ಇಂಗ್ಲೆಂಡ್ ಪ್ರವಾಸದಲ್ಲಿದ್ದ ಟೀಂ ಇಂಡಿಯಾದ ಈ ಆಟಗಾರನಿಗೆ ಕೋವಿಡ್ ಪಾಸಿಟಿವ್..!

Suvarna News   | Asianet News
Published : Jul 15, 2021, 03:00 PM IST

ಲಂಡನ್‌: ಟೆಸ್ಟ್‌ ಚಾಂಪಿಯನ್‌ಶಿಪ್‌ ಮುಗಿಸಿ ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ದೊಡ್ಡ ಶಾಕ್ ಎದುರಾಗಿದ್ದು, ತಂಡದ ಸದಸ್ಯರೊಬ್ಬರಿಗೆ ಕೋವಿಡ್ 19 ದೃಢಪಟ್ಟಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಯ್ದ ಕೌಂಟಿ ಆಟಗಾರರನ್ನೊಳಗೊಂಡ ತಂಡದ ಎದುರು ಅಭ್ಯಾಸ ಪಂದ್ಯವನ್ನಾಡಲು ಸಜ್ಜಾಗಿದ್ದ ಭಾರತ ತಂಡಕ್ಕೆ ಇದೀಗ ಆಘಾತ ಎದುರುರಾಗಿದೆ. ಅಷ್ಟಕ್ಕೂ ಕೋವಿಡ್ 19 ಸೋಂಕು ತಗುಲಿಸಿಕೊಂಡ ಟೀಂ ಇಂಡಿಯಾ ಆಟಗಾರ ಯಾರು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.  

PREV
19
ಇಂಗ್ಲೆಂಡ್ ಪ್ರವಾಸದಲ್ಲಿದ್ದ ಟೀಂ ಇಂಡಿಯಾದ ಈ ಆಟಗಾರನಿಗೆ ಕೋವಿಡ್ ಪಾಸಿಟಿವ್..!

ನ್ಯೂಜಿಲೆಂಡ್ ಎದುರು ಸೌಥಾಂಪ್ಟನ್‌ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಬಳಿಕ ಟೀಂ ಇಂಡಿಯಾ ಆಟಗಾರರಿಗೆ 20 ದಿನಗಳ ವಿಶ್ರಾಂತಿ ಸಿಕ್ಕಿದೆ.

29

ಈ ಬಿಡುವಿನ ಸಮಯವನ್ನು ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ಕುಟುಂಬ, ಸ್ನೇಹಿತರು ಹಾಗೂ ಸಂಬಂಧಿಕರೊಟ್ಟಿಗೆ ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದಾರೆ. 

39

ಹೀಗಿರುವಾಗಲೇ ಟೀಂ ಇಂಡಿಯಾ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ಕೋವಿಡ್ 19 ಸೋಂಕು ತಗುಲಿರುವ ಸುದ್ದಿ ಹೊರಬಿದ್ದಿದೆ.

49

ಕಳೆದ ಎಂಟು ದಿನಗಳ ಹಿಂದೆ ರಿಷಭ್‌ ಪಂತ್‌ ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದರು, ಅವರಲ್ಲಿ ಯಾವುದೇ ಕೊರೋನಾ ಲಕ್ಷಣಗಳು ಇರಲಿಲ್ಲ. ಹೀಗಿದ್ದೂ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

59

ಸದ್ಯ ರಿಷಭ್ ಪಂತ್‌ ಲಂಡನ್‌ನಲ್ಲೇ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಪಂತ್ ಅವರನ್ನು ಲಂಡನ್‌ನಲ್ಲೇ ಬಿಟ್ಟು ಟೀಂ ಇಂಡಿಯಾ ಆಟಗಾರರು ಜುಲೈ 20 ರಿಂದ ಆರಂಭವಾಗಲಿರುವ ಅಭ್ಯಾಸ ಪಂದ್ಯವನ್ನಾಡಲು ಇಂದು ಡುರ್ಹಾಮ್‌ಗೆ ತೆರಳಿದ್ದಾರೆ.

69

ರಿಷಭ್ ಪಂತ್ ಮೇ 13ರಂದು ಕೋವಿಡ್ ಮೊದಲ ಹಂತದ ಲಸಿಕೆ ಪಡೆದಿದ್ದರು. ಇಂಗ್ಲೆಂಡ್‌ನ ಬಿಡುವಿನ ಸಮಯದಲ್ಲಿ ಪಂತ್ ತಮ್ಮ ಸ್ನೇಹಿತರೊಂದಿಗೆ ಯುರೋ ಕಪ್‌ ಫುಟ್ಬಾಲ್‌ ಟೂರ್ನಿಯ ಇಂಗ್ಲೆಂಡ್ ಹಾಗೂ ಜರ್ಮನಿ ನಡುವೆ ವಿಂಬ್ಲೆ ಮೈದಾನಕ್ಕೆ ತೆರಳಿ ಪಂದ್ಯವನ್ನು ವೀಕ್ಷಿಸಿದ್ದರು.

79

ಪುಟ್ಬಾಲ್‌ ಪಂದ್ಯ ವೀಕ್ಷಿಸಲು ತೆರಳಿದ್ದಾಗಲೇ ರಿಷಭ್ ಪಂತ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

89

ಕಳೆದ 8 ದಿನಗಳ ಹಿಂದೆ ಓರ್ವ ಆಟಗಾರನಿಗೆ ಕೋವಿಡ್ ದೃಢಪಟ್ಟಿದೆ. ಇನ್ನುಳಿದ ಎಲ್ಲಾ ಆಟಗಾರರ ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

99

ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್‌ ಸರಣಿಯು ಆಗಸ್ಟ್‌ 04ರಿಂದ ಆರಂಭವಾಗಲಿದೆ. ಈ ಸರಣಿಯಿಂದಲೇ ಎರಡನೇ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭವಾಗಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories