6 ಭಾರತೀಯರನ್ನೊಳಗೊಂಡ ಶ್ರೇಷ್ಠ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದ ಐಸಿಸಿ..! ವಿರಾಟ್ ಕೊಹ್ಲಿಗಿಲ್ಲ ಸ್ಥಾನ

First Published Jul 1, 2024, 3:09 PM IST

ಬೆಂಗಳೂರು: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮುವುದರೊಂದಿಗೆ ಟೂರ್ನಿಗೆ ತೆರೆ ಬಿದ್ದಿದೆ. ಇದೀಗ ಐಸಿಸಿ, ಈ ಚುಟುಕು ವಿಶ್ವಕಪ್ ಟೂರ್ನಿಯ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ಆರು ಭಾರತೀಯರಿಗೆ ಸ್ಥಾನ ಕಲ್ಪಿಸಿದೆ. ಐಸಿಸಿ ಶ್ರೇಷ್ಠ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ನೋಡೋಣ ಬನ್ನಿ.
 

1. ರೋಹಿತ್ ಶರ್ಮಾ:

ಟಿ20 ವಿಶ್ವಕಪ್ ವಿಜೇತ ತಂಡದ ನಾಯಕ ರೋಹಿತ್‌ ಶರ್ಮಾಗೆ ಐಸಿಸಿ ತಂಡದಲ್ಲೂ ನಾಯಕ ಪಟ್ಟ ಸಿಕ್ಕಿದೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, 8 ಇನಿಂಗ್ಸ್‌ಗಳಿಂದ 257 ರನ್ ಸಿಡಿಸಿ, ಟೀಂ ಇಂಡಿಯಾ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.
 

2. ರೆಹಮನುಲ್ಲಾ ಗುರ್ಬಾಜ್:

ಆಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಗುರ್ಬಾಜ್, 3 ಅರ್ಧಶತಕ ಸಹಿತ 281 ರನ್ ಸಿಡಿಸಿದ್ದರು. ಆಫ್ಘಾನ್ ತಂಡವು ಸೆಮಿಫೈನಲ್ ಪ್ರವೇಶಿಸುವಲ್ಲಿ ಗುರ್ಬಾಜ್ ಪ್ರಮುಖ ಪಾತ್ರ ವಹಿಸಿದ್ದರು.
 

3. ನಿಕೋಲಸ್ ಪೂರನ್:

ವೆಸ್ಟ್ ಇಂಡೀಸ್‌ ತಂಡದ ಸ್ಪೋಟಕ ಬ್ಯಾಟರ್ ಪೂರನ್, ಟೂರ್ನಿಯಲ್ಲಿ 38ರ ಸರಾಸರಿಯಲ್ಲಿ 228 ರನ್ ಸಿಡಿಸಿ ಮಿಂಚಿದ್ದರು. ಆಫ್ಘಾನಿಸ್ತಾನ ಎದುರು ಪೂರನ್ ಕೇವಲ 53 ಎಸೆತಗಳಲ್ಲಿ 98 ರನ್ ಚಚ್ಚಿದ್ದರು.
 

4. ಸೂರ್ಯಕುಮಾರ್ ಯಾದವ್:

ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್, ಮಧ್ಯಮ ಕ್ರಮಾಂಕದಲ್ಲಿ ಕೆಲವು ಇಂಪ್ಯಾಕ್ಟ್‌ಪುಲ್ ಇನಿಂಗ್ಸ್ ಆಡುವ ಮೂಲಕ ಟೀಂ ಇಂಡಿಯಾ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಸೂರ್ಯ ಫೈನಲ್ ಪಂದ್ಯದಲ್ಲಿ ಹಿಡಿದ ಕ್ಯಾಚ್ ಯಾರೂ ಮರೆಯಲು ಸಾಧ್ಯವಿಲ್ಲ.
 

5. ಮಾರ್ಕಸ್ ಸ್ಟೋನಿಸ್:

ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಸ್ಟೋನಿಸ್ ಟೂರ್ನಿಯಲ್ಲಿ 40ರ ಸರಾಸರಿಯಲ್ಲಿ 169 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದರು.
 

6. ಹಾರ್ದಿಕ್ ಪಾಂಡ್ಯ:

ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ, ತಮ್ಮ ಆಲ್ರೌಂಡ್ ಆಟದ ಮೂಲಕ ಮಿಂಚಿದ್ದರು. ಪಾಂದ್ಯ ಬ್ಯಾಟಿಂಗ್‌ನಲ್ಲಿ 144 ರನ್ ಹಾಗೂ ಬೌಲಿಂಗ್‌ನಲ್ಲಿ 11 ವಿಕೆಟ್ ಕಬಳಿಸಿದ್ದರು.
 

7. ಅಕ್ಷರ್ ಪಟೇಲ್:

ಟೀಂ ಇಂಡಿಯಾದ ಮತ್ತೋರ್ವ ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ ಕೂಡಾ ಐಸಿಸಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಕ್ಷರ್ ಸೆಮಿಫೈನಲ್‌ನಲ್ಲಿ ಅದ್ಭುತ ಬೌಲಿಂಗ್ ಹಾಗೂ ಫೈನಲ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚಿದ್ದರು.
 

8. ರಶೀದ್ ಖಾನ್:

ಆಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್, ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಮಿಂಚಿದ್ದರು. ಟೂರ್ನಿಯಲ್ಲಿ ರಶೀದ್ ಖಾನ್ 14 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
 

9. ಜಸ್ಪ್ರೀತ್ ಬುಮ್ರಾ:

ಟೀಂ ಇಂಡಿಯಾ ಮಾರಕ ವೇಗಿ ಬುಮ್ರಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 15 ವಿಕೆಟ್ ಕಬಳಿಸಿ ಮಿಂಚಿದ್ದರು. ಬುಮ್ರಾ ಫೈನಲ್ ಪಂದ್ಯದಲ್ಲಿ ನಡೆಸಿದ ದಾಳಿ, ಕಪ್ ಟೀಂ ಇಂಡಿಯಾ ಪಾಲಾಗುವಂತೆ ಮಾಡಿತು ಎಂದರೆ ಅತಿಶಯೋಕ್ತಿಯಲ್ಲ. ಬುಮ್ರಾ, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
 

10. ಆರ್ಶದೀಪ್ ಸಿಂಗ್:

ಟೀಂ ಇಂಡಿಯಾ ಎಡಗೈ ವೇಗಿ ಆರ್ಶದೀಪ್ ಸಿಂಗ್ ಟೂರ್ನಿಯಲ್ಲಿ 17 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
 

11. ಫಜಲ್‌ಹಕ್ ಫಾರೂಕಿ;

ಆಫ್ಘಾನಿಸ್ತಾನ ತಂಡದ ವೇಗಿ ಫಜಲ್‌ಹಕ್ ಫಾರೂಕಿ ಕೂಡಾ 17 ವಿಕೆಟ್ ಕಬಳಿಸಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಆರ್ಶದೀಪ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
 

12. ಏನ್ರಿಚ್ ನೋಕಿಯ:

ದಕ್ಷಿಣ ಆಫ್ರಿಕಾದ ಮಾರಕ ವೇಗಿ ಏನ್ರಿಚ್ ನೋಕಿಯ 12ನೇ ಆಟಗಾರನಾಗಿ ಐಸಿಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನೋಕಿಯ 15 ವಿಕೆಟ್ ಕಬಳಿಸಿ ಮಿಂಚಿದ್ದರು.
 

Latest Videos

click me!