ಆಸೀಸ್ ಅಭಿಮಾನಿಗಳ ವಿರುದ್ಧ ಬುಮ್ರಾ-ಸಿರಾಜ್ ದೂರು ; ಕಠಿಣ ಕ್ರಮಕ್ಕೆ ಆಗ್ರಹಿಸಿದ ಬಿಸಿಸಿಐ!

First Published | Jan 9, 2021, 8:41 PM IST

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬಿಗಿ ಹಿಡಿತ ಸಾಧಿಸುತ್ತಿದೆ. ಇದರ ನಡುವೆ ಟೀಂ ಇಂಡಿಯಾ ಪ್ರಮುಖ ಆಟಗಾರ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಇತ್ತ ಟೀಂ ಇಂಡಿಯಾದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್‌ , ಆಸ್ಟ್ರೇಲಿಯಾ ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ಬಿಸಿಸಿಐ ಕೂಡ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಈ ಕುರಿತ ವಿವರ ಇಲ್ಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಗೆಲುವಿಗಾಗಿ ಉಭಯ ತಂಡಗಳು ಕಠಿಣ ಹೋರಾಟ ಮಾಡುತ್ತಿದೆ. ಇತ್ತ ಆಸೀಸ್ 3ನೇ ದಿನದಲ್ಲಿ ಮೇಲುಗೈ ಸಾಧಿಸಿದೆ.
ಸಿಡ್ನಿ ಟೆಸ್ಟ್ ನಡುವೆ ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್, ಆಸ್ಟ್ರೇಲಿಯಾ ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ
Tap to resize

ಬುಮ್ರಾ ಹಾಗೂ ಸಿರಾಜ್ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಆಸೀಸ್ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿದ್ದಾರೆ. ಈ ಕುರಿತು ಇಬ್ಬರು ವೇಗಿಗಳು ತಂಡದ ಮ್ಯಾನೇಜ್ಮೆಂಟ್‌ಗೆ ಹೇಳಿದ್ದಾರೆ.
ಕೋಚ್ ರವಿ ಶಾಸ್ತ್ರಿ ಹಾಗೂ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಜನಾಂಗೀಯ ನಿಂದನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇಷ್ಟೇ ಅಲ್ಲ ಮ್ಯಾಚ್ ರೆಫ್ರಿಗೆ ದೂರು ದಾಖಲಿಸಿದ್ದಾರೆ.
ದಿನದಾಟದ ಅಂತ್ಯಗೊಂಡ ಬೆನ್ನಲ್ಲೇ ಭದ್ರತಾ ಅಧಿಕಾರಿಗಳು, ಮ್ಯಾಚ್ ರೆಫ್ರಿ ಸಭೆ ನಡೆಸಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರ ಮೇಲಿನ ಜನಾಂಗೀಯ ನಿಂದನೆ ಕುರಿತು ಐಸಿಸಿ ಗಮನಕ್ಕೆ ತಂದಿದ್ದಾರೆ.
ಆಸೀಸ್ ಅಭಿಮಾನಿಗಳ ಈ ಜನಾಂಗೀಯ ನಿಂದನೆ ಸ್ವೀಕಾರವಲ್ಲ. ಇದನ್ನು ಬಿಸಿಸಿಐ ಖಂಡಿಸುತ್ತದೆ. ಟೀಂ ಇಂಡಿಯಾ ಪರ ನಾವು ನಿಲ್ಲುತ್ತೇವೆ. ಐಸಿಸಿ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಸಿಸಿಐ ಆಗ್ರಹಿಸಿದೆ.
ಟೀಂ ಇಂಡಿಯಾ ವೇಗಿಗಳ ಮೇಲಿನ ಜನಾಂಗೀಯ ನಿಂದನೆಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ವಾರ್ನಿಂಗ್ ನೀಡಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಕಾನೂನು ಕ್ರಮ ಜರುಗಿಸುವ ವಿಶ್ವಾಸವಿದೆ ಎಂದಿದ್ದಾರೆ.
ಸಿಡ್ನಿ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. 2ನೇ ಇನಿಂಗ್ಸ್‌ನಲ್ಲಿ 197 ರನ್ ಮುನ್ನಡೆ ಪಡೆದುಕೊಂಡಿದ್ದು, ಭಾರತಕ್ಕೆ ಬೃಹತ್ ಗುರಿ ನೀಡುವ ವಿಶ್ವಾಸದಲ್ಲಿದೆ.

Latest Videos

click me!