ಭಾರತ ವಿರುದ್ಧ ಪಂದ್ಯ ಸೋತರೂ ಪಾಕ್ ನಾಯಕ ಸಲ್ಮಾನ್‌ಗೆ ನೆಮ್ಮದಿಯ ನಿದ್ದೆ, ಕಾರಣ ಏನು? ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ 61 ರನ್ ಹೀನಾಯ ಸೋಲಿನ ಬಳಿಕವೂ ಪಾಕ್ ನಾಯಕನಲ್ಲಿ ಸೋಲಿಗಿಂತ ಸಂಭ್ರಮೇ ಕಾಣುತ್ತಿದೆ
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ ಪಾಕಿಸ್ತಾನ ಮುಗ್ಗರಿಸಿದೆ. ಬರೋಬ್ಬರಿ 61 ರನ್ ಸೋಲು ಕಂಡಿರುವ ಪಾಕಿಸ್ತಾನ ವಿರುದ್ದ ಪಾಕ್ ಅಭಿಮಾನಿಗಳು ಗರಂ ಆಗಿದ್ದಾರೆ. ಇತ್ತ ತಂಡದ ಆಟಗಾರರು ಸೋಲಿನ ನೋವಿನಲ್ಲಿದ್ದಾರೆ. ಆದರೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಆಲಿಗೆ ಯಾವುದೇ ನೋವಿಲ್ಲ. ಬದಲಾಗಿ ನೆಮ್ಮದಿಯಿದೆ. ಕಾರಣ ಅಭಿಷೇಕ್ ಶರ್ಮಾ ಆಡಬೇಕು ಆಹ್ವಾನಿಸಿದ್ದು ಇದೇ ಸಲ್ಮಾನ್ ಆಘಾ, ಬಳಿಕ ಅಭಿಷೇಕ್ ಶರ್ಮಾರನ್ನು ಶೂನ್ಯಕ್ಕೆ ಔಟ್ ಮಾಡಿಸಿದ ತಮ್ಮ ಮಾತು ಉಳಿಸಿಕೊಂಡಿದ್ದಾರೆ.
ಪಂದ್ಯದ ಹಿಂದಿನ ದಿನ ಅಭಿಷೇಕ್ ಭಾರತ ತಂಡದಲ್ಲಿ ಆಡಬೇಕು ಎಂದು ಹೇಳಿದ್ದ ಪಾಕ್ ನಾಯಕ ಸಲ್ಮಾನ್ ಆಘಾ, ಅವರೇ ಮೊದಲ ಓವರ್‌ನಲ್ಲಿ ಅಭಿಷೇಕ್ ವಿಕೆಟ್ ಪಡೆದರು.
27
ಅಭಿಷೇಕ್ ಹೆಸರಿಗೆ ಬೇಡದ ದಾಖಲೆ
ನಾಲ್ಕು ಎಸೆತಗಳನ್ನು ಎದುರಿಸಿದ ಅಭಿಷೇಕ್ ಶೂನ್ಯಕ್ಕೆ ಔಟಾದರು. ಇದರೊಂದಿಗೆ, ಟಿ20 ವಿಶ್ವಕಪ್‌ನಲ್ಲಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ಮೊದಲ ಭಾರತೀಯ ಬ್ಯಾಟರ್ ಎಂಬ ಅವಮಾನಕ್ಕೆ ಅಭಿಷೇಕ್ ಗುರಿಯಾದರು. ಇದಕ್ಕೂ ಮುನ್ನ ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ ಅಭಿಷೇಕ್ ಗೋಲ್ಡನ್ ಡಕ್ ಆಗಿದ್ದರು. ಅನಾರೋಗ್ಯದ ಕಾರಣ ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದರು. ಅಭಿಷೇಕ್ ಹೊರತುಪಡಿಸಿ, ಬಾಂಗ್ಲಾದೇಶದ ಇಮ್ರುಲ್ ಕಾಯೆಸ್ ಮಾತ್ರ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ಮತ್ತೊಬ್ಬ ಬ್ಯಾಟರ್.
37
ಆಘಾ ಎದುರು ಮುಗ್ಗರಿಸಿದ ಅಭಿಷೇಕ್
ಕೊಲಂಬೊದಲ್ಲಿ ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ಎಸೆದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಅಭಿಷೇಕ್ ಶರ್ಮಾ ವಿಕೆಟ್ ಒಪ್ಪಿಸಿದರು. ಮಿಡ್-ಆನ್‌ನಲ್ಲಿದ್ದ ಶಾಹೀನ್ ಶಾ ಆಫ್ರಿದಿಗೆ ಕ್ಯಾಚ್ ನೀಡಿ ಅವರು ಪೆವಿಲಿಯನ್‌ಗೆ ಮರಳಿದರು.
ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಕೂಡ ಟಿ20 ವಿಶ್ವಕಪ್‌ನಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆದರೆ, ಅದು ಅವರ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಾಗಿರಲಿಲ್ಲ. 2010ರ ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ನೆಹ್ರಾ ಡಕೌಟ್ ಆಗಿದ್ದರು. ವಿಶ್ವಕಪ್‌ನಲ್ಲಿ ಒಟ್ಟು ಮೂರು ಬಾರಿ ಶೂನ್ಯಕ್ಕೆ ಔಟಾದ ಏಕೈಕ ಭಾರತೀಯ ಆಟಗಾರ ಎಂಬ ದಾಖಲೆ ನೆಹ್ರಾ ಹೆಸರಿನಲ್ಲಿದೆ.
57
ಕೊಹ್ಲಿ, ಗಂಭೀರ್ ಸಾಲಿಗೆ ಅಭಿಷೇಕ್
ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆರನೇ ಭಾರತೀಯ ಆಟಗಾರ ಅಭಿಷೇಕ್ ಶರ್ಮಾ. ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ರವೀಂದ್ರ ಜಡೇಜಾ, ಶಿವಂ ದುಬೆ ಮತ್ತು ಆಶಿಶ್ ನೆಹ್ರಾ ಈ ಪಟ್ಟಿಯಲ್ಲಿರುವ ಇತರ ಭಾರತೀಯ ಬ್ಯಾಟರ್‌ಗಳು.
67
ಕಳೆದ 6 ಪಂದ್ಯಗಳಲ್ಲಿ 4 ಡಕೌಟ್!
ಅಭಿಷೇಕ್ ಶರ್ಮಾ ತಾವು ಆಡಿದ ಕೊನೆಯ ಆರು ಟಿ20 ಪಂದ್ಯಗಳಲ್ಲಿ ನಾಲ್ಕನೇ ಬಾರಿಗೆ ಶೂನ್ಯಕ್ಕೆ ಔಟಾಗಿದ್ದಾರೆ. ಅವರ ಕೊನೆಯ ಆರು ಟಿ20 ಪಂದ್ಯಗಳ ಸ್ಕೋರ್‌ಗಳು ಹೀಗಿವೆ: 0, 0, 0, 68, 0, 30. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಭಿಷೇಕ್ 18 ಎಸೆತಗಳಲ್ಲಿ 24 ರನ್ ಗಳಿಸಿದ್ದರು.
77
ಸಂಜು ಬದಲು ಬಂದು ನಿರಾಸೆ ಮೂಡಿಸಿದ ಅಭಿಷೇಕ್
ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಅನಾರೋಗ್ಯದಿಂದ ಹೊರಗುಳಿದಾಗ, ಮಲಯಾಳಿ ಆಟಗಾರ ಸಂಜು ಸ್ಯಾಮ್ಸನ್ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ್ದರು. ಆಗ ಸಂಜು 8 ಎಸೆತಗಳಲ್ಲಿ 22 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಪಾಕಿಸ್ತಾನದ ವಿರುದ್ಧ ಸಂಜು ಅವರನ್ನು ಕೈಬಿಟ್ಟು ಅಭಿಷೇಕ್ ಅವರನ್ನು ತಂಡಕ್ಕೆ ವಾಪಸ್ ಕರೆತರಲಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.