IPL 2021: ಪಂಜಾಬ್‌ಗೆ ಗಾಯದ ಮೇಲೆ ಬರೆ, ಇದ್ದಕ್ಕಿದ್ದಂತೆಯೇ ತಂಡದಿಂದ ಹೊರನಡೆದ ಕ್ರಿಸ್‌ ಗೇಲ್‌..!

First Published Oct 1, 2021, 9:46 AM IST

ದುಬೈ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಕೆ.ಎಲ್‌. ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್‌ (Punjab Kings) ತಂಡವು ಪ್ಲೇ ಆಫ್‌ಗೇರಲು ಪರದಾಡುತ್ತಿದೆ. ಇದೀಗ ದುಬೈನಲ್ಲಿಂದು ಕೋಲ್ಕತ ನೈಟ್‌ ರೈಡರ್ಸ್‌ (KKR) ಎದುರು ಕಾದಾಡಲು ಪಂಜಾಬ್‌ ಕಿಂಗ್ಸ್ ತಂಡ ಸಜ್ಜಾಗಿದೆ. ಹೀಗಿರುವಾಗಲೇ ಇದಕ್ಕಿದ್ದಂತೆಯೇ ಯೂನಿವರ್ಸಲ್‌ ಬಾಸ್ ಖ್ಯಾತಿಯ ಕ್ರಿಸ್‌ ಗೇಲ್ (Chris Gayle) ಪಂಜಾಬ್ ಕಿಂಗ್ಸ್‌ ತಂಡದಿಂದ ಹೊರ ನಡೆದಿದ್ದಾರೆ. ಅಷ್ಟಕ್ಕೂ ಕ್ರಿಸ್‌ ಗೇಲ್‌ ಮಹತ್ವದ ಪಂದ್ಯಕ್ಕೂ ಮುನ್ನ ಪಂಜಾಬ್ ತಂಡ ತೊರೆದಿದ್ದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವು ಪ್ಲೇ-ಆಫ್‌ಗೇರಲು ಹರಸಾಹಸ ಪಡುತ್ತಿದೆ. ಇದೀಗ ಕೋಲ್ಕತ ನೈಟ್‌ ರೈಡರ್ಸ್ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ.
 

ಒಂದು ವೇಳೆ ಇಂದು ನಡೆಯಲಿರುವ ಪಂದ್ಯದಲ್ಲಿ ಕೆಕೆಆರ್ ಎದುರು ಪಂಜಾಬ್ ಕಿಂಗ್ಸ್ ತಂಡವು ಸೋಲು ಕಂಡರೆ ರಾಹುಲ್‌ ಪಡೆ 14ನೇ ಆವೃತ್ತಿಯ ಐಪಿಎಲ್‌ ಪ್ಲೇ ಆಫ್‌ನಿಂದ ಬಹುತೇಕ ಹೊರಬಿದ್ದಂತೆಯೇ ಲೆಕ್ಕ. 

ಕೆ.ಎಲ್‌ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು 11 ಪಂದ್ಯಗಳನ್ನಾಡಿ 4  ಗೆಲುವು ಹಾಗೂ 7 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಪ್ಲೇ ಆಫ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಇನ್ನುಳಿದ 3 ಪಂದ್ಯಗಳಲ್ಲಿ ಭಾರೀ ಅಂತರದ ಗೆಲುವು ಸಾಧಿಸುವುದರ ಜತೆಗೆ ಇತರೆ ತಂಡಗಳ ಫಲಿತಾಂಶದ ಮೇಲೂ ಕಣ್ಣಿಡಬೇಕಿದೆ. 
 

ಮುಂಬೈ ಇಂಡಿಯನ್ಸ್‌ ವಿರುದ್ದ ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದ್ದ ಪಂಜಾಬ್‌ ತಂಡವು ಇದೀಗ ಕೆಕೆಆರ್ ಸವಾಲು ಸ್ವೀಕರಿಸಲು ಸಜ್ಜಾಗಿದೆ. ಹೀಗಿರುವಾಗಲೇ ಗಾಯದ ಮೇಲೆ ಬರೆ ಎನ್ನುವಂತೆ ಕ್ರಿಸ್‌ ಗೇಲ್‌ ಪಂಜಾಬ್ ಕಿಂಗ್ಸ್ ತಂಡದ ಬಯೋ ಬಬಲ್‌ ತೊರೆದು ಹೊರ ನಡೆದಿದ್ದಾರೆ.

ಕಠಿಣ ಬಯೋ ಬಬಲ್‌ನಿಂದ ಬೇಸತ್ತು 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ರಿಸ್‌ ಗೇಲ್‌ ಗುಡ್‌ ಬೈ ಹೇಳಿದ್ದಾರೆ. ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಕ್ರಿಸ್ ಗೇಲ್ ಲಭ್ಯವಿರುವುದಿಲ್ಲ ಎಂದು ಪಂಜಾಬ್ ಕಿಂಗ್ಸ್ ತಂಡವು ಟ್ವೀಟ್‌ ಮೂಲಕ ಮಾಹಿತಿ ನೀಡಿದೆ. 

Photo- iplt20.com

ಕಳೆದ ಕೆಲ ತಿಂಗಳಿಂದ ಐಪಿಎಲ್ ಸೇರಿದಂತೆ ವಿವಿಧ ಟೂರ್ನಿಗಳ ಕಠಿಣ ಬಯೋ ಬಬಲ್‌ನಲ್ಲಿದ್ದೇನೆ. ನಾನೀಗ ಮಾನಸಿಕವಾಗಿ ಸುಧಾರಿಸಿಕೊಳ್ಳುವ ಅಗತ್ಯವಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್ ತಂಡಕ್ಕೆ ನೆರವಾಗುವ ಉದ್ದೇಶದಿಂದ ವಿರಾಮ ಪಡೆಯುತ್ತಿದ್ದೇನೆ ಎಂದು ಗೇಲ್‌ ತಿಳಿಸಿದ್ದಾರೆ.

ಇದೇ ವೇಳೆ ಯೂನಿವರ್ಸಲ್‌ ಬಾಸ್ ಖ್ಯಾತಿಯ ಕ್ರಿಸ್‌ ಗೇಲ್‌ ಪಂಜಾಬ್‌ ಕಿಂಗ್ಸ್‌ನ ಮುಂದಿನ ಎಲ್ಲಾ ಪಂದ್ಯಗಳಿಗೂ ಶುಭ ಹಾರೈಕೆಗಳು ಎಂದು ತಿಳಿಸಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ಲೀಗ್‌ ಹಂತದಲ್ಲಿ ಇನ್ನೂ 3 ಪಂದ್ಯಗಳನ್ನಾಡಲಿದೆ.
 

ಇನ್ನು ಕ್ರಿಸ್‌ ಗೇಲ್‌ ತೆಗೆದುಕೊಂಡಿರುವ ನಿರ್ಧಾರವನ್ನು ಪಂಜಾಬ್‌ ಕಿಂಗ್ಸ್‌ ತಂಡದ ಕೋಚ್‌ ಅನಿಲ್‌ ಕುಂಬ್ಳೆ ಸ್ವಾಗತಿಸಿದ್ದು, ವಿಂಡೀಸ್ ದಿಗ್ಗಜ ಕ್ರಿಕೆಟಿಗ ತೆಗೆದುಕೊಂಡ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ

ಇನ್ನು ಕ್ರಿಸ್‌ ಗೇಲ್‌ ತೆಗೆದುಕೊಂಡಿರುವ ನಿರ್ಧಾರವನ್ನು ಪಂಜಾಬ್‌ ಕಿಂಗ್ಸ್‌ ತಂಡದ ಕೋಚ್‌ ಅನಿಲ್‌ ಕುಂಬ್ಳೆ ಸ್ವಾಗತಿಸಿದ್ದು, ವಿಂಡೀಸ್ ದಿಗ್ಗಜ ಕ್ರಿಕೆಟಿಗ ತೆಗೆದುಕೊಂಡ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ

ನಾನು ಕ್ರಿಸ್ ಗೇಲ್ ಎದುರು ಆಡಿದ್ದೇನೆ ಹಾಗೂ ಈಗ ಪಂಜಾಬ್‌ ತಂಡದಲ್ಲಿ ಅವರಿಗೆ ಕೋಚ್ ಆಗಿದ್ದೇನೆ. ಅವರೊಬ್ಬ ವೃತ್ತಿಪರ ಆಟಗಾರನೆಂದು ಕಳೆದ ಹಲವಾರು ವರ್ಷಗಳಿಂದ ಬಲ್ಲೆ. ಮುಂಬರುವ ಟಿ20 ವಿಶ್ವಕಪ್‌ಗೆ ಸಜ್ಜಾಗಲು ಅವರು ತೆಗೆದುಕೊಂಡ ತೀರ್ಮಾನವನ್ನು ಗೌರವಿಸುವುದಾಗಿ ಅನಿಲ್ ಕುಂಬ್ಳೆ ತಿಳಿಸಿದ್ದಾರೆ

ಕ್ರಿಸ್‌ ಗೇಲ್‌ ಬಯೋ ಬಬಲ್ ತೊರೆದರು ದುಬೈನಲ್ಲಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ. ಅಕ್ಟೋಬರ್ 17ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಕೆಲಕಾಲ ವಿಶ್ರಾಂತಿ ಪಡೆದು ವಿಂಡೀಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

click me!