ದುಬೈ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 48ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶಾರ್ಜಾ ಮೈದಾನದಲ್ಲಿಂದು ಪಂಜಾಬ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ. ಪ್ಲೇ ಆಫ್ ಪ್ರವೇಶಿಸುವ ದೃಷ್ಟಿಯಿಂದ ಆರ್‌ಸಿಬಿ ತಂಡದ ಪಾಲಿಗೆ ಈ ಪಂದ್ಯದ ಗೆಲುವು ಸಾಕಷ್ಟು ಮಹತ್ವದ್ದಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ
1. ವಿರಾಟ್ ಕೊಹ್ಲಿ: ಕಳೆದ ಕೆಲ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿರುವ ಆರ್‌ಸಿಬಿ ತಂಡದ ನಾಯಕ ಕೊಹ್ಲಿ, ಇದೀಗ ಪಂಜಾಬ್ ಎದುರು ಅಬ್ಬರಿಸಲು ನೋಡುತ್ತಿದ್ದಾರೆ.
211
2. ದೇವದತ್ ಪಡಿಕ್ಕಲ್: ಕರ್ನಾಟಕ ಮೂಲದ ಯುವ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರೂ ಯಾವುದೇ ಕ್ಷಣದಲ್ಲಿ ಬೇಕಾದರೂ ಕಮ್‌ಬ್ಯಾಕ್ ಮಾಡುವ ಕ್ಷಮತೆ ಪಡಿಕ್ಕಲ್‌ಗಿದೆ.
311
3. ಕೆ.ಎಸ್. ಭರತ್: ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಭರತ್ ಬಲಿಷ್ಠ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಎದುರು ದಿಟ್ಟ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. ಹೀಗಾಗಿ ಭರತ್ ಇಂದಿನ ಪಂದ್ಯದಲ್ಲೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
411
4. ಗ್ಲೆನ್ ಮ್ಯಾಕ್ಸ್‌ವೆಲ್: ಆರ್‌ಸಿಬಿ ತಂಡದ ಸ್ಟಾರ್ ಆಲ್ರೌಂಡರ್. ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಎದುರು ಆಕರ್ಷಕ ಅರ್ಧಶತಕ ಬಾರಿಸಿದ್ದಲ್ಲದೇ ಬೌಲಿಂಗ್‌ನಲ್ಲೂ ಸೈ ಎನಿಸಿಕೊಂಡಿರುವ ಮ್ಯಾಕ್ಸಿ ಮತ್ತೊಮ್ಮೆ ಮಿಂಚಿದರೆ ಆರ್‌ಸಿಬಿಗೆ ಗೆಲುವು ಕಟ್ಟಿಟ್ಟ ಬುತ್ತಿ.
511
5. ಎಬಿ ಡಿವಿಲಿಯರ್ಸ್: ಯುಎಇ ಚರಣದಲ್ಲಿ ಇದುವರೆಗೂ ಎಬಿಡಿ ಶೋ ನೋಡಲು ಸಿಕ್ಕಿಲ್ಲ. ಆದರೆ ಯಾವುದೇ ಕ್ಷಣದಲ್ಲಿ ಬೇಕಾದರೂ ಅಬ್ಬರಿಸಿ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಎಬಿ ಡಿವಿಲಿಯರ್ಸ್‌ಗಿದೆ.
611
6.ಶಾಬಾಜ್ ಅಹಮ್ಮದ್: ಆರ್‌ಸಿಬಿಯ ಮತ್ತೋರ್ವ ಆಲ್ರೌಂಡರ್, ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತನ್ನದೇ ಆದ ಕಾಣಿಕೆ ನೀಡಬಲ್ಲ ಉಪಯುಕ್ತ ಆಟಗಾರ. ಕಳೆದ ಪಂದ್ಯದಲ್ಲಿ ಮಿಂಚಲು ಶಾಬಾಜ್‌ಗೆ ಸಾಧ್ಯವಾಗಿರಲಿಲ್ಲ.
711
7. ಜಾರ್ಜ್ ಗಾರ್ಟನ್: ಕಳೆದ ಪಂದ್ಯದಲ್ಲಿ ಗಾರ್ಟನ್ ಕೊಂಚ ದುಬಾರಿಯಾಗಿದ್ದರೂ, ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇಂದಿನ ಪಂದ್ಯದಲ್ಲಿ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
811
8. ಹರ್ಷಲ್ ಪಟೇಲ್: ಮುಂಬೈ ಇಂಡಿಯನ್ಸ್ ವಿರುದ್ದ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಪಂದ್ಯ ಆರ್‌ಸಿಬಿಯತ್ತ ವಾಲುವಂತೆ ಮಾಡಿದ್ದ ಹರ್ಷಲ್ ಪಟೇಲ್ ಮತ್ತೊಮ್ಮೆ ಬೌಲಿಂಗ್‌ನಲ್ಲಿ ಮಿಂಚಲು ಎದುರು ನೋಡುತ್ತಿದ್ದಾರೆ.
911
9. ಕೈಲ್ ಜೇಮಿಸನ್: ನ್ಯೂಜಿಲೆಂಡ್ ಮೂಲದ ವೇಗದ ಬೌಲರ್. ಯುಎಇ ಚರಣದಲ್ಲಿ ಅಷ್ಟೇನು ಪರಿಣಾಮಕಾರಿ ಪ್ರದರ್ಶನವನ್ನು ಜೇಮಿಸನ್ ನೀಡಿಲ್ಲ. ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಂಬಿಕೆ ಉಳಿಸಿಕೊಳ್ಳಲು ನೀಳಕಾಯದ ವೇಗಿ ಎದುರು ನೋಡುತ್ತಿದ್ದಾರೆ. ಡೇನಿಯಲ್ ಕ್ರಿಶ್ಚಿಯನ್ ಬದಲಿಗೆ ಜೇಮಿಸನ್ ಇಂದು ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.
1011
10. ಮೊಹಮ್ಮದ್ ಸಿರಾಜ್: ಆರ್‌ಸಿಬಿ ತಂಡದ ವೇಗದ ಬೌಲಿಂಗ್ ಅಸ್ತ್ರ ಸಿರಾಜ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಪರಿಣಾಮಕಾರಿ ಬೌಲಿಂಗ್ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದಷ್ಟೇ ಅಲ್ಲದೇ ರನ್‌ವೇಗಕ್ಕೂ ಕಡಿವಾಣ ಹಾಕುತ್ತಿರುವುದು ಆರ್‌ಸಿಬಿ ಪಾಲಿಗೆ ಒಳ್ಳೆಯ ಬೆಳವಣಿಗೆ
1111
11. ಯುಜುವೇಂದ್ರ ಚಹಲ್: ಆರ್‌ಸಿಬಿ ತಂಡದ ಸ್ಪಿನ್ ಬೌಲಿಂಗ್ ಅಸ್ತ್ರ. ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ವಿಕೆಟ್ ಕಬಳಿಸಿಕೊಡಬಲ್ಲ ಚಹಲ್, ಉತ್ತಮ ಫಾರ್ಮ್‌ನಲ್ಲಿದ್ದು, ಮತ್ತೊಮ್ಮೆ ಮಿಂಚುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.