WPL ಕಪ್ ಮಾತ್ರವಲ್ಲ, ಬಹುತೇಕ ಎಲ್ಲಾ ಪ್ರಶಸ್ತಿ ಗೆದ್ದ ನಮ್ಮ ಆರ್‌ಸಿಬಿ..! ಅದರಲ್ಲೂ ರೆಕಾರ್ಡ್

First Published Mar 18, 2024, 3:41 PM IST

ಬೆಂಗಳೂರು: ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ದಶಕಗಳ ಆರ್‌ಸಿಬಿ ಅಭಿಮಾನಿಗಳ ಕನಸನ್ನು ನನಸಾಗಿಸಿದೆ. ಈ ಸಂದರ್ಭದಲ್ಲಿ WPL ಕಪ್ ಮಾತ್ರವಲ್ಲದೇ ಬಹುತೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

ಎರಡನೇ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಡೆಲ್ಲಿ ಕ್ಯಾಪಿಟಲ್ಸ್ ಎದುರು 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. 

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದೂವರೆ ದಶಕದ ಬಳಿಕ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಐಪಿಎಲ್‌ನಲ್ಲಿ ಕಳೆದ 14 ವರ್ಷಗಳಿಂದ ಪುರುಷರ ತಂಡ ಮಾಡಲಾಗದ ಸಾಧನೆಯನ್ನು ಮಹಿಳಾ ತಂಡವು ಎರಡೇ ವರ್ಷದಲ್ಲಿ ಮಾಡಿ ತೋರಿಸಿದೆ.

ಇದೀಗ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಫಿ ಜತೆಗೆ 6 ಕೋಟಿ ರುಪಾಯಿ ನಗದು ಬಹುಮಾನ ತನ್ನದಾಗಿಸಿಕೊಂಡಿದೆ. ಇನ್ನು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡವು 3 ಕೋಟಿ ರುಪಾಯಿ ತನ್ನದಾಗಿಸಿಕೊಂಡಿತು.

ಆರೆಂಜ್ ಕ್ಯಾಪ್:

ಆರ್‌ಸಿಬಿ ತಂಡವು ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಲೈಸಿ ಪೆರ್ರಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಪೆರ್ರಿ 347 ರನ್ ಸಿಡಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು. ಜತೆಗೆ ಆರೆಂಜ್ ಕ್ಯಾಪ್ ಜತೆಗೆ 5 ಲಕ್ಷ ರುಪಾಯಿ ತಮ್ಮದಾಗಿಸಿಕೊಂಡರು.
 

ಪರ್ಪಲ್ ಕ್ಯಾಪ್

ಆರ್‌ಸಿಬಿ ತಂಡದ ಸ್ಪಿನ್ ಅಸ್ತ್ರ ಶ್ರೇಯಾಂಕ ಪಾಟೀಲ್, ಹಲವು ದಿಗ್ಗಜ ಬೌಲರ್‌ಗಳನ್ನು ಹಿಂದಿಕ್ಕೆ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು. ಕನ್ನಡತಿ ಶ್ರೇಯಾಂಕ ಪಾಟೀಲ್ 13 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಜತೆಗೆ 5 ಲಕ್ಷ ರುಪಾಯಿ ನಗದು ಬಹುಮಾನ ತಮ್ಮದಾಗಿಸಿಕೊಂಡರು.
 

ಉದಯೋನ್ಮುಖ ಆಟಗಾರ್ತಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಪ್ರತಿಭೆ ಶ್ರೇಯಾಂಕ ಪಾಟೀಲ್ ಎರಡನೇ ಆವೃತ್ತಿಯ WPL ಟೂರ್ನಿಯ ಉದಯೋನ್ಮುಖ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಇದರ ಜತೆಗೆ 5 ಲಕ್ಷ ರುಪಾಯಿ ನಗದು ಬಹುಮಾನ ತಮ್ಮದಾಗಿಸಿಕೊಂಡರು.
 

ಫೇರ್ ಪ್ಲೇ ಅವಾರ್ಡ್ ಆರ್‌ಸಿಬಿ ಪಾಲು:

ಇನ್ನು ಮೊದಲ ಪಂದ್ಯದಿಂದಲೂ ಆರ್‌ಸಿಬಿ ತಂಡವು ಶಿಸ್ತುಬದ್ಧವಾಗಿ ಹಾಗೂ ಕ್ರೀಡಾಸ್ಪೂರ್ತಿಯಿಂದ ಆಡುವ ಮೂಲಕ ಫೇರ್ ಪ್ಲೇ ಅವಾರ್ಡ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
 

ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್:

ಇನ್ನು ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಅತಿ ಅಮೂಲ್ಯ ಆಟಗಾರ್ತಿ ಎನ್ನುವ ಪ್ರಶಸ್ತಿಗೆ ಯುಪಿ ವಾರಿಯರ್ಸ್ ತಂಡದ ಆಲ್ರೌಂಡರ್ ದೀಪ್ತಿ ಶರ್ಮಾ ತಮ್ಮದಾಗಿಸಿಕೊಂಡರು. ಈ ಮೂಲಕ 5 ಲಕ್ಷ ರುಪಾಯಿ ನಗದು ತಮ್ಮದಾಗಿಸಿಕೊಂಡರು.
 

click me!