K L Rahul ನನ್ನ ಅಳಿಯನಾಗಬೇಕು ಎಂದು ಮ್ಯಾನಿಫೆಸ್ಟ್‌ ಮಾಡಿದ್ದೆ: ಸುನಿಲ್ ಶೆಟ್ಟಿ

Published : Jun 21, 2025, 05:57 PM IST

ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ಅಳಿಯ, ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮುದ್ದಿನ ಅಳಿಯ ರಾಹುಲ್ ಬಗ್ಗೆ ಸುನಿಲ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

PREV
18

ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ಅಳಿಯ, ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮುದ್ದಿನ ಅಳಿಯ ರಾಹುಲ್ ಬಗ್ಗೆ ಸುನಿಲ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

28

ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ಹಾಗೂ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

48

ಇನ್ನು ಅನಿ ಪಾಡ್‌ಕಾಸ್ಟ್‌ನಲ್ಲಿ ಸುನಿಲ್ ಶೆಟ್ಟಿ, ತಮ್ಮ ಅಳಿಯ ಕೆ ಎಲ್ ರಾಹುಲ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ರಾಹುಲ್ ನನ್ನ ಅಳಿಯನಾಗಬೇಕು ಎಂದು ಮ್ಯಾನಿಫೆಸ್ಟ್‌ ಮಾಡಿದ್ದೆ ಎಂದಿದ್ದಾರೆ.

58

ನಾನು ಕೆ ಎಲ್ ರಾಹುಲ್ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ನಾನು ಅವರು ಕ್ರಿಕೆಟ್ ಆಡುವುದನ್ನು ಆರಂಭದಿಂದಲೇ ಗಮನಿಸುತ್ತಾ ಬಂದಿದ್ದೇನೆ.

68

ನಾನು ಕೂಡಾ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಬಯಸಿದ್ದೆ, ಆದರೆ ನನ್ನಲ್ಲಿ ಅಷ್ಟು ಟ್ಯಾಲೆಂಟ್ ಇರಲಿಲ್ಲ ಅನಿಸುತ್ತೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ರಾಜಕೀಯ ಕೂಡಾ ಹೆಚ್ಚೇ ಇದೆ. ಆದರೆ ನನಗೆ ಪ್ರತಿಭೆ ಗುರುತಿಸುವ ಸಾಮರ್ಥ್ಯವಿದೆ ಎಂದು ಶೆಟ್ಟಿ ಹೇಳಿದ್ದಾರೆ.

78

ರಾಹುಲ್ ದೇಶಕ್ಕಾಗಿ ಆಡುವುದನ್ನು ನೋಡಲು ಇಷ್ಟಪಡುತ್ತೇನೆ. ಇದರ ಜತೆಗೆ ಆತ ಮಂಗಳೂರು ಹುಡುಗ. ಹೀಗಾಗಿ ಆತ ಇನ್ನೂ ಸ್ಪೆಷಲ್ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.

88

ಕೆ ಎಲ್ ರಾಹುಲ್ ಸದ್ಯ ಭಾರತ ತಂಡದ ಜತೆಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಹುಲ್, ಈ ಟೆಸ್ಟ್ ಸರಣಿಯಲ್ಲಿ ಆರಂಭಿಕನಾಗಿ ಬಡ್ತಿ ಪಡೆದಿದ್ದಾರೆ.

Read more Photos on
click me!

Recommended Stories