನಾ ಕೂಡ ಒಡಿಸ್ಸಿ ನೃತ್ಯಗಾರ್ತಿ. ಸನಾ ತನ್ನ 7 ನೇ ವಯಸ್ಸಿನಲ್ಲಿ ತನ್ನ ಮೊದಲ ಪ್ರದರ್ಶನವನ್ನು ನೀಡಿದರು.

46

CAA ಕುರಿತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ದೆಹಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಂತರ ಸನಾ ಡಿಸೆಂಬರ್ 2019 ರಲ್ಲಿ ಗಮನ ಸೆಳೆದರು. ಜೂನಿಯರ್ ಗಂಗೂಲಿ ದೆಹಲಿ ಪೊಲೀಸರ ವಿರುದ್ಧದ ಪೋಸ್ಟ್ ಒಂದನ್ನು ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದರು
 

56

ಸನಾ ಅವರನ್ನು ಸಮರ್ಥಿಸಿಕೊಂಡ ಸೌರವ್ ಗಂಗೂಲಿ ಅವರು ರಾಜಕೀಯವನ್ನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವರಾಗಿದ್ದಾರೆ ಎಂದು ಹೇಳಿದ್ದಾರೆ. ನಂತರ, ಸನಾ ವಿವಾದಾತ್ಮಕ ಪೋಸ್ಟ್ ಅನ್ನು ಅಳಿಸಿದ್ದಾರೆ. 

66

ಗಂಗೂಲಿ ತನ್ನ  ಮಗಳು ಭಾರತದ ವೇಗಿ ಜೂಲನ್ ಗೋಸ್ವಾಮಿಯಂತೆ ಕ್ರಿಕೆಟರ್ ಆಗಬೇಕೆಂದು ಬಯಸಿದ್ದರು.'ಜೂಲಾನ್ ಹಲವು ವರ್ಷಗಳಿಂದ ಶ್ರೇಷ್ಠ ಕ್ರಿಕೆಟ್ ಆಡಿದ್ದಾರೆ ಮತ್ತು ನಂಬಲಾಗದ ವೃತ್ತಿಜೀವನದ ಗ್ರಾಫ್ ಅನ್ನು ಹೊಂದಿದ್ದಾರೆ. ನನ್ನ ಮಗಳು ಎಂದಾದರೂ ಕ್ರಿಕೆಟ್ ಆಡಿದ್ದರೆ, ನಾನು ಅವಳನ್ನು ಜೂಲನ್ ಗೋಸ್ವಾಮಿಯಂತೆ ಇರುವಂತೆ ಹೇಳುತ್ತಿದೆ. ಆದರೆ ಅದು ಆಗಲಿಲ್ಲ' ಎಂದು ಸ್ಟಾರ್ ಕ್ರಿಕೆಟರ್‌ ಜೂಲನ್ ಗೋಸ್ವಾಮಿ ನಿವೃತ್ತಿಯ ಸಂದರ್ಭದಲ್ಲಿ ಗಂಗೂಲಿ ಹೇಳಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories