ಸಿಡ್ನಿ ಟೆಸ್ಟ್ ನಡುವೆ ಆಘಾತ; ಟೀಂ ಇಂಡಿಯಾದ ಕೀ ಪ್ಲೇಯರ್ ಸರಣಿಯಿಂದ ಔಟ್

First Published | Jan 9, 2021, 8:01 PM IST

ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಹೋರಾಟ ಭಾರತಕ್ಕೆ ಮತ್ತಷ್ಟು ಕಠಿಣವಾಗಿದೆ. ಈಗಾಲೇ 197 ರನ್ ಮುನ್ನಡೆ ಪಡೆದುಕೊಂಡಿರುವ ಆಸೀಸ್ ತಂಡವನ್ನು ಕಟ್ಟಿಹಾಕಲು ಟೀಂ ಇಂಡಿಯಾ ರಣತಂತ್ರ ರೂಪಿಸಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಅಲ್ರೌಂಡರ್ ರವೀಂದ್ರ ಜಡೇಜಾ ಪಾತ್ರ ಅತೀ ಮುಖ್ಯವಾಗಿತ್ತು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಜಡೇಜಾ ಕೂಡೆಗೆ ಅಪಾರ.
undefined
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ರನೌಟ್ ಮಾಡಿದ ರವೀಂದ್ರ ಜಡೇಜಾ ಟೀಂ ಇಂಡಿಯಾ ಭರ್ಜರಿ ಮೇಲುಗೈ ತಂದುಕೊಟ್ಟಿದ್ದರು.ಜಡೇಜಾ ರನೌಟ್ ಭಾರಿ ಪ್ರಶಂಸೆಗೆ ಪಾತ್ರವಾಗಿತ್ತು.
undefined

Latest Videos


ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ವೇಳೆ ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ. ಬೆರಳಿನ ಗಾಯಕ್ಕೆ ತುತ್ತಾಗಿರುವ ರವೀಂದ್ರ ಜಡೇಜಾ ಇದೀಗ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
undefined
ಎಡಗೈ ಹೆಬ್ಬೆರಳಿನ ಮೂಳೆ ಪಕ್ಕಕ್ಕೆ ಸರಿದಿದೆ. ಹೀಗಾಗಿ ಮುಂದಿನ ಇನ್ನಿಂಗ್ಸ್‌ನಲ್ಲಿ ಜಡೇಜಾಗೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ.
undefined
ರವೀಂದ್ರ ಜಡೇಜಾಗೆ ಕನಿಷ್ಠ 2 ರಿಂದ 3 ವಾರಗಳ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯಕ್ಕೂ ರವೀಂದ್ರ ಜಡೇಜಾ ಲಭ್ಯವಿಲ್ಲ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ಹೇಳಿದೆ.
undefined
ರವೀಂದ್ರ ಜಡೇಜಾ ಟೂರ್ನಿಯಿಂದ ಹೊರಬಿದ್ದಿರುವುದು ಟೀಂ ಇಂಡಿಯಾಗೆ ತೀವ್ರ ಹಿನ್ನಡೆಯಾಗಿದೆ. ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಡೇಜಾ 4 ವಿಕೆಟ್ ಕಬಳಿಸಿದ್ದರು.
undefined
ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇತಾ ಅಜೇಯ 28 ರನ್ ಕಾಣಿಕೆ ನೀಡಿದ್ದಾರೆ. ಈ ಮೂಲಕ ಟೀಂ ಇಂಡಿಯಾ 244 ರನ್ ಸಿಡಿಸಿತ್ತು.
undefined
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 338 ರನ್ ಸಿಡಿಸಿದ್ದರೆ, ಎರಡನೇ ಇನ್ನಿಂಗ್ಸ‌ನಲ್ಲಿ 2 ವಿಕೆಟ್ ನಷ್ಟಕ್ಕೆ 103 ರನ್ ಸಿಡಿಸಿ ಬ್ಯಾಟಿಂಗ್ ನಡೆಸುತ್ತಿದೆ. ಈ ಮೂಲಕ 197 ರನ್ ಮುನ್ನಡೆ ಪಡೆದುಕೊಂಡು ಸುಸ್ಥಿತಿಯಲ್ಲಿದೆ
undefined
click me!