ಮೊದಲ ನೋಟದಲ್ಲೇ ದಕ್ಷಿಣದ ಹುಡುಗಿಗೆ ಬೋಲ್ಡ್‌ ಆದ ಈ ಸ್ಪೋಟಕ ಬ್ಯಾಟ್ಸ್‌ಮ್ಯಾನ್‌

Published : Oct 12, 2022, 04:11 PM IST

ಏಷ್ಯಾ ಕಪ್ 2022 ರಲ್ಲಿ ಹಾಂಗ್ ಕಾಂಗ್ ವಿರುದ್ಧ 26 ಎಸೆತಗಳಲ್ಲಿ 68  ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದ ನಂತರ ಸೂರ್ಯಕುಮಾರ್ ಯಾದವ್ (Suryakumar Yadav) ಸಾಕಷ್ಟು ಚರ್ಚೆಯಲ್ಲಿದ್ದಾರೆ. ಈ ವರ್ಷ ಟೀಂ ಇಂಡಿಯಾ ಪರ ಹಲವು ಬಾರಿ ಇಂತಹ ಸ್ಪೋಟಕ ಆಟ ಆಡಿದ್ದಾರೆ. ಸೂರ್ಯ ಕುಮಾರ್‌ ಐಪಿಎಲ್‌ನಲ್ಲೂ ಅದೇ ಶೈಲಿಯಲ್ಲಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ ಸೂರ್ಯಕುಮಾರ್ ಯಾದವ್ ಅವರು ಕ್ರಿಕೆಟ್‌ನಲ್ಲಿ ಹೆಸರು ಮಾಡುವುದಕ್ಕಿಂತ ಮುಂಚೆಯೇ ತಮ್ಮ ಕನಸಿನ ರಾಣಿಯನ್ನು ಮದುವೆಯಾಗಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಇಲ್ಲಿದೆ ಸೂರ್ಯಕುಮಾರ್ ಯಾದವ್ ಲವ್ ಸ್ಟೋರಿ.  

PREV
16
ಮೊದಲ ನೋಟದಲ್ಲೇ ದಕ್ಷಿಣದ ಹುಡುಗಿಗೆ ಬೋಲ್ಡ್‌ ಆದ ಈ ಸ್ಪೋಟಕ ಬ್ಯಾಟ್ಸ್‌ಮ್ಯಾನ್‌

ಟೀಮ್‌ ಇಂಡಿಯಾದ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್ ಕಾಲೇಜಿನಲ್ಲಿಯೇ ದಕ್ಷಿಣ ಭಾರತದ ಹುಡುಗಿ ದೇವಿಶಾ ಶೆಟ್ಟಿಗೆ  ಹೃದಯ ನೀಡುತ್ತಿದ್ದರು. ಇವರ ಲವ್‌ ಸ್ಟೋರಿ  ತುಂಬಾ ಆಸಕ್ತಿದಾಯಕವಾಗಿದೆ.

26

ಸೂರ್ಯಕುಮಾರ್ ಯಾದವ್ 2012 ರಲ್ಲಿ ಮುಂಬೈನ ಪೊದ್ದಾರ್ ಪದವಿ ಕಾಲೇಜಿನಲ್ಲಿ ದಕ್ಷಿಣ ಭಾರತದ ಹುಡುಗಿ ದೇವಿಶಾ ಶೆಟ್ಟಿಯನ್ನು ಭೇಟಿಯಾದರು.  ಆಗ ಸೂರ್ಯಕುಮಾರ್‌ ಅವರಿಗೆ ಕೇವಲ 22 ವರ್ಷ ಮತ್ತು ದೇವಿಶಾ  ಸೂರ್ಯಕುಮಾರ್ ಅವರಿಗಿಂತ ಮೂರು ವರ್ಷ ಚಿಕ್ಕವರು. 

36

 ಸೂರ್ಯಕುಮಾರ್‌  ದೇವೀಶಾರ ನೃತ್ಯವನ್ನು ನೋಡಿ ಮೊದಲ ನೋಟದಲ್ಲೇ ಬೋಲ್ಡ್‌ ಆದರು.  ಸೂರ್ಯಕುಮಾರ್‌ ನಿಧಾನವಾಗಿ ದೇವಿಶಾರಿಗೆ ಹತ್ತಿರವಾಗಲು ಪ್ರಯತ್ನಿಸಿದರು ಮತ್ತು  ಕೆಲವೇ ದಿನಗಳಲ್ಲಿ ದೇವಿಶಾ ಮೇಲಿನ ಪ್ರೀತಿಯನ್ನೂ ವ್ಯಕ್ತಪಡಿಸಿದ್ದಾರೆ.  

46

2012 ರಿಂದ 2016  ರವರೆಗೆ, ಸಂಬಂಧದಲ್ಲಿದ್ದ ಈ ಜೋಡಿ   ವಿವಾಹವಾದರು. ಮದುವೆಗೆ ಎರಡು ವರ್ಷಗಳ ಹಿಂದೆ ಸೂರ್ಯಕುಮಾರ್ ಐಪಿಎಲ್ ಮೂಲಕ ಹೆಸರು ಗಳಿಸಿದ್ದ ಕಾರಣ ಕುಟುಂಬ  ಈ ಮದುವೆಗೆ ಒಪ್ಪಲು  ಹೆಚ್ಚಿನ ಸಮಸ್ಯೆ ಇರಲಿಲ್ಲ.

56

ಸೂರ್ಯಕುಮಾರ್‌ಮತ್ತು ದೇವಿಶಾ ದಕ್ಷಿಣ ಭಾರತದ ಪದ್ಧತಿಯಂತೆ 29 ಮೇ 2016 ರಂದು ವಿವಾಹವಾದರು. ದೇವಿಶಾ ಸಾಮಾಜಿಕ ಕಾರ್ಯಕರ್ತೆ. 2013 ರಿಂದ 2015 ರವರೆಗೆ ಅವರು 'ದಿ ಲೈಟ್‌ಹೌಸ್ ಪ್ರಾಜೆಕ್ಟ್' ಎಂಬ ಎನ್‌ಜಿಒಗೆ ಸ್ವಯಂಸೇವಕರಾಗಿ ಕೆಲಸ ಮಾಡಿದರು.

 


 

66

ಮುಂಬೈ ಇಂಡಿಯನ್ಸ್ ಪಂದ್ಯಗಳಲ್ಲಿ ದೇವಿಶಾ ಆಗಾಗ್ಗೆ ತನ್ನ ಪತಿಯನ್ನು ಹುರಿದುಂಬಿಸುತ್ತಿರುವುದು ಕಂಡುಬಂದಿದೆ. ಈ ಜೋಡಿ ಆಗಾಗ ತಮ್ಮ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Read more Photos on
click me!

Recommended Stories