ಅಹಮದಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯದಲ್ಲಿಂದು ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದ ಫಲಿತಾಂಶದ ಮೇಲೆ ಟೀಂ ಇಂಡಿಯಾ ಕಣ್ಣಿಟ್ಟಿದೆ. ಈ ಮ್ಯಾಚ್ ಹರಿಣಗಳು ಗೆಲ್ಲಲಿ ಎಂದು ಭಾರತ ಪ್ರಾರ್ಥಿಸುತ್ತಿದೆ.
ಈ ಬಾರಿ ಟಿ20 ವಿಶ್ವಕಪ್‌ನ ಸೂಪರ್-8 ಹಂತದ ಮಹತ್ವದ ಪಂದ್ಯದಲ್ಲಿ ಗುರುವಾರ ದಕ್ಷಿಣ ಆಫ್ರಿಕಾ ಹಾಗೂ ಮಾಜಿ ಚಾಂಪಿಯನ್ ವೆಸ್ಟ್‌ಇಂಡೀಸ್ ಮುಖಾಮುಖಿಯಾಗಲಿವೆ.
26
ದಕ್ಷಿಣ ಆಫ್ರಿಕಾ ಗೆಲುವಿಗೆ ಭಾರತ ಪ್ರಾರ್ಥನೆ
ಸೂಪರ್-8ನಲ್ಲಿ ಗೆದ್ದು ಶುಭಾರಂಭ ಮಾಡಿರುವ ಈ ಎರಡು ತಂಡಗಳ ನಡುವಿನ ಪಂದ್ಯ ಭಾರತಕ್ಕೂ ಅನಿವಾರ್ಯವಾಗಿದೆ. ದಕ್ಷಿಣ ಆಫ್ರಿಕಾ ಗೆಲ್ಲಲು ಭಾರತ ಪ್ರಾರ್ಥಿಸಲಿದ್ದು, ವೆಸ್ಟ್‌ಇಂಡೀಸ್ ಗೆದ್ದರೆ ಭಾರತಕ್ಕೆ ಸಂಕಷ್ಟ ಎದುರಾಗಲಿದೆ.
36
ಈಗಾಗಲೇ ಹರಿಣಗಳ ಎದುರು ಸೋತಿರುವ ಭಾರತ
ಭಾರತ ಈಗಾಗಲೇ ದ.ಆಫ್ರಿಕಾ ವಿರುದ್ಧ ಸೋತಿದೆ. ತಂಡ ಸೆಮಿಫೈನಲ್ ತಲುಪಲು ಕೊನೆ 2 ಪಂದ್ಯದಲ್ಲಿ ಗೆಲ್ಲಬೇಕಿರುವುದು ಮಾತ್ರವಲ್ಲದೇ, ದ.ಆಫ್ರಿಕಾ ಕೂಡಾ 2 ಪಂದ್ಯದಲ್ಲಿ ಜಯಿಸಬೇಕು. ಆಗ ಭಾರತಕ್ಕೆ ಸೆಮಿಫೈನಲ್ ಅವಕಾಶ ಸಿಗಲಿದೆ.
ಒಂದು ವೇಳೆ ವಿಂಡೀಸ್ ಗೆದ್ದರೆ ಆಗ ಭಾರತ ಕೊನೆ 2 ಪಂದ್ಯದಲ್ಲಿ ಗೆದ್ದರೂ ಸೆಮೀಸ್‌ಗೇರುವುದು ಸುಲಭವಲ್ಲ. ನೆಟ್ ರನ್‌ರೇಟ್ ಮೇಲೆ ಸೆಮಿಫೈನಲ್ ಭವಿಷ್ಯ ನಿರ್ಧಾರವಾಗಲಿದೆ. ಹೀಗಾಗಿಯೇ ದ.ಆಫ್ರಿಕಾದ ಗೆಲುವು ಭಾರತದ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಲಿದೆ.
56
ಎರಡು ತಂಡಗಳಲ್ಲಿದ್ದಾರೆ ಬಲಾಢ್ಯ ಆಟಗಾರರು
ಇನ್ನು, ಈ ಪಂದ್ಯದಲ್ಲಿ ದ.ಆಫ್ರಿಕಾ-ವಿಂಡೀಸ್ ತಂಡಗಳಿಂದ ಪ್ರಬಲ ಪೈಪೋಟಿ ಎದುರಾಗುವುದು ಖಚಿತ. ದ.ಆಫ್ರಿಕಾದಲ್ಲಿ ಮಾರ್ಕ್‌ರಮ್, ಡಿ ಕಾಕ್, ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಲುಂಗಿ ಎನ್‌ಗಿಡಿ, ರಬಾಡ ಸೇರಿ ಪ್ರಮುಖರಿದ್ದು, ವಿಂಡೀಸ್ ತಂಡ ಹೆಟ್ಮೇಯರ್, ರುಥರ್‌ಫೋರ್ಡ್, ರೋವ್ಮನ್ ಪೊವೆಲ್, ಹೋಲ್ಡರ್, ಗುಟಕೇಶ್ ಮೋಟಿಯನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.
66
ಪಂದ್ಯ ಆರಂಭ & ನೇರ ಪ್ರಸಾರ
ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ಇಂದು ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.