ದೆಹಲಿ ಹೊಟೆಲ್‌ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸದಸ್ಯನಿಗೆ ಹೃದಯಾಘಾತ, ಕುಸಿದು ಬಿದ್ದ ಸದಸ್ಯನನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ. ಟಿ20 ವಿಶ್ವಕಪ್ ಪಂದ್ಯಕ್ಕಾಗಿ ಆಫ್ಘಾನಿಸ್ತಾನ ತಂಡ ದೆಹಲಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ಈ ಘಟನೆ ಸಂಭವಿಸಿದೆ.
ಭಾರತ ಆತಿಥ್ಯವಹಿಸಿರುವ ಟಿ20 ವಿಶ್ವಕಪ್ ಟೂರ್ನಿ ಪಂದ್ಯಕ್ಕಾಗಿ ಹಲವು ತಂಡಗಳು ಭಾರತದಲ್ಲಿ ಬೀಡು ಬಿಟ್ಟಿದೆ. ಈಗಾಗಲೇ 22 ಪಂದ್ಯಗಳು ಮುಗಿದಿದೆ. ಟೂರ್ನಿ ರೋಚಕ ಘಟ್ಟ ತಲುಪುತ್ತಿದೆ. ಇದರ ನಡುವೆ ಡಿ ಗುಂಪಿನಲ್ಲಿರುವ ಆಫ್ಘಾನಿಸ್ತಾನ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ 2 ಪಂದ್ಯ ಸೋತು ಸಂಕಷ್ಟಕ್ಕೆ ಸಿಲುಕಿರುವ ಆಫ್ಘಾನಿಸ್ತಾನ ತಂಡದ ಸದಸ್ಯನೊಬ್ಬ ಹೃದಯಘಾತದಿಂದ ಕುಸಿದು ಬಿದ್ದ ಘಟನೆ ನಡೆದಿದೆ.
25
ದೆಹಲಿ ಹೊಟೆಲ್‌ನಲ್ಲಿ ಕುಸಿದು ಬಿದ್ದ ಸದಸ್ಯ
ಆಫ್ಘಾನಿಸ್ತಾನ ತಂಡದ ಪರ್ಫಾಮೆನ್ಸ್ ಅನಾಲಿಸ್ಟ್ ಕೆಸಿ ರಾಮ ಸುಬ್ರಹ್ಮಣ್ಯನ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರುಣೇ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಅಪ್ಘಾನಿಸ್ತಾನ ತಂಡದ ದೆಹಲಿಯಲ್ಲಿ ತಂಗಿದೆ. ಈ ವೇಳೆ ಕೆಸಿ ರಾಮ ಸುಬ್ರಹ್ಮಣ್ಯ ತೀವ್ರ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಎದೆನೋವಿನಿಂದ ಅಸ್ವಸ್ಥಗೊಂಡ ಬೆನ್ನಲ್ಲೇ ಕುಸಿದು ಬಿದ್ದಿದ್ದಾರೆ.
35
ಫೋರ್ಟಿಸ್ ಆಸ್ಪತ್ರೆ ದಾಖಲು
ತಂಡದ ಸದಸ್ಯರು, ಆಟಾಗರರು ಇರುವಾಗಲೇ ಆಪ್ಘಾನಿಸ್ತಾನ ತಂಡದ ಕೆಸಿ ರಾಮ ಸುಬ್ರಹ್ಮಣ್ಯನ್‌ಗೆ ಹೃದಯಾಘಾತವಾಗಿದೆ. ಇತರ ಸದಸ್್ಯರು ತಕ್ಷಣವೇ ಹೊಟಲ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ತಕ್ಷಣವೇ ಕೆಸಿ ರಾಮ ಸುಬ್ರಹ್ಮಣ್ಯನ್ ಅವರನ್ನು ದೆಹಲಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಾಗಿದೆ. ಸದ್ಯ ಆ್ಯಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಕೆಸಿ ರಾಮ ಸುಬ್ರಹ್ಮಣ್ಯನ್ ಅವರಿಗೆ ಫೋರ್ಟಿಸ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ತಂಡ ನಿಗಾವಹಿಸಿದೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಕೆಸಿ ರಾಮ ಸುಬ್ರಹ್ಮಣ್ಯನ್ ಅವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಇತ್ತ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಕುಟುಂಬಕ್ಕೆ ಸಾಥ್ ನೀಡಿದೆ.
55
ಜಿದ್ದಾಜಿದ್ದಿನ ಪೈಪೋಟಿ
ಆಫ್ಘಾನಿಸ್ತಾನ ಆರಂಭಿಕ 2 ಪಂದ್ಯದಲ್ಲಿ ಕೂದಲೆಳೆ ಅಂತರದಲ್ಲಿ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಮುಗ್ಗರಿಸಿತ್ತು. ಆಧರೆ ಎರಡನೇ ಪಂದ್ಯದಲ್ಲಿ ಎರೆಡೆರಡು ಸೂಪರ್ ಓವರ್ ಮೂಲಕ ಇಡೀ ಟೂರ್ನಿಯ ರೋಚಕತೆ ಹೆಚ್ಚಿಸಿತ್ತು. ಸೌತ್ ಆಫ್ರಿಕಾ ಪಂದ್ಯ ಗೆದ್ದುಕೊಂಡಿತ್ತು. ಫೆಬ್ರವರಿ 16ರಂದು ಯುಎಐ ವಿರುದ್ಧ ಕಣಕ್ಕಿಳಿಯಲಿದೆ.
ಜಿದ್ದಾಜಿದ್ದಿನ ಪೈಪೋಟಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.