ರಾಹುಲ್ ದ್ರಾವಿಡ್ ತಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕದ್ದುಮುಚ್ಚಿ ಮ್ಯಾಚ್ ನೋಡುತ್ತಿದ್ದದ್ದು ಯಾಕೆ? ಆ ಸತ್ಯ ಬಿಚ್ಚಿಟ್ಟ ಗಂಗೂಲಿ

Published : Sep 18, 2026, 04:11 PM IST

ಬೆಂಗಳೂರು: 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಭಾರತ ಕಂಡ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರು. ಆದರೆ ರಾಹುಲ್ ದ್ರಾವಿಡ್ ತಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕದ್ದುಮುಚ್ಚಿ ಮಗನ ಮ್ಯಾಚ್ ನೋಡುತ್ತಿದ್ದರಂತೆ. ಈ ಬಗ್ಗೆ ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

PREV
16
ಭಾರತದ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್

ಭಾರತ ಕ್ರಿಕೆಟ್‌ನ ಅತ್ಯಂತ ನಂಬಿಗಸ್ಥ ಬ್ಯಾಟರ್ ಎಂದೇ ಗುರುತಿಸಿಕೊಂಡಿದ್ದ ರಾಹುಲ್ ದ್ರಾವಿಡ್, ಏಕಾಂಗಿಯಾಗಿ ಟೀಂ ಇಂಡಿಯಾಗೆ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ದ್ರಾವಿಡ್ ಕೇವಲ ಬ್ಯಾಟರ್ ಮಾತ್ರವಲ್ಲದೇ ವಿಕೆಟ್ ಕೀಪರ್ ಆಗಿ, ಸ್ಲಿಪ್ ಫೀಲ್ಡರ್ ಆಗಿ ಹಾಗೆಯೇ ನಾಯಕನಾಗಿಯೂ ಸೈ ಎನಿಸಿಕೊಂಡಿದ್ದಾರೆ.

26
ದ್ರಾವಿಡ್ ತಂದೆ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ ಹಂಚಿಕೊಂಡ ಸೌರವ್ ಗಂಗೂಲಿ

ಇನ್ನು ರಾಹುಲ್ ದ್ರಾವಿಡ್ ತಂದೆಯ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಇಂಟ್ರೆಸ್ಟಿಂಗ್ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ದ್ರಾವಿಡ್ ತಂದೆ ಗುಟ್ಟಾಗಿ ಬಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಗನ ಮ್ಯಾಚ್ ನೋಡುತ್ತಿದ್ದರಂತೆ. ಇದು ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೀಡಾಗುವಂತೆ ಮಾಡಿದೆ.

36
ಗುಟ್ಟಾಗಿ ಮಗನ ಮ್ಯಾಚ್ ನೋಡುತ್ತಿದ್ದ ದ್ರಾವಿಡ್ ತಂದೆ

ರಾಹುಲ್ ದ್ರಾವಿಡ್ ತಂದೆ, ಶರದ್ ದ್ರಾವಿಡ್ ಅವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟೆಸ್ಟ್‌ ಪಂದ್ಯಗಳು ನಡೆಯುವಾಗಲೆಲ್ಲಾ ಗುಟ್ಟಾಗಿ ಬಂದು ಮಗನ ಆಟವನ್ನು ಕಣ್ತುಂಬಿಕೊಳ್ಳುತ್ತಿದ್ದರಂತೆ. ನಾನು ಆಗ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದೆ. ಅಂಕಲ್ ನೀವ್ಯಾಕೆ ತುಂಬಾ ಸಾಧಾರಣವಾಗಿ ಬಂದು, ಎಲ್ಲೋ ಮೂಲೆಯಲ್ಲಿ ಕುಳಿತು ಮ್ಯಾಚ್ ನೋಡುತ್ತೀರಾ ಎಂದು ಸೌರವ್ ಗಂಗೂಲಿ ಕೇಳಿದ್ದರಂತೆ.

46
ದ್ರಾವಿಡ್ ತಂದೆ ಸ್ಟೇಡಿಯಂ ಮೂಲೆಯಲ್ಲಿ ಕುಳಿತು ಮ್ಯಾಚ್ ನೋಡೋದೇಕೆ?

ಅದಕ್ಕೆ ದ್ರಾವಿಡ್ ತಂದೆ, ಯಾವಾಗಲೆಲ್ಲಾ ಬೆಂಗಳೂರಿನಲ್ಲಿ ಟೆಸ್ಟ್ ಮ್ಯಾಚ್ ನಡೆಯುತ್ತೋ, ನಾನು ಗುಟ್ಟಾಗಿಯೇ ಮ್ಯಾಚ್ ನೋಡಲು ಬಯಸುತ್ತೇನೆ. ಯಾಕೆಂದರೆ ಸ್ಟೇಡಿಯಂನ ವಿಐಪಿ ಸ್ಟ್ಯಾಂಡ್‌ನಲ್ಲಿ ನನ್ನ ಮುಖವನ್ನು ನೋಡಿದರೆ ದ್ರಾವಿಡ್ ಒತ್ತಡಕ್ಕೆ ಒಳಗಾಗುತ್ತಿದ್ದರು. ಇದೇ ಕಾರಣಕ್ಕೆ ಆತ ಒತ್ತಡವಿಲ್ಲದೇ ಆಡಬೇಕೆಂದರೆ ನಾನು ಆತನಿಗೆ ಕಾಣದಂತೆ ಎಲ್ಲೋ ಮೂಲೆಯಲ್ಲಿ ಕುಳಿತು ಮ್ಯಾಚ್ ನೋಡಲು ಇಷ್ಟಪಡುತ್ತೇನೆ ಎಂದಿದ್ದರಂತೆ.

56
ರಾಹುಲ್ ದ್ರಾವಿಡ್ ಮಕ್ಕಳು ಕೂಡಾ ಕ್ರಿಕೆಟಿಗರು

ಇನ್ನು ರಾಹುಲ್ ದ್ರಾವಿಡ್ ಪುತ್ರರಾದ ಸಮಿತ್ ಹಾಗೂ ಅನ್ವಯ್ ಕೂಡಾ ಯುವ ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದು, ಸಮಯ ಸಿಕ್ಕಾಗಲೆಲ್ಲಾ ತಮ್ಮ ಮಕ್ಕಳ ಆಟವನ್ನು ರಾಹುಲ್ ದ್ರಾವಿಡ್ ದಂಪತಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಮೈದಾನದಲ್ಲಿ ಆಟವನ್ನು ಕಣ್ತುಂಬಿಕೊಳ್ಳುವುದನ್ನು ನಾವು ನೋಡಿದ್ದೇವೆ. ದ್ರಾವಿಡ್ ಕೂಡಾ ತಮ್ಮ ಸಿಂಪ್ಲಿಸಿಟಿಗೆ ಹೆಸರುವಾಸಿಯಾಗಿದ್ದಾರೆ.

66
ರಾಹುಲ್ ದ್ರಾವಿಡ್ ಅವರ ಯಾವ ಇನ್ನಿಂಗ್ಸ್ ಇಷ್ಟ?

ಭಾರತ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 10,000+ ರನ್ ಬಾರಿಸಿದ ಕೆಲವೇ ಕೆಲವು ಭಾರತೀಯ ಬ್ಯಾಟರ್‌ಗಳಲ್ಲಿ ರಾಹುಲ್ ದ್ರಾವಿಡ್ ಕೂಡಾ ಒಬ್ಬರಾಗಿದ್ದಾರೆ. ರಾಹುಲ್ ದ್ರಾವಿಡ್ ಅವರ ಯಾವ ಇನ್ನಿಂಗ್ಸ್‌ ನಿಮಗೆ ಇಷ್ಟ ಎನ್ನುವುದನ್ನು ಕಮೆಂಟ್ ಮಾಡಿ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories