WTC Final: 5 ಅಪರೂಪದ ದಾಖಲೆ ಬರೆಯಲು ಕಿಂಗ್ ಕೊಹ್ಲಿ ರೆಡಿ

First Published | Jun 6, 2023, 5:46 PM IST

ಲಂಡನ್‌(ಜೂ.06): ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯವು ಜೂನ್‌ 07ರಿಂದ ಆರಂಭವಾಗಲಿದ್ದು, ಚಾಂಪಿಯನ್ ಪಟ್ಟಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಲಂಡನ್‌ನ ದಿ ಓವಲ್ ಮೈದಾನದಲ್ಲಿ ಸೆಣಸಾಡಲಿವೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, 5 ಅಪರೂಪದ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

1. ಐಸಿಸಿ ನಾಕೌಟ್‌ ಪಂದ್ಯಗಳಲ್ಲಿ ಸಚಿನ್‌ ಗರಿಷ್ಠ ರನ್ ಸರದಾರ ಆಗಲು ಕೊಹ್ಲಿಗೆ ಬೇಕಿದೆ 38 ರನ್‌..!

ವಿರಾಟ್ ಕೊಹ್ಲಿ ಇದುವರೆಗೂ ಐಸಿಸಿ ನಾಕೌಟ್‌ ಪಂದ್ಯಗಳ ಪೈಕಿ 15 ಪಂದ್ಯಗಳ 16 ಇನಿಂಗ್ಸ್‌ಗಳಿಂದ 4 ಅರ್ಧಶತಕ ಸಹಿತ 620 ರನ್ ಬಾರಿಸಿದ್ದು, ನಾಕೌಟ್‌ ಪಂದ್ಯಗಳಲ್ಲಿ ಸಚಿನ್‌ ಹಿಂದಿಕ್ಕಿ ಗರಿಷ್ಠ ರನ್ ಸರದಾರ ಆಗಲು ಕೊಹ್ಲಿಗೆ ಬೇಕಿದೆ ಕೇವಲ 38 ರನ್‌

ಸಚಿನ್ ತೆಂಡುಲ್ಕರ್, 14 ನಾಕೌಟ್‌ ಇನಿಂಗ್ಸ್‌ಗಳಲ್ಲಿ 657 ರನ್‌ ಬಾರಿಸಿದ್ದಾರೆ. ಇನ್ನು ನಾಕೌಟ್ ಪಂದ್ಯಗಳಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ. ಪಾಂಟಿಂಗ್ 18 ಇನಿಂಗ್ಸ್‌ಗಳಿಂದ 731 ರನ್ ಬಾರಿಸಿದ್ದು, ಪಾಂಟಿಂಗ್ ದಾಖಲೆ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ಕೊಹ್ಲಿ 112 ರನ್ ಗಳಿಸಬೇಕಿದೆ.

Tap to resize

2. ಅತಿಹೆಚ್ಚು ನಾಕೌಟ್ ಪಂದ್ಯ

ವಿರಾಟ್ ಕೊಹ್ಲಿ ಸದ್ಯ 15 ನಾಕೌಟ್ ಪಂದ್ಯಗಳನ್ನಾಡುವ ಮೂಲಕ ಸಚಿನ್ ತೆಂಡುಲ್ಕರ್ ಹಾಗೂ ಎಂ ಎಸ್ ಧೋನಿ ದಾಖಲೆ ಸರಿಗಟ್ಟಿದ್ದಾರೆ. ಕೊಹ್ಲಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಣಕ್ಕಿಳಿಯುತ್ತಿದ್ದಂತೆ ಧೋನಿ, ಸಚಿನ್ ದಾಖಲೆ ದೂಳೀಪಟವಾಗಲಿದೆ. 

ಇನ್ನು ಅತಿಹೆಚ್ಚು ಐಸಿಸಿ ನಾಕೌಟ್ ಪಂದ್ಯವನ್ನಾಡಿದ ದಾಖಲೆ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ. ಆಸೀಸ್ ಮಾಜಿ ನಾಯಕ ಪಾಂಟಿಂಗ್ 18 ನಾಕೌಟ್ ಪಂದ್ಯವನ್ನಾಡಿದ್ದಾರೆ. ಇನ್ನು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ 17 ನಾಕೌಟ್ ಪಂದ್ಯವನ್ನಾಡಿ ಎರಡನೇ ಸ್ಥಾನದಲ್ಲಿದ್ದಾರೆ.

3. ಇಂಗ್ಲೆಂಡ್‌ನಲ್ಲಿ ಅತಿಹೆಚ್ಚು ಅಂತಾರಾಷ್ಟ್ರೀಯ ರನ್ ಬಾರಿಸಿದ ಭಾರತೀಯ ಬ್ಯಾಟರ್‌

ಇಂಗ್ಲೆಂಡ್ ನೆಲದಲ್ಲಿ ಅತಿಹೆಚ್ಚು ಅಂತಾರಾಷ್ಟ್ರೀಯ ರನ್ ಬಾರಿಸಿದ ದಾಖಲೆ ಮಾಜಿ ನಾಯಕ ಹಾಗೂ ಹಾಲಿ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. ದ್ರಾವಿಡ್ ಇಂಗ್ಲೆಂಡ್‌ನಲ್ಲಿ 46 ಪಂದ್ಯಗಳನ್ನಾಡಿ 55ರ ಸರಾಸರಿಯಲ್ಲಿ 2645 ರನ್‌ ಬಾರಿಸಿದ್ದಾರೆ..

ಇನ್ನು ಸಚಿನ್ ತೆಂಡುಲ್ಕರ್ 43 ಪಂದ್ಯಗಳಿಂದ 2,626 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಸದ್ಯ 56 ಪಂದ್ಯಗಳನ್ನಾಡಿ 2574 ರನ್ ಬಾರಿಸಿದ್ದು, ಇನ್ನು ಕೇವಲ 72 ರನ್‌ ಬಾರಿಸಿದರೆ ಸಚಿನ್ ಹಾಗೂ ದ್ರಾವಿಡ್ ಹಿಂದಿಕ್ಕಿ ಕೊಹ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.

4. ಓರ್ವ ಬೌಲರ್ ಎದುರು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್:

ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಯನ್ ಎದುರು 511 ರನ್ ಬಾರಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಓರ್ವ ಬೌಲರ್ ಎದುರು ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

Image credit: Facebook & Wikimedia Commons

ಸದ್ಯ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಲಯನ್ ಎದುರು 570 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇದಾದ ಬಳಿಕ ಸಂಗಕ್ಕರ, ಸಯೀದ್ ಅಜ್ಮಲ್ ಎದುರು 531 ಹಾಗೂ ಸ್ಟೀವ್ ಸ್ಮಿತ್, ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್ ಎದುರು 520 ರನ್ ಬಾರಿಸಿದ್ದಾರೆ. ಕೊಹ್ಲಿ, ನೇಥನ್ ಲಯನ್ ಎದುರು ಕೇವಲ 21 ರನ್‌ ಬಾರಿಸಿದರೆ, ಓರ್ವ ಬೌಲರ್‌ ಎದುರು ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ.

5. 950 ಬೌಂಡರಿಗಳ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಸದ್ಯ ಟೆಸ್ಟ್‌ ಕ್ರಿಕೆಟ್‌ನಲ್ಲಿ 941 ಬೌಂಡರಿ ಬಾರಿಸಿದ್ದು, ಇನ್ನು ಕೇವಲ 9 ಬೌಂಡರಿ ಬಾರಿಸಿದರೆ, 950+ ಬೌಂಡರಿ ಬಾರಿಸಿದ ವಿವಿನ್ ರಿಚರ್ಡ್ಸ್‌, ಕೆವಿನ್ ಪೀಟರ್‌ಸನ್, ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಅವರಂತಹ ದಿಗ್ಗಜ ಆಟಗಾರರ ಕ್ಲಬ್‌ಗೆ ಸೇರಲಿದ್ದಾರೆ.

ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಬೌಂಡರಿ ಬಾರಿಸಿದ ದಾಖಲೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಸಚಿನ್‌ 200 ಟೆಸ್ಟ್ ಪಂದ್ಯಗಳನ್ನಾಡಿ 2058 ಬೌಂಡರಿ ಬಾರಿಸಿದ್ದಾರೆ. 

Latest Videos

click me!