ಲಂಡನ್‌ ಕಾಲೇಜಿನಿಂದ ಅರ್ಥಶಾಸ್ತ್ರದ ಪದವಿ ಪಡೆದ ಪುತ್ರಿ, ಹೆಮ್ಮೆಯಿಂದ ಬೀಗಿದ ಟೀಮ್‌ ಇಂಡಿಯಾ ಮಾಜಿ ನಾಯಕ!

First Published | Sep 7, 2023, 10:34 PM IST

ಟೀಮ್‌ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಹೆಮ್ಮೆಯಿಂದ ಬೀಗಿದ್ದಾರೆ. ಅದಕ್ಕೆ ಕಾರಣ ಅವರ ಸಾಧನೆಯಲ್ಲ. ಅವರ ಪುತ್ರಿ ಲಂಡನ್‌ನ ಯುನಿವರ್ಸಿಟಿ ಕಾಲೇಜಿನಿಂದ ಅರ್ಥಶಾಸ್ತ್ರ ಪದವಿ ಪಡೆದುಕೊಂಡಿದ್ದಾರೆ.

ಟೀಮ್‌ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಸಂಭ್ರಮದಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿರುವ ಯಾವುದೇ ಸಾಧನೆಯಲ್ಲ. 

ಬದಲಾಗಿ ಅವರ ಪುತ್ರಿ ಸನಾ ಗಂಗೂಲಿ ಮಾಡಿರುವ ಸಾಧನೆ ಸೌರವ್‌ ಗಂಗೂಲಿ ಹೆಮ್ಮೆಯಿಂದ ಎದೆ ಉಬ್ಬುವಂತೆ ಮಾಡಿದೆ. ಹೌದು, ಸೌರವ್‌ ಗಂಗೂಲಿ ಅವರ ಪುತ್ರಿ ಸನಾ ಈಗ ಪದವೀಧರೆ.

Tap to resize

ಲಂಡನ್‌ನ ಪ್ರತಿಷ್ಠಿತ ಯುನಿವರ್ಸಿಟಿ ಕಾಲೇಜಿನಿಂದ ಸನಾ ಗಂಗೂಲಿ ಅರ್ಥಶಾಸ್ತ್ರದ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಇತ್ತೀಚೆಗೆ ಗಂಗೂಲು ಪತ್ನಿ ಡೋನಾ ಗಂಗೂಲಿ ಜೊತೆ ಇಂಗ್ಲೆಂಡ್‌ಗೆ ಭೇಟಿ ನೀಡಿದ್ದರು.

ಈ ವೇಳೆ ಲಂಡನ್‌ನಲ್ಲಿ ಇಪಿಎಲ್‌ ಪಂದ್ಯವನ್ನೂ ವೀಕ್ಷಿಸಿದ್ದ ಸೌರವ್‌ ಗಂಗೂಲಿ, ಆ ಬಳಿಕ ಯುನಿವರ್ಸಿಟಿ ಕಾಲೇಜಿನಲ್ಲಿ ನಡೆದ ಫಟಿಕೋತ್ಸವ ಸಮಾರಂಭದಲ್ಲಿ ಮಗಳು ಪದವಿ ಪಡೆದಿದ್ದನ್ನು ಕಣ್ತುಂಬಿಕೊಂಡಿದ್ದಾರೆ.

ಇದರ ಚಿತ್ರಗಳನ್ನು ಸ್ವತಃ ಗಂಗೂಲಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗಳ ಮೊದಲ ಗ್ರ್ಯಾಜುಯೇಷನ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಒಳ್ಳೆಯದಾಗಲಿ ಮಗಳೇ ಎಂದು ಬರೆದುಕೊಂಡಿದ್ದಾರೆ.

,ಮಗಳು ಪದವಿ ಪಡೆಯೋದನ್ನು ಕಣ್ಣಾರೆ ನೋಡುವ ಸಲುವಾಗಿ ಸೌರವ್‌ ಗಂಗೂಲಿ ಹಾಗೂ ಅವರ ಪತ್ನಿ ಡೋನಾ ಗಂಗೂಲಿ ಇತ್ತೀಚೆಗೆ ಲಂಡನ್‌ಗೆ ಭೇಟಿ ನೀಡಿದ್ದರು.

ನನ್ನ ಮಗಳು ಈ ದಿನವನ್ನು ಜೀವಮಾನ ಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾಳೆ ಎಂದು ದಾದಾ ಖ್ಯಾತಿಯ ಸೌರವ್‌ ಗಂಗೂಲಿ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಈ ಚಿತ್ರವನ್ನು ದಾದಾ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ಬೆನ್ನಲ್ಲಿಯೇ, ಅವರ ಅಭಿಮಾನಿಗಳು ಸನಾ ಅವರ ಸಾಧನೆಗೆ ಸಂಭ್ರಮಿಸಿ ವಿಶ್‌ ಮಾಡಿದ್ದಾರೆ.

ವಿಶ್ವದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಲಂಡನ್‌ನ ಯುನಿವರ್ಸಿಟಿ ಕಾಲೇಜಿನಲ್ಲಿ ಪದವಿ ಪೂರ್ಣ ಮಾಡುವ ಮುನ್ನ ಸನಾ ಗಂಗೂಲಿ ಕೋಲ್ಕತ್ತಾದಲ್ಲಿಯೇ ವಿದ್ಯಾಭ್ಯಾಸ ಪೂರ್ಣ ಮಾಡಿದ್ದರು.

ಲಂಡನ್‌ಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ಮುನ್ನ 21 ವರ್ಷದ ಸನಾ ಗಂಗೂಲಿ, ಕೋಲ್ಕತ್ತಾದ ಲೊರೆಟ್ಟೋ ಹೌಸ್‌ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

ಇನ್ನು ಯುನಿವರ್ಸಿಟಿ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ, ಸನಾ ಗಂಗೂಲಿ ಫುಲ್‌ ಟೈಮ್‌ ಕ್ಯಾಂಪನ್‌ ಕಂಪನಿ ಎನಾಕ್ಟಸ್‌ ಆಗಿ ವಿವಿಧ ಕಂಪನಿಗಳಿಗೆ ಕೆಲಸ ಮಾಡಿದ್ದಾರೆ.

ಲಂಡನ್‌ನಲ್ಲಿ ಓದುವಾಗಲೇ, ಎಚ್‌ಎಸ್‌ಬಿಸಿ, ಕೆಪಿಎಂಜಿ, ಗೋಲ್ಡ್‌ಮನ್ಸ್‌ ಸ್ಯಾಚ್ಸ್‌, ಐಸಿಐಸಿಐ ಸೇರಿದಂತೆ ಪ್ರಮುಖ ಕಂಪನಿಗಳಲ್ಲಿ ಅವರು ಕೆಲಸ ಮಾಡಿದ್ದಾರೆ ಎಂದು ವರದಿಯಾಗಿದೆ.

ಜೂನ್‌ 2022ರಲ್ಲಿ ಕೊನೆಯ ಬಾರಿಗೆ ತಮ್ಮ ಲಿಂಕ್ಡಿನ್‌ ಪ್ರೋಫೈಲ್‌ಅನ್ನು ಅಪ್‌ಡೇಟ್‌ ಮಾಡಿದ್ದ ಸನಾ ಗಂಗೂಲಿ, ತಾವು ಪಿಡಬ್ಲ್ಯುಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು.

ಪಿಡಬ್ಲ್ಯುಸಿ ವಿಶ್ವದ ಅತೀದೊಡ್ಡ ಹಣಕಾಸು ಸಲಹಾ ಕಂಪನಿಯಾಗಿದ್ದು, 152ಕ್ಕೂ ಅಧಿಕ ದೇಶಗಳಲ್ಲಿ ತನ್ನ ಬ್ರ್ಯಾಂಚ್‌ಗಳನ್ನು ಈ ಕಂಪನಿ ಹೊಂದಿದೆ.

ಇನ್ನು ಮಗಳು ಸನಾ ಗಂಗೂಲಿಯಂತೆ ಸೌರವ್‌ ಗಂಗೂಲಿ ಕೂಡ ಉತ್ತಮ ವಿದ್ಯಾಭ್ಯಾಸ ಹೊಂದಿದವರಾಗಿದ್ದಾರೆ, ಕೋಲ್ಕತ್ತಾದ ಸೇಂಟ್‌ ಕ್ಸೇವಿಯರ್‌ ಸ್ಕೂಲ್‌ನಲ್ಲಿ ಗಂಗೂಲಿ ಓದಿದ್ದರು.

ಆ ಬಳಿಕ ಸೌರವ್ ಗಂಗೂಲಿ ಸೇಂಟ್‌ ಕ್ಸೇವಿಯರ್‌ ಕಾಲೇಜಿನಿಂದಲೇ ಪದವಿಯನ್ನೂ ಪಡೆದುಕೊಂಡಿದ್ದರು. ಇದರ ನಡುವೆಯೇ ತಮ್ಮ ಕ್ರಿಕೆಟ್‌ ಆಸಕ್ತಿಯನ್ನು ಜೀವಂತವಾಗಿರಿಸಿಕೊಂಡಿದ್ದರು.

ಪತಿ ನಿಧನರಾಗಿ ಎರಡು ವರ್ಷಕ್ಕೆ ಮತ್ತೊಂದು ಮದುವೆಗೆ ಸಿದ್ಧರಾದ್ರಾ ಈ ನಟಿ!

ದೇಶದ ಕ್ರೀಡಾಕ್ಷೇತ್ರಕ್ಕೆ ಸೌರವ್‌ ಗಂಗೂಲಿ ನೀಡಿರುವ ಸಾಧನೆಯನ್ನು ಪರಿಗಣಿಸಿ ಬೆಂಗಾಲ್‌ ಇಂಜಿನಿಯರಿಂಗ್‌ ಮತ್ತು ಸೈನ್ಸ್‌ ಯುನಿವರ್ಸಿಟಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರಧಾನ ಮಾಡಿದೆ.

ಬೆಡ್‌ರೂಮ್‌ ಸೀನ್‌ಗಾಗಿಯೇ 1 ಕೋಟಿ ಜಾಸ್ತಿ ಸಂಭಾವನೆ ಕೇಳಿದ್ರಾ ತಮನ್ನಾ?
 

Latest Videos

click me!