'ಅವರನ್ನು ಅಪ್ಪಿಕೊಳ್ಳೋಕೆ ಯಾರಿಲ್ವಾ?' ಅಳುತ್ತಿದ್ದ ಕ್ರಿಕೆಟಿಗರನ್ನು ನೋಡಿದ ವಾಮಿಕಾಗೆ ತಲೆಬಿಸಿ!

First Published | Jun 30, 2024, 11:16 AM IST

ಟಿ20 ವಿಶ್ವಕಪ್ ಗೆದ್ದು ಭಾರತದ ಕ್ರಿಕೆಟಿಗರು ಸಂತೋಷದ ಕಣ್ಣೀರು ಸುರಿಸುತ್ತಿದ್ದರೆ, ಇತ್ತ ಇದನ್ನು ನೋಡಿದ ವಿರಾಟ್ ಕೊಹ್ಲಿ ಮಗಳು ವಾಮಿಕಾ, ಅಳುತ್ತಿರುವ ಅವರನ್ನು ಅಪ್ಪಿಕೊಂಡು ಸಮಾಧಾನ ಮಾಡಲು ಯಾರೂ ಇಲ್ವಲ್ಲಾ ಎಂದು ತಲೆಬಿಸಿ ಮಾಡಿಕೊಂಡಿದ್ದಳಂತೆ.. ಇದಕ್ಕೆ ಅಮ್ಮ ಅನುಷ್ಕಾ ಶರ್ಮಾ ಮಾಡಿದ ಸಮಾಧಾನದ ರೀತಿ ಖಂಡಿತಾ ನಿಮ್ಮ ಮನಸ್ಸನ್ನು ಗೆಲ್ಲುತ್ತೆ..

ಟಿ20 ವಿಶ್ವಕಪ್‌ನಲ್ಲಿ ವಿಜೇತರ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ಟೀಮ್ ಇಂಡಿಯಾ ತಮ್ಮ ಮತ್ತು ದೇಶದ ಕನಸನ್ನು ನನಸು ಮಾಡಿದೆ. ಮತ್ತು ಪಂದ್ಯ ಪುರುಷೋತ್ತಮ ವಿರಾಟ್ ಕೊಹ್ಲಿ ಈ ಅದ್ಭುತ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ತನ್ನ ಸಂಗಾತಿ ಹಾಗೂ ದೇಶದ ಗೆಲುವಿಗಾಗಿ ಸಿಹಿಯಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಮತ್ತು ಈ ಪೋಸ್ಟ್‌ನಲ್ಲಿ ಮಗಳು ವಾಮಿಕಾಳ ತಲೆಬಿಸಿಯೊಂದನ್ನು ಅನಾವರಣಗೊಳಿಸಿದ್ದಾರೆ.

Tap to resize

ಹೌದು, ವಿಶ್ವಕಪ್ ಗೆದ್ದ ಭಾರದ ತಂಡದ ಸದಸ್ಯರು ಸಂತಸದಿಂದ ಕೂಗುತ್ತಾ, ಕಿರಿಚುತ್ತಾ, ಖುಷಿ ತಾಳಲಾರದೆ ಕಣ್ಣರು ಹಾಕುತ್ತಿದ್ದರು. ಆದರೆ, ಪುಟ್ಟ ವಾಮಿಕಾಗೆ ಅವರು ಅಳುವುದನ್ನು ನೋಡಿ ಬೇಜಾರಾಗಿದೆ.

ಇವರೆಲ್ಲ ಅಳ್ತಾ ಇದಾರಲ್ಲಾ, ಇವರನ್ನು ತಬ್ಬಿಕೊಂಡು ಸಮಾಧಾನ ಮಾಡೋಕೆ ಯಾರೂ ಇಲ್ವಾ ಎಂದು ಟಿವಿ ನೋಡಿದ ವಾಮಿಕಾ ಅಮ್ಮ ಅನುಷ್ಕಾ ಬಳಿ ಕೇಳಿದಳಂತೆ. 

ಇದಕ್ಕೆ ಅನುಷ್ಕಾ, ಅವರನ್ನು 1.5 ಶತಕೋಟಿ ಜನರು ಅಪ್ಪಿಕೊಂಡಿದ್ದಾರೆ ಕಂದಾ ಎಂದು ಹೇಳಿ ಸಮಾಧಾನ ಮಾಡಿದ್ದಾಗಿ ಹೇಳಿದ್ದಾರೆ. 

ಪುಟ್ಟ ವಾಮಿಕಾಳ ಟೆನ್ಷನ್ ಮತ್ತು ತಾಯಿ ಅನುಷ್ಕಾ ಉತ್ತರ ಎಲ್ಲರ ಮನಸ್ಸನ್ನು ಬೆಚ್ಚಗಾಗಿಸಿದೆ. ಎಂಥಾ ಮುದ್ದಾದ ಕುಟುಂಬ ಎಂದು ನೆಟ್ಟಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

'ಎಂತಹ ಅದ್ಭುತ ಗೆಲುವು ಮತ್ತು ಎಂತಹ ಐತಿಹಾಸಿಕ ಸಾಧನೆ !! ಚಾಂಪಿಯನ್ಸ್ - ಅಭಿನಂದನೆಗಳು !!' ಎಂದಿರುವ ಅನುಷ್ಕಾ ಗೆಲುವಿನ ಸಂದರ್ಭದ ಹಲವು ಫೋಟೋಗಳ ಸರಣಿ ಹಂಚಿಕೊಂಡಿದ್ದಾರೆ.
 

ತನ್ನ ಪ್ರಿಯಕರ ವಿರಾಟ್ ಕೊಹ್ಲಿಗಾಗಿ ಮತ್ತೊಂದು ಪೋಸ್ಟ್ ಹಾಕಿರುವ ಅನುಷ್ಕಾ, ಅದರಲ್ಲಿ ಕೊಹ್ಲಿ ಭಾರತದ ಧ್ವಜ ಹೊದ್ದು ಹೆಮ್ಮೆಯಿಂದ ಟ್ರೋಫಿ ಎತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. 
 

ಜೊತೆಗೆ, 'ಮತ್ತು.. ನಾನು ಈ ಮನುಷ್ಯನನ್ನು ಪ್ರೀತಿಸುತ್ತೇನೆ @virat.kohli . ನಿಮ್ಮನ್ನು ನನ್ನನು ಎಂದು ಕರೆಯಲು ತುಂಬಾ ಕೃತಜ್ಞಳಾಗಿದ್ದೇನೆ - ಈಗ ಇದನ್ನು ಆಚರಿಸಲು ನನಗಾಗಿ ಒಂದು ಲೋಟ ಹೊಳೆಯುವ ನೀರನ್ನು ಕುಡಿಯಿರಿ !' ಎಂದು ಬರೆದಿದ್ದಾರೆ. 

ಈ ನಡುವೆ ವಿಶ್ವಕಪ್ ಗೆದ್ದ ಬಳಿಕ ಮನೆಗೆ ವಿಡಿಯೋ ಕಾಲ್ ಮಾಡಿದ ವಿರಾಟ್ ಕೊಹ್ಲಿ ಮಗಳು ವಾಮಿಕಾ ಹಾಗೂ ಮಗ ಅಕಾಯ್‌ರನ್ನು ಮಾತಾಡಿಸುತ್ತಿರುವ ಫೋಟೋಗಳು ಕೂಡಾ ವೈರಲ್ ಆಗಿವೆ. 

Latest Videos

click me!