ಜಗತ್ತಿನ ಟಾಪ್ 10 ಬ್ಯೂಟಿಫುಲ್ ಮಹಿಳಾ ಕ್ರಿಕೆಟಿಗರು ಯಾರು? ಎಲಿಸಾ ಪೆರ್ರಿ, ಸ್ಮೃತಿ ಮಂದಾನ ಸ್ಥಾನವೆಷ್ಟು ಗೊತ್ತಾ?

Published : Mar 17, 2024, 07:49 PM IST

ಬೆಂಗಳೂರು (ಮಾ.17): ಜಗತ್ತಿನ ಮಹಿಳಾ ಕ್ರಿಕೆಟಿಗರ ಪೈಕಿ ಟಾಪ್‌ 10 ಸುಂದರ ಕ್ರೀಡಾಪಟುಗಳನ್ನು ಇಲ್ಲಿ ಗುರುತಿಸಲಾಗಿದೆ. ಇದರಲ್ಲಿ ಭಾರತದ ಸ್ಮೃತಿ ಮಂದಾನ, ಪ್ರಿಯಾ ಪೂನಿಯಾ, ಹರ್ಲೀನ್ ಡಿಯೋಲ್ ಕೂಡ ಸ್ಥಾನ ಪಡೆದಿದ್ದಾರೆ. ಅದರಲ್ಲಿ ಆರ್‌ಸಿಬಿಯ ಶ್ರೇಷ್ಠ ಆಟಗಾರ್ತಿ ಎಲಿಸಾ ಪೆರ್ರಿ ಹಾಗೂ ಸ್ಮೃತಿ ಮಂದಾನ ಎಷ್ಟನೇ ಸ್ಥಾನದಲ್ಲಿದ್ದಾರೆ ನೀವೇ ನೋಡಿ...

PREV
112
ಜಗತ್ತಿನ ಟಾಪ್ 10 ಬ್ಯೂಟಿಫುಲ್ ಮಹಿಳಾ ಕ್ರಿಕೆಟಿಗರು ಯಾರು? ಎಲಿಸಾ ಪೆರ್ರಿ, ಸ್ಮೃತಿ ಮಂದಾನ ಸ್ಥಾನವೆಷ್ಟು ಗೊತ್ತಾ?

ಪಾಕಿಸ್ತಾನದ ಸನಾ ಮಿರ್ ಕ್ರಿಕೆಟ್ ಜಗತ್ತಿನ ಟಾಪ್ 10 ಸುಂದರಿಯರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಇವರಿಗೆ ಪಾಕಿಸ್ತಾನ, ದುಬೈ, ಕುವೈತ್, ಅಫ್ಘಾನಿಸ್ತಾನ, ಬಾರತ ಸೇರಿ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ.
 

212

ಕ್ರಿಕೆಟ್ ಲೋಕದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಆಸ್ಟ್ರೇಲಿಯಾ ತಂಡದಲ್ಲಿ ಹೋಲಿ ಲೀ ಫೆರ್ಲಿಂಗ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರು ಕ್ರಿಕೆಟ್ ವುಮೆನ್ಸ್ ಬ್ಯೂಟಿಗಳ ಪೈಕಿ 9ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
 

312

ಆಸ್ಟ್ರೇಲಿಯಾದ ಮತ್ತೊಬ್ಬ ಸುಂದರ ಮಹಿಳಾ ಕ್ರೀಡಾಪಟು ಕೈನತ್ ಇಮ್ತಿಯಾಜ್ ಕೂಡ ತನ್ನ ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಇವರು 8ನೇ ಸ್ಥಾನದಲ್ಲಿದ್ದಾರೆ.
 

412

ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರ್ತಿಯಾಗಿರುವ ಅಮೆಲಿಯಾ ಕೆರ್ ಅವರು ಸುಂದರ ಮಹಿಳಾ ಕ್ರಿಕೆಟರ್ಸ್ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ತಂಡದಲ್ಲಿ ಆಡುತ್ತಿದ್ದಾರೆ.
 

512

ಭಾರತೀಯ ಮಹಿಳಾ ಕ್ರಿಕೆಟ್‌ನ ಭರವಸೆಯ ಆಟಗಾರ್ತಿಯಾದ ಪ್ರಿಯಾ ಪುನಿಯಾ ಕೂಡ ಟಾಪ್‌ 10 ಸುಂದರ ಆಟಗಾರ್ತಿಯರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಇವರಿಗೆ 6ನೇ ಸ್ಥಾನ ನೀಡಲಾಗಿದೆ.
 

612

ಜಗತ್ತಿನ ಶ್ರೇಷ್ಠ ಮಹಿಳಾ ಕ್ರಿಕೆಟಿಗರ ಪೈಕಿ ಸುಂದರ ನಗುವನ್ನು ಹೊಂದಿರುವ ಆಟಗಾರ್ತಿ ಸೋಫಿ ಮುನ್ರೋ ಆಗಿದ್ದಾರೆ. ಇಂಗ್ಲೆಂಡ್ ತಂಡದ ಸೋಫಿ ಸುಂದರ ಮಹಿಳಾ ಕ್ರಿಕೆಟಿಗರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾಳೆ.
 

712

ಭಾರತದ ಮತ್ತೊಬ್ಬ ಭರವಸೆಯ ಆಟಗಾರ್ತಿ ಆಗಿರುವ ಹರ್ಲೀನ್ ಡಿಯೋಲ್ ಕೂಡ ಕೋಟ್ಯಂತರ ಅಭಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಇವರು ಆಕ್ಟೀವ್ ಆಗಿದ್ದಾರೆ. 
 

812

ಆಸ್ಟ್ರೇಲಿಯಾದ ಸ್ಟಾರ್ ಮಹಿಳಾ ಕ್ರಿಕೆಟರ್ ಎಲೈಸಿ ಪೆರ್ರಿ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುತ್ತಿದ್ದು, ಸತತವಾಗಿ 2 ಪಂದ್ಯ ಗೆಲ್ಲಿಸಿದ್ದಾರೆ. ಇವರಿಗೆ ಇಡೀ ಕರ್ನಾಟಕ ಸೇರಿದಂತೆ ಕ್ರಿಕೆಟ್ ಲೋಕದ ಕೋಟ್ಯಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸುಂದರಿಯರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ.
 

912

ಇನ್ನು ಇಂಗ್ಲೆಂಡ್‌ ಕ್ರಿಕೆಟ್‌ನ ಸ್ಟಾರ್ ಆಟಗಾರ್ತಿ ಸಾರಾ ಟೈಲರ್ ಸುಂದರಿಯರ ಪೈಕಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ತಮ್ಮ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟು ವಿವಾದಕ್ಕೆ ಈಡಾಗಿದ್ದರು. ಆದರೆ, ಯುರೋಪಿಯನ್‌ ದೇಶಗಳಲ್ಲಿ ಇದೇನು ದೊಡ್ಡ ಅಪರಾಧವಲ್ಲ ಬಿಡಿ.
 

1012

ಎಲ್ಲರ ಹೆಸರೂ ಬಂತು ನಮ್ಮ ಭಾರತ ಮಹಿಳಾ ಕ್ರಿಕೆಟ್ ತಂಡದ ಕ್ರಶ್ ಖ್ಯಾತಿ ಸ್ಮೃತಿ ಮಂದಾನ ಅವರು ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ? ಜಗತ್ತಿನ ಬ್ಯೂಟಿಫುಲ್ ಮಹಿಳಾ ಕ್ರಿಕೆಟಿಗರ ಪೈಕಿ ಸ್ಮೃತಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
 

1112

ಭಾರತದಲ್ಲಿ ನಡೆಯುತ್ತಿರುವ ಐಪಿಎಲ್‌ನ ಆರ್‌ಸಿಬಿ ತಂಡದಲ್ಲಿ ಆಟವಾಡುತ್ತಿರುವ ಕನ್ನಡದ ಹುಡುಗಿ ಶ್ರೇಯಾಂಕಾ ಪಾಟೀಲ್ ಕೂಡ ಕರ್ನಾಟಕದ ಕ್ರಶ್ ಆಗಿದ್ದಾಳೆ. ಇವರು ಟಾಪ್‌ 10 ಸುಂದರಿಯರ ಪೈಕಿ ಸ್ಥಾನ ಗಿಟ್ಟಿಸಿಕೊಳ್ಳದಿದ್ದರೂ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.
 

1212

ಇನ್ನು ಜಗತ್ತಿನ ಮಹಿಳಾ ಕ್ರಿಕೆಟಿಗರನ್ನು ಒಟ್ಟುಗೂಡಿಸಿ ಟಾಪ್ 10 ಸ್ಥಾನಗಳನ್ನು ಕೊಟ್ಟಿರುವುದು ಯಾವುದೇ ಒಂದು ಅಧಿಕೃತ ಸಂಸ್ಥೆಯಲ್ಲ. ಸಾಮಾಜಿಕ ಜಾಲತಾಣದ ಫ್ಯಾಕ್ಟ್ ಆಫ್ಕ್ ( facts_afk ) ಖಾತೆಯಿಂದ ಸ್ಥಾನವನ್ನು ನೀಡಲಾಗಿದೆ.

Read more Photos on
click me!

Recommended Stories