ಟೀಂ ಇಂಡಿಯಾ ಮಾಜಿ ನಾಯಕರ ಮಕ್ಕಳು ಈಗೇನು ಮಾಡ್ತಿದ್ದಾರೆ..?

Suvarna News   | Asianet News
Published : Oct 03, 2021, 03:50 PM IST

ಬೆಂಗಳೂರು: ಭಾರತೀಯ ಕ್ರಿಕೆಟ್‌ (Indian Cricket Team) ಕಂಡ ದಿಗ್ಗಜ ನಾಯಕರು ಎಂದಾಕ್ಷಣ ತಕ್ಷಣಕ್ಕೆ ನೆನಪಾಗುವ ಹೆಸರುಗಳೆಂದರೇ ಕಪಿಲ್‌ ದೇವ್ (Kapil Dev), ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್ ಹಾಗೂ ಸುನಿಲ್‌ ಗವಾಸ್ಕರ್. ಈ ಎಲ್ಲಾ ಆಟಗಾರರು ತಾವು ಮಾತ್ರ ಬೆಳೆದು ಮಿಂಚಲಿಲ್ಲ, ಬದಲಾಗಿ ಭಾರತ ತಂಡವನ್ನು ಮತ್ತೊಂದು ಸ್ಥರಕ್ಕೆ ಕೊಂಡೊಯ್ದಿದ್ದಾರೆ. ಕೆಲವು ಕ್ರಿಕೆಟಿಗರ ಮಕ್ಕಳು ತಮ್ಮ ತಂದೆಯ ಹಾದಿಯನ್ನೇ ಪಾಲಿಸಿದರೆ, ಮತ್ತೆ ಕೆಲವು ಕ್ರಿಕೆಟಿಗರ ಮಕ್ಕಳು ಕ್ರಿಕೆಟ್‌ ಹಾದಿ ಹಿಡಿಯದೇ ತಮ್ಮ ಆಸಕ್ತಿಕರ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಬನ್ನಿ ಟೀಂ ಇಂಡಿಯಾದ ನಾಯಕರ ಮಕ್ಕಳು ಈಗೇನು ಮಾಡುತ್ತಿದ್ದಾರೆ ಎನ್ನುವುದನ್ನು ನೋಡೋಣ

PREV
17
ಟೀಂ ಇಂಡಿಯಾ ಮಾಜಿ ನಾಯಕರ ಮಕ್ಕಳು ಈಗೇನು ಮಾಡ್ತಿದ್ದಾರೆ..?

ಸುನಿಲ್ ಗವಾಸ್ಕರ್ ಪುತ್ರ ರೋಹನ್ ಗವಾಸ್ಕರ್ ಕೂಡಾ ತಮ್ಮ ತಂದೆಯ ಕ್ಷೇತ್ರವನ್ನೇ ಆಯ್ದುಕೊಂಡು ಕ್ರಿಕೆಟರ್ ಎನಿಸಿಕೊಂಡರು. ಆದರೆ ತಂದೆ ಸುನಿಲ್ ಗವಾಸ್ಕರ್ ಗಳಿಸಿದಷ್ಟು ಯಶಸ್ಸು ರೋಹನ್‌ ಗವಾಸ್ಕರ್‌ಗೆ ದಕ್ಕಲಿಲ್ಲ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರೋಹನ್ ಸರಿಸುಮಾರು 7 ಸಾವಿರ ರನ್ ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹನ್‌ ಟೀಂ ಇಂಡಿಯಾ ಪರ ಕೇವಲ 11 ಪಂದ್ಯಗಳನ್ನಷ್ಟೇ ಆಡಿದ್ದರು. 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಈಗ ತಂದೆಯಂತೆ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

27

ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಹಾಗೂ ಟೆಸ್ಟ್ ತಂಡದ ನಾಯಕ ಬಿಷನ್‌ ಸಿಂಗ್ ಬೇಡಿಗೆ ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ತನ್ನದೇ ಆದ ಸ್ಥಾನಮಾನವಿದೆ. ಇಂತಹ ದಿಗ್ಗಜ ಆಟಗಾರನ ಪುತ್ರ ಅಂಗದ್‌ ಸಿಂಗ್ ಬೇಡಿ ಕ್ರಿಕೆಟರ್ ಆಗುವ ಬದಲು ಆಕ್ಟಿಂಗ್ ಕ್ಷೇತ್ರ ಆಯ್ದುಕೊಂಡು ತಮ್ಮ ವೃತ್ತಿಜೀವನ ನಡೆಸುತ್ತಿದ್ದಾರೆ. ಟೈಗರ್ ಝಿಂದಾ ಹೈ ಸೇರಿದಂತೆ ಹಲವು ಚಿತ್ರಗಳಲ್ಲಿ ಅಂಗದ್‌ ಕಾಣಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ವೆಬ್ ಸೀರಿಸ್‌ ಹಾಗೂ ಟೆಲಿವಿಷನ್‌ ಶೋನಲ್ಲೂ ಕೆಲಸ ಮಾಡುತ್ತಿದ್ದಾರೆ.
(photo Source- Google)

37

ಅನಿಲ್‌ ಕುಂಬ್ಳೆ ಪುತ್ರ ಮಯಾಸ್ ಕುಂಬ್ಳೆ ತಮ್ಮ ತಂದೆಯ ಆಸಕ್ತಿಕರ ಕ್ಷೇತ್ರವಾದ ವೈಲ್ಡ್‌ ಲೈಫ್‌ ಫೋಟೋಗ್ರಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಮಯಾಸ್‌ ಈಗ ಪ್ರಖ್ಯಾತ ವೈಲ್ಡ್‌ಲೈಫ್‌ ಫೋಟೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ

(Photo Source- Google)

47

1983ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್‌ ಪುತ್ರಿ ಆಮಿಯಾ ದೇವ್‌ ಸದ್ಯ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಸದ್ಯ ಯುಕೆಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಅಡ್ಮಿಶನ್‌ ಆಗಿದ್ದಾರೆ.
(photo Source- Google)

57

ರಾಹುಲ್ ದ್ರಾವಿಡ್‌ ಪುತ್ರ ಸಮಿತ್ ದ್ರಾವಿಡ್‌ ಕೂಡಾ ತಂದೆಯ ಪರಂಪರೆಯುನ್ನು ಮುಂದುವರೆಸಿಕೊಂಡು ಹೋಗುವತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡಲಾರಂಭಿಸಿದ್ದಾರೆ. 2018ರ ಜನವರಿಯಲ್ಲಿ ನಡೆದ ಅಂಡರ್-14 ಟೂರ್ನಿಯಲ್ಲಿ ಸಮಿತ್ ಭರ್ಜರಿ ಶತಕ ಬಾರಿಸಿ ಗಮನ ಸೆಳೆದಿದ್ದರು. ಸಮಿತ್ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿಲ್ಲ.

67

ಮೊಹಮ್ಮದ್ ಅಜರುದ್ದೀನ್ ಅವರಿಗೆ ಇಬ್ಬರು ಮಕ್ಕಳಿದ್ದರು. ಆದರೆ 2011ರಲ್ಲಿ ನಡೆದ ಅಪಘಾತದಲ್ಲಿ ಅಜರುದ್ದೀನ್ ಕಿರಿಯ ಮಗ ಅಯಾಜುದ್ದೀನ್‌ ಮೃತಪಟ್ಟಿದ್ದರು. ಹಿರಿಯ ಪುತ್ರ ಅಸಾದುದ್ದೀನ್‌ ತಮ್ಮ ತಂದೆಯಂತೆ ಕ್ರಿಕೆಟಿಗನಾಗಿದ್ದಾರೆ. 2018ರಲ್ಲಿ ಅಸಾದುದ್ದೀನ್‌ ಗೋವಾ ತಂಡದ ಪರ ರಣಜಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ಅಸಾದುದ್ದೀನ್‌ ಕೇವಲ 2 ಪಂದ್ಯಗಳನ್ನಷ್ಟೇ ಆಡಿದ್ದಾರೆ.

(photo Source- Google)

77

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಪುತ್ರಿ ಸನಾ ಗಂಗೂಲಿ ಸಾಕಷ್ಟು ಚರ್ಚೆಯಲ್ಲಿ ಇರುತ್ತಾರೆ. ಸದ್ಯ ಸದಾ ಗಂಗೂಲಿ ಲಂಡನ್‌ನ ಆಕ್ಸ್‌ಫರ್ಡ್‌ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಸನಾಗೆ ಡ್ಯಾನ್ಸ್‌ನಲ್ಲಿ  ಹೆಚ್ಚು ಆಸಕ್ತಿಯಿದೆ. ಸನಾ ತನ್ನ 7ನೇ ವಯಸ್ಸಿನಲ್ಲೇ ತಮ್ಮ ತಾಯಿಯಂತೆ ಒಡಿಶಾ ನೃತ್ಯ ಆರಂಭಿಸಿದ್ದರು.

click me!

Recommended Stories